ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪಾಯಕಾರಿಯಾದ ಚಾರ್ಮಾಡಿ ಘಾಟ್ ರಸ್ತೆ: ಸಂಚರಿಸುವ ಮುನ್ನ ಎಚ್ಚರ!

|
Google Oneindia Kannada News

Recommended Video

ಪ್ರಯಾಣಿಕರಿಗೆ ಮೃತ್ಯು ಕೂಪವಾಗಿ ಬದಲಾದ ಚಾರ್ಮಾಡಿ ಘಾಟ್ | Oneindia Kannada

ಮಂಗಳೂರು, ಸೆಪ್ಟೆಂಬರ್ 21: ಮಂಗಳೂರು- ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆ ಸಂಪೂರ್ಣ ಕಿತ್ತುಹೋಗಿದೆ.

ಶಿರಾಡಿ ಘಾಟ್ ಹಾಗು ಸಂಪಾಜೆ ಘಾಟ್ ಘನ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸದಿರುವ ಕಾರಣ ಚಾರ್ಮಾಡಿ ಘಾಟ್ ರಸ್ತೆಯಲ್ಲೇ ವಾಹನ ದಟ್ಟಣೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರ ಅಪಾಯಕಾರಿ ಎನಿಸಿದೆ.

ಚಾರ್ಮಾಡಿಯಲ್ಲಿ ಅದೇ ರಾಗ ಅದೇ ಹಾಡು: ಕಣ್ಣು ಹಾಯಿಸಿದಷ್ಟು ದೂರ ಟ್ರಾಫಿಕ್ ಜಾಮ್ಚಾರ್ಮಾಡಿಯಲ್ಲಿ ಅದೇ ರಾಗ ಅದೇ ಹಾಡು: ಕಣ್ಣು ಹಾಯಿಸಿದಷ್ಟು ದೂರ ಟ್ರಾಫಿಕ್ ಜಾಮ್

ಮಂಗಳೂರು-ಬೆಂಗಳೂರು ಸೇರಿದಂತೆ ಮೈಸೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಶಿರಾಡಿ ಘಾಟ್, ಮಾಣಿ ಮೈಸೂರು ಹೆದ್ದಾರಿ ಬಂದ್ ಆದ ಸಂದರ್ಭದಲ್ಲಿ ಚಾರ್ಮಾಡಿ ಘಾಟ್ ರಸ್ತೆಯೇ ಪರ್ಯಾಯವಾಗಿ ಉಳಿದಿತ್ತು. ಪರಿಣಾಮ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರೀ ವಾಹನಗಳು ಸಂಚರಿಸಿ ರಸ್ತೆ ಈಗ ಸಂಪೂರ್ಣ ಹಾಳಾಗಿದೆ.

Charmadi Ghat road become impossible to drive

ಪ್ರತಿದಿನ ಹಗಲು ಇರುಳೆನ್ನದೆ ಸಾವಿರಾರು ಘನ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಿದ ಪರಿಣಾಮ ರಸ್ತೆ ಕಿತ್ತು ಹೋಗಿದೆ. ಕೆಲವೆಡೆ ರಸ್ತೆ ತಿರುವಿನಲ್ಲಿ ತಡೆಗೋಡೆ ಕುಸಿದಿರುವ ಕಾರಣ ರಾತ್ರಿ ಹೊತ್ತು ಈ ತಿರುವುಗಳಲ್ಲಿ ವಾಹನ ಚಾಲನೆ ಅತ್ಯಂತ ಅಪಾಯಕಾರಿಯಾಗಿದೆ.

ಭಾರೀ ಮಳೆ: ರಸ್ತೆ ಮೂಲಕ ಕರಾವಳಿ ಕಡೆ ಪ್ರಯಾಣಿಸುವವರಿಗೆ ಮಹತ್ವದ ಟಿಪ್ಸ್ ಭಾರೀ ಮಳೆ: ರಸ್ತೆ ಮೂಲಕ ಕರಾವಳಿ ಕಡೆ ಪ್ರಯಾಣಿಸುವವರಿಗೆ ಮಹತ್ವದ ಟಿಪ್ಸ್

ಅತೀ ಅಪಾಯಕಾರಿ ತಿರುವುಗಳಲ್ಲಿ ಡಾಂಬರು ಕಿತ್ತು ಹೋಗಿ ಗುಂಡಿ ನಿರ್ಮಾಣವಾಗಿವೆ. ಅಪಾಯಕಾರಿಯಾಗಿ ಪರಿವರ್ತನೆಗೊಂಡಿರುವ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿರಾಡಿ ಘಾಟ್ ನಲ್ಲಿ ಕೇವಲ ಲಘ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶವಿದೆ.

Charmadi Ghat road become impossible to drive

ಆದರೆ 6ಚಕ್ರದ ಘನ ವಾಹನಗಳು, ಕಂಟೇನರ್ , ಟ್ಯಾಂಕರ್ , ಬುಲೆಟ್ ಟ್ಯಾಂಕರ್ ಗಳು ಈ ಚಾರ್ಮಾಡಿ ಘಾಟ್ ರಸ್ತೆ ಮೂಲಕವೇ ಸಂಚರಿಸುತ್ತಿದೆ. ಇದರಿಂದ ಘಾಟ್ ರಸ್ತೆ ಅವ್ಯವಸ್ಥೆಯ ಆಗರವಾಗಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಸ್ತೆ ದುರಸ್ಥಿಗೆ ಮುಂದಾಗದೇ ಕಣ್ಮುಚ್ಚಿ ಕೂತಿದ್ದಾರೆ.

Charmadi Ghat road become impossible to drive

ಈಗ ಶಿರಾಡಿ ಘಾಟ್ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರಈಗ ಶಿರಾಡಿ ಘಾಟ್ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ

ಅಪಾಯ ಸಂಭವಿಸುವ ಮುನ್ನ ಕನಿಷ್ಠ ರಸ್ತೆಗೆ ತೇಪೆ ಹಾಕುವ ಕಾರ್ಯ ಮಾಡಬೇಕಿದೆ. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಈ ರಸ್ತೆಯೂ ಬಂದ್ ಆಗುವ ಆತಂಕ ಕಾಡತೊಡಗಿದೆ.

English summary
Traffic pressure on the Charmadi ghat road has mounted due to closure of Shiradi and Sampaje Ghat road. It is said that Charmadi Ghat road back to its bad way. It has become almost impossible to drive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X