ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹವಾಮಾನ ವೈಪರೀತ್ಯ, ಮೀನುಗಾರರ ಬದುಕಿಗೇ ಲಂಗರು!

|
Google Oneindia Kannada News

ಮಂಗಳೂರು, ಮಾರ್ಚ್‌ 17: ಸಮುದ್ರದಲ್ಲಿ ಉಂಟಾಗುತ್ತಿರುವ ಹವಮಾನ ವೈಪರಿತ್ಯ ಕರಾವಳಿ ಜಿಲ್ಲೆಯ ಮೀನುಗಾರರ ಬದುಕಲ್ಲಿ ಬಿರುಗಾಳಿ ಎಬ್ಬಿಸಿದೆ. ಕಡಲಿನಲ್ಲಿ ಮೀನುಗಳ ಕೊರತೆ, ಜೊತೆಗೆ ಆಗಾಗ್ಗೆ ಸಂಭವಿಸುತ್ತಿರುವ ಬಿರುಗಾಳಿ ಚಂಡ ಮಾರುತಗಳ ಕಾರಣಗಳಿಂದಾಗಿ ಮೀನು ಇಳುವರಿ ಸಂಪೂರ್ಣ ಕುಸಿದಿದ್ದು ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮಾಡಿದೆ.

 ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ಕರಾವಳಿಯಲ್ಲಿ ಧಾರಾಕಾರ ಮಳೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ಕರಾವಳಿಯಲ್ಲಿ ಧಾರಾಕಾರ ಮಳೆ

ಕಳೆದ ವರ್ಷ ಡಿಸೆಂಬರ್ ನಲ್ಲಿ ಬಂದ ಓಖಿ ಚಂಡಮಾರುತ ಕರಾವಳಿ ಮೀನುಗಾರಿಕೆಗೆ ಸಾಕಷ್ಟು ಹೊಡೆತ ನೀಡಿತ್ತು. ನಂತರ ಕಡಲಿನಲ್ಲಿ ನಿರಂತರ ಹವಮಾನ ವೈಫರಿತ್ಯ, ತೂಫಾನ್ ಸಂಭವಿಸುತ್ತಿದ್ದ ಕಾರಣ ತಿಂಗಳುಗಟ್ಟಲೆ ಮೀನುಗಾರಿಕೆ ಅಸ್ತವ್ಯಸ್ತಗೊಂಡಿತ್ತು. ಪರಿಸ್ಥಿತಿ ಬಿಟ್ಟು ಬುಡದೇ ಹೀಗೆ ಮುಂದುವರೆಯುತ್ತಿರುವುದು ಮೀನುಗಾರ ಬದುಕನ್ನು ಕಷ್ಟಕ್ಕೆ ದೂಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಅಲ್ಲದೇ ಇತ್ತೀಚೆಗೆ ಅರಬೀ ಸಮುದ್ರ ಪ್ರದೇಶದಲ್ಲಿ ವಾಯುಭಾರ ಕುಸಿತದಿಂದಾಗಿ ಕೇರಳ ಸಮುದ್ರದಲ್ಲಿ ಭಾರಿ ಅಲೆಗಳ ಮುನ್ಸೂಚನೆ ಹಿನ್ನಲೆಯಲ್ಲಿ ಮಂಗಳೂರು, ಮಲ್ಪೆ ಸಹಿತ ಉಭಯ ಜಿಲ್ಲೆಗಳಲ್ಲಿ ಮೀನುಗಾರಿಕೆ ಸ್ಥಗಿತಗೊಂಡಿದೆ. ಉಭಯ ಜಿಲ್ಲೆಗಳ ಸುಮಾರು ಶೇಕಡ 80 ರಷ್ಟು ದೋಣಿಗಳು ಲಂಗರು ಹಾಕಿವೆ. ಅಲ್ಲದೇ ಮೀನಗಾರಿಕೆಗೆ ತೆರಳಿದ್ದ ದೋಣಿಗಳು ಕಳೆದ ಎರಡು ದಿನಗಳಿಂದ ಹಿಂತಿರುಗಿ ಬರುತ್ತಿದೆ.

Climate change: Fishermen restrcited to fishing in sea

ಹವಮಾನ ಇಲಾಖೆಯ ಮುನ್ಸೂಚನೆಯಿರುವುದರಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಬೋಟುಗಳು ವಾಪಾಸ್ ದಡ ಸೇರಿವೆ. ಅಲ್ಲದೆ ಮುಂದಿನ ಆದೇಶದವರೆಗೆ ಮೀನುಗಾರಿಕೆಗೆ ತೆರಳಬಾರದಂದು ಜಿಲ್ಲಾಡಳಿತ ಮುನ್ಸೂಚನೆ ನೀಡಿರುವುದರಿಂದ ಬೋಟುಗಳ ಬಂದರಿನಲ್ಲಿ ಲಂಗರು ಹಾಕಿವೆ. ಆಂದ್ರಪ್ರದೇಶ, ತಮಿಳುನಾಡು ಮೀನುಗಾರರ ಅನಿರೀಕ್ಷಿತವಾಗಿ ಸಿಕ್ಕ ಬಿಡುವಿನಲ್ಲಿ ತಮ್ಮ ತಮ್ಮ ಊರಿಗೆ ಹೊರಟು ಹೋಗಿದ್ದಾರೆ. ಕೆಲವು ಮೀನುಗಾರರು ತಮ್ಮ ದೋಣಿಗಳ ಸಣ್ಣಪುಟ್ಟ ರಿಪೇರಿ ಕೆಲಸದಲ್ಲಿ ತೊಡಗಿದ್ದಾರೆ.

 ಮಾ. 20ರಿಂದ ವಿಶೇಷ ಬಸ್ ನಲ್ಲಿ ರಾಹುಲ್ ಗಾಂಧಿ ಕರಾವಳಿ ಪ್ರವಾಸ ಮಾ. 20ರಿಂದ ವಿಶೇಷ ಬಸ್ ನಲ್ಲಿ ರಾಹುಲ್ ಗಾಂಧಿ ಕರಾವಳಿ ಪ್ರವಾಸ

Climate change: Fishermen restrcited to fishing in sea

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಒಟ್ಟು ಮೀನು ಉದ್ಯಮದಲ್ಲಿ ಕುಸಿತ ಕಂಡು ಬಂದಿದೆ. ಒಂದೆಡೆ ಮೀನು ಲಭ್ಯತೆ ಇಲ್ಲ. ತೂಫಾನ್ , ಹವಮಾನ ವೈಪರಿತ್ಯ ಒಟ್ಟು ಮೀನುಗಾರಿಕೆಗೆ ದೊಡ್ಡ ಹೊಡೆತವನ್ನು ನೀಡಿದೆ. ಪ್ರತಿವರ್ಷ ಈ ಸಮಯದಲ್ಲಿ ನಿರೀಕ್ಷಿತ ಮೀನುಗಾರಿಕೆ ನಡೆಯುವುದರಿಂದ ಮೀನುಗಾರರು ಕಂಗೆಟ್ಟಿದ್ದಾರೆ. ಲಕ್ಷಾಂತರ ಮೀನುಗಾರರು, ಕಾರ್ಮಿಕರು, ಮೀನುಗಾರಿಕೆಯನ್ನೇ ನೆಚ್ಚಿಕೊಂಡಿದ್ದು ಆಗಾಗ ಎದುರಾಗುತ್ತಿರುವ ಮೀನುಗಾರಿಕೆ ಸ್ಥಗಿತ ಪರಿಸ್ಥಿತಿ ಅವರ ಬದುಕನ್ನು ಶೋಚನೀಯವಾಗಿಸುತ್ತಿದೆ.

Climate change: Fishermen restrcited to fishing in sea

ಗಗನಕ್ಕೇರಿದ ಮೀನು ರೇಟು
ಕಳೆದ ಎರಡು ಮೂರು ದಿನಗಳಿಂದ ಮೀನುಗಾರಿಕೆ ಸ್ತಬ್ದಗೊಂಡಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಮೀನು ದರದಲ್ಲಿ ಏರಿಕೆಯಾಗಿದೆ. ಮೀನು ಮಾರುಕಟ್ಟೆಯಲ್ಲಿ ಬಂಗುಡೆ, ಅಂಜಲ್, ಬೂತಾಯಿ, ಬೊಂಡಾಸ್, ಕಾಣೆ ಮೀನುಗಳ ದರದಲ್ಲಿ ಶೇಕಡ 40 ರಷ್ಟು ಏರಿಕೆಯಾಗಿದೆ. ಇದರ ಪರಿಣಾಮ ಹೋಟೆಲ್ ಗಳಲ್ಲೂ ಮೀನು ಖಾದ್ಯಗಳ ಮೇಲೂ ಆಗಿದೆ.

English summary
Due to climate change Karnataka coastal area fishermen cant do fishing in sea from many days. many fishermen and their families depend on fishing and
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X