ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೀನಿಗೆ ರಾಸಾಯನಿಕ ಬಳಕೆ: ಪತ್ತೆಗೆ ಅಧಿಕಾರಿಗಳು ತಯಾರು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 06: ಕೇರಳದ ತಿರುವನಂತಪುರದ ಅಮರವಿಳ ಚೆಕ್‌ಪೋಸ್ಟ್‌ನಲ್ಲಿ ನಡೆದ ತಪಾಸಣೆಯಲ್ಲಿ ಮೀನಿನಲ್ಲಿ ರಾಸಾಯನಿಕ ಫ್ರಾಮಾಲಿನ್ ಪತ್ತೆಯಾದ ನಂತರ ಕರ್ನಾಟಕ ಕರಾವಳಿಯಲ್ಲಿಯೂ ಮೀನಿಗೆ ರಾಸಾಯನಿಕ ಬೆರೆಸಿ ಮಾರಾಟ ಮಾಡಲಾಗುತ್ತಿದೆ ಎಂಬ ವದಂತಿ ಹಬ್ಬಿತ್ತು.

ಈ ಕುರಿತಂತೆ ಗ್ರಾಹಕರೊಬ್ಬರು ಮೀನು ಮಾರಾಟಗಾರರ ಜೊತೆ ಈ ಕುರಿತಂತೆ ಮಾತನಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಜಿಲ್ಲೆಯಲ್ಲಿ ಈ ಬಗ್ಗೆ ಆತಂಕ ಸೃಷ್ಠಿಯಾಗಿತ್ತು.

ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಹೊರ ರಾಜ್ಯಗಳಿಂದ ಕೇರಳಕ್ಕೆ ತರುವ ಬೃಹತ್ ಪ್ರಮಾಣದ ಮೀನುಗಳಲ್ಲಿ ಮುಷ್ಯನ ಮೃತದೇಹ ಕೆಡದಂತೆ ಇಡಲು ಬಳಸುವ ಕ್ಯಾನ್ಸರ್ ಕಾರಕ ಫಾರ್ಮಲಿನ್ ರಾಸಾಯನಿಕ ಅಂಶವಿರುವುದು ಕೊಚ್ಚಿನ್ ನ ಸಿಐಎಫ್ ಟಿ ಕೇಂದ್ರದ ಲ್ಯಾಬ್ ನಲ್ಲಿ ಇತ್ತೀಚೆಗೆ ದೃಢಪಟ್ಟಿತ್ತು.

ಕೊಚ್ಚಿನ್‌ಗೆ ತೆರಳಿದ್ದ ಅಧಿಕಾರಿಗಳು

ಕೊಚ್ಚಿನ್‌ಗೆ ತೆರಳಿದ್ದ ಅಧಿಕಾರಿಗಳು

ಈ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಮೀನಗಾರಿಕಾ ಇಲಾಖೆಯ ತಜ್ಞರು ಕೇರಳದ ಕೊಚ್ಚಿನ್ ಗೆ ತೆರಳಿ ಮೀನಿನಲ್ಲಿ ಅಪಾಯಕಾರಿ ಫಾರ್ಮಲಿನ್ ಅಥವಾ ಅಮೋನಿಯಾ ರಾಸಾಯನಿಕ ಅಂಶ ಬಳಕೆ ಪತ್ತೆ ಹಚ್ಚಲು ಕೇರಳದ ಕೊಚ್ಚಿನ್ ನಲ್ಲಿರುವ ಕೇಂದ್ರ ಮೀನುಗಾರಿಕೆ ತಂತ್ರಜ್ಞಾನ ಸಂಸ್ಥೆ ಅಭಿವೃದ್ದಿ ಪಡಿಸಿದ ವಿಶೇಷ ಕಿಟ್ ನ್ನು ಮಂಗಳೂರಿಗೆ ತೆಗೆದುಕೊಂಡು ಬಂದಿದ್ದಾರೆ.

ವಿಶೇಷ ಕಿಟ್ ಮೂಲಕ ರಾಸಾಯನಿಕ ಪತ್ತೆ

ವಿಶೇಷ ಕಿಟ್ ಮೂಲಕ ರಾಸಾಯನಿಕ ಪತ್ತೆ

ಮೀನಿನಲ್ಲಿ ಅಪಾಯಕಾರಿ ರಾಸಾಯನಿಕ ಗುರುತಿಸುವ ವಿಶೇಷ ಕಿಟ್ ಇದಾಗಿದ್ದು, ಈ ಒಂದು ಕಿಟ್ ನಲ್ಲಿ 20 ಸ್ಟ್ರಿಪ್ ಗಳಿದ್ದು, ಎರಡು ರೀತಿಯ ದ್ರಾವಣಗಳನ್ನು ಬೆರೆಸಬೇಕು, ಒಂದು ಸ್ಟ್ರಿಪ್ ನಿಂದ ಪರೀಕ್ಷೆಗೆ ಒಳಪಡಿಸಲಿರುವ ಮೀನನ್ನು ತಿವಿದು ಬೆರೆಸಿದ ದ್ರಾವಣದಲ್ಲಿ ಮುಳುಗಿಸಬೇಕು. ಈ ಸಂದರ್ಭದಲ್ಲಿ ಸ್ಟ್ರಿಪ್ ನೀಲಿ ಬಣ್ಣಕ್ಕೆ ತಿರುಗುತ್ತದೆ. ಈ ಸಂದರ್ಭದಲ್ಲಿ ಬಣ್ಣದ ಗಾಢತೆಯನ್ನು ಅವಲಂಭಿಸಿ ಮೀನಿನಲ್ಲಿ ಫಾರ್ಮಲಿನ್ ಅಥವಾ ಅಮೋನಿಯಾ ಬಳಸಲಾಗಿದೆಯೇ ಎಂದು ತೀರ್ಮಾನಿಸಲಾಗುತ್ತದೆ ಎಂದು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಕಿಟ್ ಬಳಸಿ ಪರೀಕ್ಷೆ ನಡೆಸಲಿದ್ದಾರೆ

ಕಿಟ್ ಬಳಸಿ ಪರೀಕ್ಷೆ ನಡೆಸಲಿದ್ದಾರೆ

ಈ ಕಿಟ್ ನ್ನು ಬಳಸಿ ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗಳ ಜತೆಗೂಡಿ ನಗರದ ಕೆಲವು ಮಾರುಕಟ್ಟೆ ಸೇರಿದಂತೆ ಮೀನು ಮಾರಾಟವಾಗುವ ಜಾಗಳಲ್ಲಿ ರಾಸಾಯನಿಕ ಮಿಶ್ರಣ ಕುರಿತಂತೆ ತಪಾಸಣೆ ನಡೆಸಲಾಗುತ್ತದೆ. ಎನಿದು ಫಾರ್ಮಾಲಿನ್ ಫಾರ್ಮಿಕ್‌ ಆಯಸಿಡ್‌ ಉಪಯೋಗಿಸಿ ಪ್ರತ್ಯೇಕವಾಗಿ ತಯಾರಿಸುವ ರಾಸಾಯನಿಕ ವಸ್ತುವೇ ಫಾರ್ಮಾಲಿನ್‌. ಮಾನವ ಶರೀರವನ್ನು ಹಾಳಾಗದಂತೆ ಇಡಲು ಇದನ್ನು ಮುಖ್ಯವಾಗಿ ಉಪಯೋಗಿಸಲಾಗುತ್ತದೆ.

ಪತೋಲಜಿ ಪರೀಕ್ಷೆಗೆ ಮಾಡಲಿರುವ ಅಧಿಕಾರಿಗಳು

ಪತೋಲಜಿ ಪರೀಕ್ಷೆಗೆ ಮಾಡಲಿರುವ ಅಧಿಕಾರಿಗಳು

ನಾನಾ ಶರೀರ ಭಾಗಗಳನ್ನು ಪತೋಲಜಿ ತಪಾಸಣೆಗಾಗಿ ಕಳುಹಿಸುವ ಸಂದರ್ಭದಲ್ಲಿ ಶೇಕಡ 10 ರಷ್ಟು ಫಾರ್ಮಾಲಿನ್‌ ಉಪಯೋಗಿಸುತ್ತಾರೆ. ಇಷ್ಟು ಪ್ರಮಾಣದಲ್ಲಿ ಫಾರ್ಮಾಲಿನ್‌ ಇದ್ದರೂ ಕೆಲವೊಮ್ಮೆ ಶರೀರ ಭಾಗಗಳು ಹಾಳಾಗುವುದಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಅಗತ್ಯವಿರುವ ಹಿನ್ನಲೆಯಲ್ಲಿ ಮೃತದೇಹವನ್ನು ದಾಸ್ತಾನಿಡುವುದು ಫಾರ್ಮಾಲಿನ್‌ನಲ್ಲಾಗಿದೆ. ಈ ಫಾರ್ಮಾಲಿನ್‌ನಲ್ಲಿ ಆರು ತಿಂಗಳಿಗಿಂತ ಹೆಚ್ಚು ಮೃತದೇಹಗಳನ್ನು ಹಾಳಾಗದಂತೆ ದಾಸ್ತಾನಿಡಲು ಸಾಧ್ಯವಿದೆ.

ಫರ್ಮಾಲಿನ್‌ ಶರೀರ ಪ್ರವೇಶಿಸಿದರೆ ಅಪಾಯ

ಫರ್ಮಾಲಿನ್‌ ಶರೀರ ಪ್ರವೇಶಿಸಿದರೆ ಅಪಾಯ

ಸೇವಿಸುವ ಮೀನಿನೊಂದಿಗೆ ಫರ್ಮಾಲಿನ್‌ ಕೂಡಾ ಶರೀರದೊಳಗೆ ಪ್ರವೇಶಿಸಿದರೆ ಗಂಭೀರವಾದ ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗಲಿವೆ. ಫಾರ್ಮಾಲಿನ್‌ ಸಣ್ಣ ಪ್ರಮಾಣದಲ್ಲೂ ಮನುಷ್ಯನ ದೇಹವನ್ನು ಸೇರಿದರೆ ಅದು ವಿಷವಾಗಿ ಕಾರ್ಯ ನಿರ್ವಹಿಸುತ್ತದೆ. ಇಂತಹ ರಾಸಾಯನಿಕ ಬೆರೆಸಿದ ಮೀನನ್ನು ತಿನ್ನುವುದರಿಂದ ಫಾರ್ಮಾಲಿನ್ ದೇಹದೊಳಗೆ ಸೇರಿದರೆ ಕ್ಯಾನ್ಸರ್ ನಂತ ಮಾರಕ ಕಾಯಿಲೆಗಳಿಗೆ ಇದು ಕಾರಣವಾಗಲಿದೆ.

English summary
There is a rumor that some mixing chemical to Fishes officers decided to test the fishes with scientific method. Officers will visit markets and make test on fishes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X