ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಜೈಲೊಳಗೆ ಮಾರಕಾಸ್ತ್ರ ಎಸೆದವರು ಸಿಕ್ಕಿಬಿದ್ರು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 17 : ಮಂಗಳೂರು ಜೈಲಿನಲ್ಲಿ ನಡೆದ ಕೈದಿಗಳ ಹತ್ಯೆ ಪ್ರಕರಣಕ್ಕೆ ಸಹಕಾರ ನೀಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ನಾಲ್ವರು ಜೈಲಿನಲ್ಲಿರುವ ಕೈದಿಗಳಿಗೆ ಆಯುಧಗಳನ್ನು ಪೂರೈಕೆ ಮಾಡಿದ್ದರು.

ಮಂಗಳೂರು ನಗರ ಪೊಲೀಸ್ ಆಯುಕ್ತ ಎಸ್.ಮುರುಗನ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಆಕಾಶಭವನ ನಿವಾಸಿ ಮಹೇಶ್ ಕುಮಾರ್ (35), ಲತೀಶ್ (23), ಬಂಟ್ವಾಳದ ಸತೀಶ್ ಆಚಾರ್ಯ (42) ಮತ್ತು ಕಮಲಾಕ್ಷ ಪೂಜಾರಿ (42) ಬಂಧಿತ ಆರೋಪಿಗಳು. [ಮಂಗಳೂರು ಜೈಲೊಳಗೆ ಆಯುಧಗಳು ಬಂದಿದ್ದು ಹೇಗೆ?]

murugan

ಬಂಧಿತ ಆರೋಪಿಗಳ ಪೈಕಿ ಮಹೇಶ್ ಕುಮಾರ್ ಜೈಲಿನ ಗೋಡೆಯ ಮೂಲಕ ಆಯುಧವನ್ನು ಎಸೆದಿದ್ದು, ಈತನ ಜತೆಗೆ ಬಂದಿದ್ದ ಲತೀಶ್ ಆತನಿಗೆ ಸಹಕಾರ ನೀಡಿದ್ದ. ಈ ಆಯುಧವನ್ನು ಬಳಸಿ ಕೈದಿ ಮಾಡೂರು ಯೂಸೂಬ್ ಮತ್ತು ಗಣೇಶ್ ಶೆಟ್ಟಿಯನ್ನು ಹತ್ಯೆ ಮಾಡಲಾಗಿತ್ತು. [ಮಂಗಳೂರು ಜೈಲಲ್ಲಿ ಹತ್ಯೆಯಾದವರು ಯಾರು?]

ಕಮ್ಮಾರಿಕೆ ಕೆಲಸ ಮಾಡುತ್ತಿರುವ ಸತೀಶ್ ಆಚಾರ್ಯ ಕೊಲೆಗೆ ಪೂರಕವೆಂಬಂತೆ ಸಣ್ಣದಾದ ಆಯುಧ ತಯಾರಿಸಿ ಒದಗಿಸಿದ್ದ. ಕಮಲಾಕ್ಷ ಪೂಜಾರಿ ಕೂಡ ಇದಕ್ಕೆ ಸಹಕಾರ ನೀಡಿದ್ದ. ಈ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ. [ಮಂಗಳೂರು ಜೈಲಿನಲ್ಲಿ ಕೊಲೆ ಮಾಡಿಸಿದ್ದು ವಿಕ್ಕಿ ಶೆಟ್ಟಿ]

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೈಲಿನಲ್ಲಿದ್ದ 5 ಮಂದಿಯ ಮೇಲೆ ಕೊಲೆ ಕೇಸು ದಾಖಲುಮಾಡಲಾಗಿದೆ. ಗಣೇಶ್ ಶೆಟ್ಟಿಯನ್ನು ಕೊಲೆಗೈದ ಆರೋಪಿಗಳ ವಿರುದ್ಧವು ತನಿಖೆ ನಡೆಸಲಾಗುತ್ತಿದೆ ಎಂದು ಮುರುಗನ್ ತಿಳಿಸಿದ್ದಾರೆ.

ಇಬ್ಬರ ಹತ್ಯೆ ನಡೆದಿತ್ತು : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನವೆಂಬರ್ 2ರ ಸೋಮವಾರ ಬೆಳಗ್ಗೆ ನಡೆದ ಮಾರಾಮಾರಿಯಲ್ಲಿ ಕುಖ್ಯಾತ ರೌಡಿ ಮಾಡೂರು ಯೂಸೂಬ್ (42) ಹಾಗೂ ವಿಚಾರಣಾಧೀನ ಕೈದಿ ಗಣೇಶ್ ಶೆಟ್ಟಿ (47)ಯನ್ನು ಹತ್ಯೆ ಮಾಡಲಾಗಿತ್ತು.

English summary
Mangaluru police commissioner S.Murugan said, four arrested in connection with the murder in Mangaluru jail. Two jail inmates were killed in a fight at jail on November 2, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X