ರಾಜ್ಯ ಸರ್ಕಾರದ ವಿರುದ್ಧ ಕರಾವಳಿ ಕ್ರೈಸ್ತರು ಗರಂ-ಟಿಪ್ಪುಸುಲ್ತಾನ ಜಯಂತಿಗೆ ಆಕ್ರೋಶ

Posted By:
Subscribe to Oneindia Kannada

ಮಂಗಳೂರು,ನವೆಂಬರ್ 09 : ಟಿಪ್ಪು ಜಯಂತಿ ಆಚರಿಸುವ ಮೂಲಕ ಟಿಪ್ಪುವಿನ ಕ್ರೌರ್ಯದಿಂದ ಸಂತ್ರಸ್ತರಾದ ಕೆನರಾ ಕ್ರೈಸ್ತ ಸಮುದಾಯದವರ ಗಾಯಗಳಿಗೆ ಉಪ್ಪು ಎರಚುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಕೆನರಾ ಕ್ರೈಸ್ತ ಸಂತ್ರಸ್ತರ ಸಮಿತಿಯ ಸಂಚಾಲಕ ರಾಬಟ್F ರೊಸಾರಿಯೋ ಕಿಡಿಕಾರಿದ್ದಾರೆ.

In Pics : ಟಿಪ್ಪು ಸುಲ್ತಾನ್ ಯಾರಂತ ಗೊತ್ತಾ ಪುಟ್ಟಾ?

ಟಿಪ್ಪುವಿನ ಕ್ರೌರ್ಯಕ್ಕೆ ಗುರಿಯಾಗಿ ನಲುಗಿಹೋಗಿರುವ ಕ್ರೈಸ್ತರ ಭಾವನೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸದೇ ಹಠಮಾರಿತನ ತೋರಿ ಟಿಪ್ಪು ಜಯಂತಿ ಆಚರಿಸುತ್ತಿದೆ ಎಂದು ಮಂಗಳೂರಿನಲ್ಲಿ ಮಂಗಳೂರಿನಲ್ಲಿ ಗುರುವಾರ (ನ.೦೯)ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

Coastal Christians turned red faces,outrage on Tipu Jayanti celebration

ಕೆನರಾ ಕ್ರೈಸ್ತರ ಮೇಲೆ ಟಿಪ್ಪು ನಡೆಸಿದ ದೌರ್ಜನ್ಯದ ಬಗ್ಗೆ ದಾಖಲೆಗಳಿವೆ. ಟಿಪ್ಪು ಕ್ರೌರ್ಯಕ್ಕೆ ಬಲಿಯಾದವರ ಬಗ್ಗೆ ಮಹಾ ಪ್ರಬಂಧ ಬರೆದು ಕ್ರೈಸ್ತ ಧರ್ಮ ಗುರುಗಳೇ ಪಿಎಚ್.ಡಿ ಪಡೆದಿದ್ದಾರೆ ಎಂದು ತಿಳಿಸಿದರು.ಟಿಪ್ಪುವಿನ ಕ್ರೌರ್ಯ ಕಟ್ಟುಕತೆಯಲ್ಲ, ಅತ್ಯಘಟನೆ ಎಂದು ಹೇಳಿದ ಅವರು ಕೆನರಾ ಕ್ರೈಸ್ತರ ಬಂಧನ, ಹತ್ಯಾಕಾಂಡದ ಬಗ್ಗೆ ಇತಿಹಾಸ ದಾಖಲೆಗಳನ್ನು ಆಧರಿಸಿ ಚಲನಚಿತ್ರ ನಿರ್ಮಿಸುವುದಾಗಿ ಹೇಳಿದ ಅವರು ಕ್ರೈಸ್ತ ಸಮುದಾಯದ ಸದಸ್ಯರಿಂದ ಚಂದಾ ಎತ್ತಿ ಚಲನಚಿತ್ರ ನಿರ್ಮಿಸುವುದಾಗಿ ಸ್ಪಷ್ಟಪಡಿಸಿದರು.

Coastal Christians turned red faces,outrage on Tipu Jayanti celebration

ಟಿಪ್ಪುವಿನ ಕ್ರೌರ್ಯಕ್ಕೆ ಒಳಗಾದ ಕೆನರಾ ಕ್ರೈಸ್ತ ಸಮುದಾಯದಿಂದಲೇ ಬಂದಿರುವ ಶಾಸಕ ಜೆ.ಆರ್ ಲೊಬೊ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ದುಃಖತಪ್ತ ಸಮುದಾಯದ ಜತೆ ನಿಲ್ಲದೆ ಹತ್ಯಾಕಾಂಡ ನಡೆಸಿದ ಟಿಪ್ಪುವನ್ನು ವಿಜೃಂಬಿಸುತ್ತಿರುವ ಸರ್ಕಾರದ ಜತೆ ನಿಂತಿರುವುದು ದುರಂತ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Coastal Christians turned red faces,outrage on Tipu Jayanti celebration

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP along with Hindu organisations pretesting against Government decision on Tipu Jayanti celebration. Now christians are jumped into this debate.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ