ಬೆಂಡೋಲೆ ನುಂಗಿದ ಹುಂಜ ಕಬಾಬ್ ಫ್ರೈ ಆದ ಕಥೆಯಿದು..

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 24: ಕೋಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ, ಕೋಡಗನ ಕೋಳಿ ನುಂಗಿತ್ತಾ ಎಂಬ ಶಿಶುನಾಳ ಶರೀಫರ ಈ ಸಾಲು ಕೇಳದವರಿಲ್ಲ. ನುಂಗಿದ ಘಟನೆಯೇನೋ ನಡೆದಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕೋಳಿ ನುಂಗಿದ್ದೇ ಬೇರೆ, ಆ ನಂತರ ನಡೆದಿದ್ದೇ ಬೇರೆ.

ಇದು ತಣ್ಣೀರುಬಾವಿ ಮುಳುಗುತಜ್ಞರ ತಂಡದ ಕಣ್ಣೀರ ಕಥೆ...

ಕಿವಿಯ ಬೆಂಡೋಲೆ ನುಂಗಿದ ಕೋಳಿಯೊಂದು ಕಬಾಬ್ ಫ್ರೈ ಆದ ಸ್ವಾರಸ್ಯಕರ ಘಟನೆಯಿದು. ಇಂಥದೊಂದು ಸ್ವಾರಸ್ಯಕರ ಘಟನೆ ನಡೆದದ್ದು ಪುತ್ತೂರಿನ ತೆಂಕಿಲ ಎಂಬಲ್ಲಿ. ತೆಂಕಿಲದ ಮನೆಯೊಡತಿಯೊಬ್ಬರು ತನ್ನ ಹೆಂಟೆಯೊಂದು ಹುಂಜಗಳಿದ್ದ ಗೂಡಿನೊಳಗೆ ನುಗ್ಗಿದಾಗ ಅದನ್ನು ತೆಗೆಯಲು ಪ್ರಯತ್ನಿಸಿದ್ದಾರೆ.

Cock become Kabab fry after swallow gold ear ring

ಮಹಿಳೆಯು ಗೂಡಿನೊಳಗೆ ತಲೆ ಹಾಕಿದ್ದನ್ನು ಗಮನಿಸಿದ ಹುಂಜವೊಂದು ಮಹಿಳೆಯ ಬೆಂಡೋಲೆಯನ್ನೇ ಕುಕ್ಕಿ ತಿಂದಿದೆ. ಕಿವಿ ನೋವಿನಿಂದ ಕಿರುಚಿದ ಮಹಿಳೆಯ ಧ್ವನಿ ಕೇಳಿ ಮನೆಯವರು ವಿಚಾರಿಸಿದಾಗ ಹುಂಜ ಕಿವಿಯ ಬೆಂಡೋಲೆ ನುಂಗಿದ ಘಟನೆ ವಿವರಿಸಿದ್ದಾರೆ.

ಸುಮಾರು ಏಳೆಂಟು ಕಿಲೋ ತೂಕದ ಹುಂಜದ ಹೊಟ್ಟೆಯಿಂದ ಚಿನ್ನದ ಬೆಂಡೋಲೆಯನ್ನು ಹೇಗೆ ತೆಗೆಯುವುದು ಎಂದು ಚಿಂತೆಯಲ್ಲಿದ್ದ ಮನೆಮಂದಿಗೆ ಕೊನೆಗೆ ಹೊಳೆದದ್ದು ಹುಂಜನನ್ನು ಮಟಾಶ್ ಮಾಡುವ ಐಡಿಯಾ.

ರೈತರ ಆತ್ಮಹತ್ಯೆ ತಡೆಗೆ ಶ್ರಮಿಸುತ್ತಿದ್ದಾನೆ ಈ ವಿದೇಶಿ ಯುವಕ!

ತಡ ಮಾಡದ ಮನೆಮಂದಿ ಸೇರಿ ಹುಂಜನನ್ನು ಕಬಾಬ್ ಮಾಡಿದ್ದಲ್ಲದೆ, ಚಿನ್ನದ ಬೆಂಡೋಲೆ ಮತ್ತೆ ಮಹಿಳೆಯ ಕಿವಿ ಸೇರಿಸುವ ಮೂಲಕ ಬೆಂಡೋಲೆ ಕೋಳಿ ನುಂಗಿತ್ತಾ ಪ್ರಕರಣ ಸುಖಾಂತ್ಯಗೊಂಡಿದೆ.

ಮನೆಯೊಡತಿಯ ಬೆಂಡೋಲೆ ನುಂಗಿದ ತಪ್ಪಿಗೆ ಹುಂಜ ಕಬಾಬ್ ಫ್ರೈ ಆಗಬೇಕಾಯಿತು. ಈ ವಿಚಾರವನ್ನು ಮನೆಯೊಡೆಯ ಬೇರೊಬ್ಬರಲ್ಲಿ ಹಂಚಿಕೊಂಡ ಸಂದರ್ಭದಲ್ಲಿ ಈ ಘಟನೆ ಒನ್ಇಂಡಿಯಾ ಕನ್ನಡದ ಕಿವಿಗೂ ಬಿದ್ದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cock become Kabab fry after swallow gold year ring of woman in Tenkila, Puttur, Dakshina Kannada district. It is very interesting story and you can enjoy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ