ತುಂಬೆ ಡ್ಯಾಂನಲ್ಲಿ ನೀರು ಇಳಿಕೆ: ಕರಾವಳಿಯಲ್ಲೂ ಜಲಕ್ಷಾಮ..?

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮಾರ್ಚ್ 13 : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರನ್ನು ಪೂರೈಸುವ ತುಂಬೆ ಅಣೆಕಟ್ಟಿನಲ್ಲಿ ಈಗಾಗಲೇ ನೀರು ಕಡಿಮೆಯಾಗುತ್ತಿದ್ದು, ಮಂಗಳೂರಿನಲ್ಲೂ ಜಲಕ್ಷಾಮ ಉಂಟಾಗುವ ಭೀತಿ ಆರಂಭವಾಗಿದೆ.

ಸದ್ಯ ತುಂಬೆ ಅಣೆಕಟ್ಟಿನಲ್ಲಿ ನಗರಕ್ಕೆ 25 ದಿನ ಸಾಕಾಗುವಷ್ಟು, ಅಂದರೆ 4.5 ಮೀಟರ್ ನೀರು ಮಾತ್ರ ಇದೆ. ಸದರಿ ಅಣೆಕಟ್ಟಿನಲ್ಲಿ 5 ಮೀಟರ್‌ವರೆಗೆ ನೀರು ಸಂಗ್ರಹಿಸಬಹುದು. ನೇತ್ರಾವತಿ ನದಿ ನೀರಿನ ಒಳಹರಿವು ಸ್ಥಗಿತಗೊಂಡಿದೆ. ತುಂಬೆಯಿಂದ ಪ್ರತಿದಿನ 220 ಎಂಎಲ್ ಡಿಗಿಂತಲೂ ಹೆಚ್ಚಿನ ನೀರನ್ನು ಉಪಯೋಗಿಸಲಾಗುತ್ತಿದೆ. ಅಂದರೆ ದಿನಕ್ಕೆ 160 ಎಂಎಲ್ಡಿ ನೀರು ಇಲ್ಲಿಂದ ಪೂರೈಕೆಯಾಗುತ್ತಿದೆ. ಕೃಷಿ ಹಾಗೂ ತೋಟಗಳ ಬಳಕೆಗೆ, ಮಂಗಳೂರು ವಿವಿ, ಇನ್ಪೋಸಿಸ್ , ಏತ ನೀರಾವರಿ ಘಟಕ ಸೇರಿದಂತೆ ಬೇರೆ ಬೇರೆ ಕಾರಣಗಳಿಗೆ ನೀರಿನ ಬೇಡಿಕೆ ಹೆಚ್ಚುತ್ತಿದೆ. ಇದರಿಂದಾಗಿ ಹೆಚ್ಚಿನ ನೀರು ತುಂಬೆ ಅಣೆಕಟ್ಟಿನಿಂದ ಹೊರಹೋಗುತ್ತಿದೆ. ನೀರಿನ ಒಳಹರಿವು ಸದ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ನೀರಿನ ಸಮಸ್ಯೆ ಉಂಟಾಗುವ ಸೂಚನೆ ಸಿಕ್ಕಂತಾಗಿದೆ.[ತುಮಕೂರಿನಲ್ಲಿ ಕುಡಿಯುವ ನೀರು ಯೋಜನೆಗೆ ಮುತ್ತಪ್ಪ ರೈ ಚಾಲನೆ]

Coastal District Mangaluru will face water crisis soon

ಸಮಸ್ಯೆ ಇರುವುದು ನಿಜ, ಆದರೆ ಕುಡಿಯುವ ನೀರಿನ ಪೂರೈಕೆಯನ್ನು ಕಡಿಮೆ ಮಾಡಲು ನಿರ್ಧರಿಸಿಲ್ಲ, 45 ದಿನ ಕಳೆದ ಮೇಲೆ ನೀರಿನ ಸಮಸ್ಯೆ ಬಂದರೂ ಎದುರಿಸಲು ಸಿದ್ಧ ಎಂದು ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಕವಿತಾ ಹೇಳಿದ್ದಾರೆ.[ಮೂಡಬಿದಿರೆಯಲ್ಲಿ ಕುಸಿಯುತ್ತಿರುವ ಅಂತರ್ಜಲ, ಬೇಸಿಗೆ ಭೀಕರ]

ಸದ್ಯದ ಪ್ಲಾನ್ ಏನು..?

ಸದ್ಯ ಎರಡೂ ಅಣೆಕಟ್ಟಿನಲ್ಲಿ ಲಭ್ಯವಿರುವ ನೀರನ್ನು ಕುಡಿಯುವುದಕ್ಕಾಗಿ ಮಾತ್ರವೇ ಬಳಸಲಾಗುವುದು. ಕಟ್ಟಡ ನಿರ್ಮಾಣ ಮಾಡುವವರು ಈ ನೀರನ್ನ ಬಳಸುವಂತಿಲ್ಲ. ಇನ್ನುಮುಂದಿನ ದಿನಗಳಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಯನ್ನು ಪರಿಹರಿಸಲು ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ನಗರದಲ್ಲಿ ಲಭ್ಯವಿರುವ ಸಾರ್ವಜನಿಕ ಬಾವಿ, ಬೋರ್‌ವೆಲ್ ಗಳ ಸ್ಥಿತಿಗತಿ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.[ಕಾವೇರಿ ಜನಿಸುವ ಕೊಡಗಿನ ಜನರು ನೀರಿಗಾಗಿ ಪಡುವ ಪಾಡಿದು]

Coastal District Mangaluru will face water crisis soon

ಮುಂದಿನ ವಾರ ಈ ಬಗ್ಗೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶಾಸಕರು, ಮನಪಾದ ಹಿರಿಯ ಸದಸ್ಯರು, ಅಧಿಕಾರಿಗಳ ಸಭೆ ನಡೆಸಿ ನೀರಿನ ಪ್ರಮಾಣ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ನೀರು ಪೂರೈಕೆಯನ್ನು ಮಿತಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru Coastal District Mangalore will face water crisis soon sources told. Water for areas under Mangaluru Muncipal Adminstartion is supplying from Tumbe dam. But now water in the dam is decreasing.
Please Wait while comments are loading...