ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚರಣ್ ಕೊಲೆ ಪ್ರಕರಣ, ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 29 : ಚರಣ್ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿ ಸೈಫುಲ್ಲಾ ಎಂಬಾತ ನಿರಪರಾಧಿಯಾಗಿದ್ದು, ಆತನನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಯಿತು.

ವಾಮಂಜೂರಿನಲ್ಲಿ ಆಗಸ್ಟ್ 19ರಂದು ಚರಣ್ ಕೊಲೆ ನಡೆದಿತ್ತು. ಆಗಸ್ಟ್ 24ರಂದು ಐವರು ಆರೋಪಿಗಳನ್ನು ಬಂಧಿಸಲಾಯಿತು. ಭಾನುವಾರ ಪ್ರತಿಭಟನಾಕಾರರು ಗ್ರಾಮಾಂತರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವ ಮುನ್ಸೂಚನೆ ಇದ್ದ ಕಾರಣ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.[ರೌಡಿ ಶೀಟರ್ ಚರಣ್ ಕೊಂದವರ ಸೆರೆ]

Charan murder case, Protest against police

ಸೈಫುಲ್ಲಾ ನಿರಪರಾಧಿ : ಚರಣ್ ಕೊಲೆ ಪ್ರಕರಣದಲ್ಲಿ ಸೈಫುಲ್ಲಾ ಪಾತ್ರವಿಲ್ಲ, ಆತ ನಿರಪರಾಧಿ, ಆತನನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾನಿರತರು ಆಕೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಗ್ರಾಮಾಂತರ ಠಾಣೆಯತ್ತ ವಾಹನದಲ್ಲಿ ಆಗಮಿಸಿದ್ದು, ಅವರನ್ನು ಪೊಲೀಸರು ಚದುರಿಸಿದರು.[ಮಂಗಳೂರಲ್ಲಿ ಹಾಡಹಗಲೇ ರೌಡಿ ಶೀಟರ್ ಹತ್ಯೆ]

ಮೂಡುಷೆಡ್ಡೆ ಎದುರುಪದವಿನಲ್ಲಿ ಸೈಫುಲ್ಲಾನನ್ನು ಪೊಲೀಸರು ಬಂಧಿಸಿದ್ದಾರೆ ಇದನ್ನು ವಿರೋಧಿಸಿ ಭಾನುವಾರ ಪ್ರತಿಭಟನೆ ನಡೆಯಿತು. ಸೈಫುಲ್ಲಾ ನಿರಪರಾಧಿ ಆತನನ್ನು ಬಿಡುಗಡೆ ಮಾಡಬೇಕಾಗಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಸ್ಥಳಕ್ಕಾಗಮಿಸಿದ ಡಿಸಿಪಿ ಶಾತರಾಜು ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಈ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.

English summary
Mangaluru City crime branch (CCB) police have arrested Syfulla in connection with the murder of Charan at Vamanjur on August 19, 2016. Syfulla family protest against police and said that he is innocent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X