ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊತ್ತಿ ಉರಿದ ಕರಾವಳಿ ಕಾವಲು ಪೊಲೀಸ್‌ ಪಡೆ ಬೋಟ್‌

|
Google Oneindia Kannada News

ಮಂಗಳೂರು, ಡಿ.5 : ಕರಾವಳಿ ಕಾವಲು ಪೊಲೀಸ್‌ ಪಡೆಯ ಕಣ್ಗಾವಲು ಇಂಟರ್‌ಸೆಪ್ಟರ್‌ ದೋಣಿ ಬೆಂಕಿಗೆ ಆಹುತಿಯಾಗಿದ್ದರಿಂದ ಸುಮಾರು 2 ಕೋಟಿ ನಷ್ಟವಾಗಿದೆ. 2010ರಲ್ಲಿ ಮಂಗಳೂರು ಕರಾವಳಿ ಠಾಣೆಗೆ ಸೇರ್ಪಡೆಗೊಂಡಿದ್ದ ಈ ದೋಣಿ ಬೆಂಕಿಗಾಹುತಿಯಾಗಿ ಶೇ 90ರಷ್ಟು ಸುಟ್ಟು ಕರಕಲಾಗಿದೆ.

ಗುರುವಾರ ಬೆಳಗ್ಗೆ 8 ಗಂಟೆಯಿಂದ ಸಮುದ್ರದಲ್ಲಿ ಕಣ್ಗಾವಲು ನಡೆಸಲು ಕೆಆರ್‌ 035 ಸಂಖ್ಯೆಯ ದೋಣಿಯನ್ನು ಪೊಲೀಸರು ಬಳಸಿದ್ದರು. ಮಧ್ಯಾಹ್ನ 2 ಗಂಟೆಗೆ ಬೆಂಗ್ರೆ ಬಳಿ ದೋಣಿಯನ್ನು ನಿಲ್ಲಿಸಲಾಗಿತ್ತು. ಸಿಬ್ಬಂದಿ ಊಟ ಮಾಡುತ್ತಿರುವಾಗ ದೋಣಿ ಇಟ್ಟ ಸ್ಥಳದಲ್ಲಿ ದಟ್ಟ ಹೊಗೆ ಕಂಡು ಬಂದಿತ್ತು. [ಮಂಗಳೂರು ಬಸ್ ದುರಂತದ ಚಿತ್ರಗಳು]

ತಕ್ಷಣ ಸ್ಥಳಕ್ಕೆ ತೆರಳಿದ್ದ ಸಿಬ್ಬಂದಿಗಳಿಗೆ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ತಿಳಿದುಬಂದಿತ್ತು. ಕರಾವಳಿ ಕಾವಲು ಪಡೆಯ ಸಿಬ್ಬಂದಿ ಮತ್ತೂಂದು ಸಣ್ಣ ದೋಣಿ ಬಳಸಿ ಬೆಂಕಿ ನಂದಿಸಲು ಪ್ರಯತ್ನ ನಡೆಸಿದರು ಮತ್ತು ಎನ್‌ಎಂಪಿಟಿ ಹಾಗೂ ಮಂಗಳೂರು ಅಗ್ನಿ ಶಾಮಕದಳಕ್ಕೆ ಕರೆ ಮಾಡಿದ್ದರು. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]

ಆದರೆ, ಬೆಂಕಿ ನಂದಿಸಿದ ನಂತರ ದೋಣಿ ಶೇ 90ರಷ್ಟು ಬೆಂಕಿಗೆ ಆಹುತಿಯಾಗಿರುವುದು ತಿಳಿದುಬಂದಿದೆ. 2010ರಲ್ಲಿ ಮಂಗಳೂರು ಕರಾವಳಿ ಠಾಣೆಗೆ ಕೆಆರ್‌ 035 ಸಂಖ್ಯೆಯ ಈ ದೋಣಿಯನ್ನು ಸೇರ್ಪಡೆಗೊಂಡಿತ್ತು. ಎರಡು ಇಂಜಿನ್‌ನ ಈ ದೋಣಿಯಲ್ಲಿ 18 ಸಿಬ್ಬಂದಿ ಪ್ರಯಾಣಿಸುತ್ತಿದ್ದರು.

Boat

ಮಂಗಳೂರು ನಗರ ಪೊಲೀಸ್ ಆಯುಕ್ತ ಆರ್‌. ಹಿತೇಂದ್ರ, ಪಣಂಬೂರು ಎಸಿಪಿ ರವಿಕುಮಾರ್‌ ಮುಂತಾದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
A coastal security police boat caught fire at Tannirbhavi beach in Mengaluru on Thursday. Boat was used for patrolling the beach from 8 am to 2 pm. The reason of the fire is said to be short circuit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X