ನಗರಸಭೆ ಉಪಚುನಾವಣೆ: ಕಾಂಗ್ರೆಸ್ ಭರ್ಜರಿ ಜಯಭೇರಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada
ಮಂಗಳೂರು, ಫೆಬ್ರವರಿ 15 : ಉಳ್ಳಾಲ ಹಾಗೂ ಪುತ್ತೂರು ನಗರಸಭೆಗೆ ನಡೆದ ಉಪಚುನಾವಣೆಯ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ.

ಸಚಿವ ಯುಟಿ ಖಾದರ್ ತವರು ಉಳ್ಳಾಲ ನಗರಸಭೆಯ ಎರಡು ಸ್ಥಾನ ಹಾಗೂ ಪುತ್ತೂರು ನಗರಸಭೆಯ ಆರು ಸ್ಥಾನಕ್ಕೆ ಫೆ.12ರಂದು ನಡೆದ ಉಪಚುನಾವಣೆ ನಡೆದಿತ್ತು.[ಸಿನಿಮೀಯ ಶೈಲಿಯಲ್ಲಿ ರೌಡಿ ಕಾಲಿಯಾ ರಫೀಕ್ ಕೊಲೆ]

City Corporation By-Election: Congress won 5 out of 9 seats

ಉಳ್ಳಲಾದ ಚೆಂಬುಗುಡ್ಡೆ ವಾಡಿ೯ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾಝಿಲ್ ಡಿಸೋಜಾ 600 ಮತಗಳನ್ನು ಪಡೆದು ಭಜ೯ರಿ ಜಯ ಗಳಿಸಿದ್ದಾರೆ. ಬಿಜೆಪಿಯ ಸತೀಶ್ ಕೇವಲ 178 ಮತಗಳನ್ನು ಪಡೆದು ಸೋಲನ್ನೊಪ್ಪಿಕೊಂಡಿದ್ದಾರೆ.

26ನೆ ವಾರ್ಡ್ ನಲ್ಲಿ ಕಾಂಗ್ರೆಸ್ ನ ಉಸ್ಮಾನ್ 510 ಮತಗಳನ್ನು ಪಡೆದು ಜಯ ಗಳಿಸಿದರೆ ಪಕ್ಷೇತರ ಅಭ್ಯರ್ಥಿ 240 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.[ಬಾಲಿವುಡ್ ನಟ ನಾನಾ ಪಾಟೇಕರ್ ಮಂಗಳೂರಿಗೆ ಬಂದಿದ್ದೇಕೆ?]

ಇನ್ನು ಪುತ್ತೂರು ನಗರಸಭೆಯ 6 ವಾರ್ಡ್ ಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 3 ಕ್ಷೇತ್ರಗಳಲ್ಲಿ ಜಯ ಗಳಿಸಿದೆ.

City Corporation By-Election: Congress won 5 out of 9 seats

ಕಾಂಗ್ರೆಸ್ ನ ಅಭ್ಯರ್ಥಿಗಳಾದ ಶ್ಯಾಮಲಾ, ಸುವರ್ಣಲತಾ ಗೌಡ ಮತ್ತು ಝೊಹರಾ ನಿಸಾರ್ ವಿಜೇತರಾಗಿದ್ದಾರೆ. ಬಿಜೆಪಿ ಅಭ್ಯರ್ಥಿಗಳಾದ ಬಾಲಪ್ಪ ಯಾನೆ ಸುಂದರ ಪೂಜಾರಿ, ವಿಜಯಲಕ್ಷ್ಮೀ ಮತ್ತು ರಮೇಶ್ ರೈ ವಿಜೇತರು.

ಪುತ್ತೂರು ಮಿನಿ ವಿಧಾನಸೌಧದ ತಹಶೀಲ್ದಾರ್ ನ್ಯಾಯಾಲಯದ ಕಚೇರಿಯಲ್ಲಿ ಇಂದು (ಫೆ. 15) ಮತ ಎಣಿಕೆ ಕಾರ್ಯವು ನಡೆಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress won 5 out of 9 seats In the by-election to Puttur and Ullal City Corporations. BJP satisfied with only 3 seats in the election.
Please Wait while comments are loading...