ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ರೈಸಿಂಗ್ ಡೇ ಆಚರಿಸುತ್ತಿರುವ ಕರಾವಳಿ ಭದ್ರತಾಪಡೆ

By Vanitha
|
Google Oneindia Kannada News

ಮಂಗಳೂರು,ಫೆಬ್ರವರಿ,01: ಕರ್ನಾಟಕದ ಭಾರತೀಯ ಕರಾವಳಿ ಭದ್ರತಾಪಡೆ (ಐಸಿಜಿ) ಫೆಬ್ರವರಿ ೧ರಂದು 'ರೈಸಿಂಗ್ ಡೇ' ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕಳುವಾಗಿದ್ದ ಮೀನುಗಾರರ ದೋಣಿ ಹುಡುಕಿಕೊಟ್ಟ ಭಾರತೀಯ ಕರಾವಳಿ ಹಡಗು ಕಸ್ತೂರ ಬಾ ಗಾಂಧಿ ಹಡಗು ಶ್ಲಾಘನೆಗೆ ಒಳಗಾಯಿತು.

ಮೂರು ನಾಲ್ಕು ಅಡಿ ಎತ್ತರದ ಸಮುದ್ರದ ಅಲೆಯ ಎತ್ತರಕ್ಕೆ ತಲೆಕೆಡಿಸಿಕೊಳ್ಳದ ಕಸ್ತೂರ ಬಾ ಗಾಂಧಿ ಹಡಗು 20 ನಿಮಿಷದಲ್ಲಿ 10 ಜನ ಮೀನುಗಾರರ ಪ್ರಾಣ ಉಳಿಸಿದ ಖ್ಯಾತಿಗೆ ಒಳಗಾಗಿದೆ ಎಂದು ಕರ್ನಾಟಕ ಭಾರತೀಯ ಕರಾವಳಿ ಭದ್ರತಾಪಡೆ (ಐಸಿಜಿ) ಅಧಿಕಾರಿಗಳು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಕಸ್ತೂರ ಬಾ ಗಾಂಧಿ ಹಡಗು ಮೀನುಗಾರರನ್ನು ಜೀವಂತವಾಗಿ ಕರೆತರುವಲ್ಲಿ ಯಶಸ್ವಿಯಾಯಿತು. ಆದರೆ ಅವರ ಸರಕು, ಪದಾರ್ಥಗಳು ಮಾತ್ರ ಸಮುದ್ರ ಪಾಲಾದವು. ಮೀನು ಹಿಡಿಯುವ ಬಲೆ ಪ್ರೊಪೆಲರ್ ಗೆ ಸಿಕ್ಕಿ ಹಾಕಿಕೊಂಡ ಪರಿಣಾಮ ಈ ಅವಘಡ ಸಂಭವಿಸಿತು. ಆದರೆ ಮೀನುಗಾರರ ಬದುಕಿಗೆ ಆಶಾಕಿರಣವಾಯಿತು ಎಂದು ಹೆಮ್ಮೆ ವ್ಯಕ್ತಪಡಿಸಿದರು.[ಕೋಸ್ಟ್ ಗಾರ್ಡ್ ಡಿಐಜಿ ವಿರುದ್ಧ ತನಿಖೆಗೆ ಆದೇಶ]

ಬನ್ನಿ ಕರ್ನಾಟಕದ ಐಸಿಜಿ (ಇಂಡಿಯನ್ ಕೋಸ್ಟಲ್ ಗಾರ್ಡ್) ಹೇಗಿದೆ? ಯಾವುದಕ್ಕೆ ಹೆಚ್ಚು ಗಮನ ಕೊಡುತ್ತದೆ ಇನ್ನಿತರ ಕೆಲವು ಮಾಹಿತಿ ಇಲ್ಲಿದೆ ನೋಡಿ

ಕರ್ನಾಟಕ ಕರಾವಳಿ ಭದ್ರತಾ ಪಡೆ ಕಚೇರಿ ಎಲ್ಲಿದೆ?

ಕರ್ನಾಟಕ ಕರಾವಳಿ ಭದ್ರತಾ ಪಡೆ ಕಚೇರಿ ಎಲ್ಲಿದೆ?

ಕರ್ನಾಟಕ ಕರಾವಳಿ ಭಾಗ ಸುಮಾರು 320 ಕಿಮೀ ಇದ್ದು, ಇದರ ಕಾರ್ಯಾಚರಣೆಯನ್ನು ಮಂಗಳೂರಿನಲ್ಲಿರುವ ಪೆಣಂಬೂರು ಕೇಂದ್ರ ನೋಡಿಕೊಳ್ಳುತ್ತದೆ.

ಕರ್ನಾಟಕ ಭಾರತೀಯ ಕರಾವಳಿ ಭದ್ರತಾಪಡೆ ಯಾವುದರ ಕಡೆ ಹೆಚ್ಚು ಗಮನ ಕೊಡುತ್ತದೆ?

ಕರ್ನಾಟಕ ಭಾರತೀಯ ಕರಾವಳಿ ಭದ್ರತಾಪಡೆ ಯಾವುದರ ಕಡೆ ಹೆಚ್ಚು ಗಮನ ಕೊಡುತ್ತದೆ?

ಐಸಿಜಿ (ಇಂಡಿಯನ್ ಕೋಸ್ಟಲ್ ಗಾರ್ಡ್) ಮೀನುಗಾರರ ಸುರಕ್ಷತೆ ಮತ್ತು ಭದ್ರತೆ ಕಡೆ ಹೆಚ್ಚು ಗಮನಕೊಡುತ್ತದೆ. ಮಾಲಿನ್ಯ ತಡೆಯುತ್ತದೆ. ಕರ್ನಾಟಕ ಮತ್ತು ಕರಾವಳಿ ಸಮುದ್ರ ಪರಿಸರದ ರಕ್ಷಣೆ ಮಾಡುತ್ತದೆ. ಇವುಗಳಿಗೆ ಸಂಬಂಧಿಸಿದ ಕಾನೂನನ್ನು ಜಾರಿ ಮಾಡುತ್ತದೆ.

ಭಾರತೀಯ ಕರಾವಳಿ ಭದ್ರತಾಪಡೆ ಹಡಗು ಹೇಗಿರುತ್ತದೆ?

ಭಾರತೀಯ ಕರಾವಳಿ ಭದ್ರತಾಪಡೆ ಹಡಗು ಹೇಗಿರುತ್ತದೆ?

ಭಾರತೀಯ ಕರಾವಳಿ ಭದ್ರತಾಪಡೆ ಹಡಗು ಬಿಳಿ ಬಣ್ಣದಲ್ಲಿದ್ದು, ಬದಿಯಲ್ಲಿ ಎರಡು ನೀಲಿ ಪಟ್ಟಿಗಳಿರುತ್ತವೆ. ಇದರಿಂದ ಇವುಗಳನ್ನು ಸುಲಭವಾಗಿ ಗುರುತ್ತಿಸಬಹುದು.

ಕರ್ನಾಟಕದ ಕರಾವಳಿ ಭದ್ರತಾಪಡೆ ಎಷ್ಟು ಜನರ ಪ್ರಾಣ ಉಳಿಸಿದೆ?

ಕರ್ನಾಟಕದ ಕರಾವಳಿ ಭದ್ರತಾಪಡೆ ಎಷ್ಟು ಜನರ ಪ್ರಾಣ ಉಳಿಸಿದೆ?

ಕರ್ನಾಟಕದ ಕರಾವಳಿ ಭದ್ರತಾ ಪಡೆಯು ಕಳೆದ ವರ್ಷ14 ಮೀನುಗಾರರ ದೋಣಿಗಳನ್ನು ಹುಡುಕಿದ್ದು, 46 ಮಂದಿಯ ಪ್ರಾಣವನ್ನು ಉಳಿಸಿದೆ.

ತನ್ನ ವಿಸ್ತಾರತೆಯನ್ನು ಕರ್ನಾಟಕದ ಐಸಿಜಿ

ತನ್ನ ವಿಸ್ತಾರತೆಯನ್ನು ಕರ್ನಾಟಕದ ಐಸಿಜಿ

ಇದು ವೇಗಯುತವಾದ 4ಗಸ್ತು ಹಡಗುಗಳಿವೆ, 2 ಹೋವರ್ ಕ್ರಾಫ್ಟ್ ಗಳಿವೆ,2 ಇಂಟರ್ ಸೆಪ್ಟರ್ ದೋಣಿ, 2ಇಂಟರ್ ಸೆಪ್ಟರ್ ಕ್ರಾಫ್ಟ್ ಗಳಿವೆ.

English summary
Coast Guard Karnataka celebrates Raising Day in in Penambur Mangaluru on February 01st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X