ಮಂಗಳೂರು, ಜನವರಿ 08: ಮಂಗಳೂರು ಜೈಲಿನಲ್ಲಿ ಎರಡು ಗುಂಪಿನ ನಡುವೆ ಸೋಮವಾರ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಓರ್ವ ಕಾರಗೃಹ ಸಿಬ್ಬಂದಿ ಹಾಗೂ ಹಲವು ವಿಚಾರಣಾಧಿನ ಕೈದಿಗಳಿಗೆ ಗಾಯಗಳಾಗಿವೆ.
ಕಾರಾಗೃಹದ ಕಿಟಕಿಯ ಅಲ್ಯೂಮಿನಿಯಂ ಫ್ರೇಮ್, ಟ್ಯೂಬ್ ಲೈಟ್, ಕಲ್ಲುಗಳಿಂದ ಪರಸ್ಪರ ಹೊಡೆದುಕೊಂಡಿದ್ದು, ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಳ ಆಗಮಿಸಿ ಪರಿಶೀಲನೆ ನಡೆಸಿದರು. ಸದ್ಯ ಕಾರಾಗೃಹದ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಮಂಗಳೂರು ಜೈಲಿನಲ್ಲಿ ಒಂದಿಲ್ಲೊಂದು ಘಟನೆಗಳು ನಡೆಯುತ್ತಲೇ ಇವೆ.
ಹಾಗೂ ಈ ಕಾರಗೃಹದಲ್ಲಿ ಗಾಂಜಾ, ಚಾಕು, ಸೇರಿದಂತೆ ಹಲವು ವಸ್ತುಗಳು ಹಾಗಾಗ ಪೊಲೀಸರಿಗೆ ಸಿಗುತ್ತಿವೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!