ಸಿದ್ದರಾಮಯ್ಯ ಅವರಿಗೆ ಜನಾರ್ದನ ಪೂಜಾರಿ ಮಂಗಳಾರತಿ!

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್. 22 : ಸಿದ್ದರಾಮಯ್ಯರಿಗೆ ಏನಾಗಿದೆ. ನಿಮಗೆ ಮೇಟಿ ಹತ್ತಿರವೇ? ಮೇಟಿ ಏನು ಮಾಡುತ್ತಿದ್ದಾರೆ ಎಂದು ನಿಮಗೆ ಗೊತ್ತಿಲ್ಲವೇ?

ಅವರ ರಕ್ಷಣೆಗೆ ನಿಂತಿದ್ದೀರಲ್ಲವೇ? ಪಕ್ಷಕ್ಕಿಂತ ಮೇಟಿ ಮುಖ್ಯವೇ? ನಿಮಗೆ ನಾಚಿಕೆ, ಮಾನ ಮರ್ಯಾದೆ ಏನಾದರೂ ಇದ್ದರೆ ಅವರನ್ನು ಪಕ್ಷದಿಂದ ಕಿತ್ತುಹಾಕಿ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲೆಸೆದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪಕ್ಷಕ್ಕಿಂತ ಮೇಟಿ ಅವರೇ ಮುಖ್ಯವಾಗಿದ್ದರೆ. ಸಿಎಂಗೆ ನಾಚಿಕೆಯಾಗಬೇಕು. ಮಾನ-ಮರ್ಯಾದೆ ಇದ್ದರೆ ಮೇಟಿಯನ್ನು ಪಕ್ಷದಿಂದ ಕಿತ್ತೊಗೆಯಲಿ ಎಂದರು.

ಪಕ್ಷದ ಹಿತಕ್ಕಾಗಿ ಸಲಹೆಗಳನ್ನು ನೀಡಿದಾಗ ನನ್ನನ್ನು ಪಕ್ಷ ವಿರೋಧಿ ಎನ್ನುತ್ತಾರೆ. ಪಕ್ಷದಲ್ಲಿ ವಾಕ್ ಸ್ವಾತಂತ್ರವನ್ನು ಕಿತ್ತುಕೊಳ್ಳಲಾಗಿದೆ. ಈ ರೀತಿಯ ಪರಿಸ್ಥಿತಿ ಇರುವಾಗು ನಾನೇನು ಮಾಡಲಿ ಎಂದು ಪೂಜಾರಿ ಎಂದು ಹೇಳಿದರು.[ಜನಾರ್ದನ ಪೂಜಾರಿಗೆ ಶೋಕಾಸ್ ನೋಟೀಸ್, ಉತ್ತರ ಕೊಡ್ತಿನಿ ಅಂದ್ರು]

Chief minister Siddaramaiah, Meti is more important than the party says Janardhan Poojary

ನನ್ನನ್ನು ಪಕ್ಷದಿಂದ ಉಚ್ಚಾಟಿಸಬಹುದು. ಆದರೆ, ನನ್ನ ರಕ್ತದಿಂದ ಕಾಂಗ್ರೆಸ್ ನ್ನು ಬೇರ್ಪಡಿಸಲು ಸಾಧ್ಯವಿಲ್ಲ ನನ್ನು ಉಚ್ಚಾಟಿಸಿದರೆ ಯಾವುದೇ ಬೇಸರವಿಲ್ಲ ಎಂದರು.[ಭ್ರಷ್ಟ ಸಚಿವ,ಶಾಸಕರ ಹೆಸರು ಹೇಳುವಂತೆ ಯಡ್ಡಿಗೆ ಪೂಜಾರಿ ಸವಾಲ್]

ನೋಟು ರದ್ದತಿಯಿಂದ ಜನರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನೋಟು ಅಮಾನ್ಯವನ್ನು ಹಿಂಪಡೆದು ಪ್ರಧಾನಿ ಮೋದಿಯವರು ದೇಶದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಮೋದಿಯನ್ನು ಪ್ರಧಾನಿ ಪಟ್ಟದಿಂದ ಕಿತ್ತೆಸೆದರೆ ದೇಶ ಉಳಿಯುತ್ತದೆ. ಆ ಕೆಲಸವನ್ನು ಮಾಡುವ ಮೂಲಕ ವಿಶ್ವಾಸಾರ್ಹತೆ ಮೆರೆಯಿರಿ ಎಂದು ಆರೆಸ್ಸೆಸ್ ನವರಿಗೆ ಕಿವಿಮಾತು ಹೇಳಿದರು.

ಐಸಿಸಿಯಿಂದ ಯಾವುದೇ ನೋಟಿಸ್ ಬಂದಿಲ್ಲ: ಇನ್ನು ಐಸಿಸಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ಕಾಂಗ್ರೆಸ್‌ನಿಂದ ನನ್ನನ್ನು ಉಚ್ಛಾಟಿಸಲು ಯಾರಿಂದಲೂ ಸಾಧ್ಯವಿಲ್ಲ. ಪಕ್ಷದಿಂದ ತೆಗೆಯಬಹುದು.

ಆದರೆ, ನನ್ನ ರಕ್ತದಲ್ಲಿರುವ ಕಾಂಗ್ರೆಸ್ ಬದ್ಧತೆಯನ್ನು ತೆಗೆದುಹಾಕಲು ಯಾರಿಂದಲೂ ಸಾಧ್ಯವಿಲ್ಲ. ನನ್ನದು ಅಪ್ಪಟ ಕಾಂಗ್ರೆಸ್. ನೆಹರೂ ಕುಟುಂಬವೆಂದರೆ ನನಗೆ ಪಂಚಪ್ರಾಣ ಎಂದರು.

ಪ್ರಧಾನಿ ಕರ್ನಾಟಕವನ್ನು ಕೊಲ್ಲುವ ಕೆಲಸ ಮಾಡುತ್ತಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಭೇಟಿ ಮಾಡಲು ಅವಕಾಶ ನೀಡದ ಪ್ರಧಾನಿ ಮೋದಿಯವರ ಬಗ್ಗೆಯೂ ಪೂಜಾರಿಯವರ ವಾಗ್ದಾಳಿ ಮುಂದುವರಿಯಿತು.

ಪ್ರಧಾನಿ ಕರ್ನಾಟಕವನ್ನು ಕೊಲ್ಲುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಿಂದ ಆಯ್ಕೆಯಾದ 19 ಮಂದಿ ಸಂಸದರು ರಾಜೀನಾಮೆ ನೀಡಲಿ. ಆಗ ಸರಕಾರವೇ ಬೀಳುತ್ತದೆ ಎಂದು ಆಕ್ರೋಶದಿಂದ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief minister Siddaramaiah, Meti is more important than the party. CM should be ashamed of himself if he has self-respect let him expel Meti from the party”. Said senior congress leader Janardhan Poojary in a press meet held at the Press Club, Urwa here on December 22.
Please Wait while comments are loading...