ಮಂಗಳೂರು : ರೌಡಿ ಶೀಟರ್ ಚರಣ್ ಕೊಂದವರ ಸೆರೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಗಳೂರು, ಆಗಸ್ಟ್ 24 : ಮಂಗಳೂರಿನ ರೌಡಿ ಶೀಟರ್ ಚರಣ್ ಕೊಲೆ ಪ್ರಕರಣದ ಆರೋಪಿಗಳನ್ನು 5 ದಿನಗಳಲ್ಲಿಯೇ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಐವರು ಆರೋಪಿಗಳು ಮಂಗಳೂರಿನಲ್ಲಿಯೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಬಂಧಿತ ಆರೋಪಿಗಳನ್ನು ಮೂಡುಶೆಡ್ಡೆಯ ಶಿವನಗರದ ಮೊಹಮ್ಮದ್ ರಿಜ್ವಾನ್ (28), ವಾಮಂಜುರಿನ ಕಲೆರೈಕೊಡಿಯ ಮೊಹಮ್ಮದ್ ರಯೀಫ್ (19), ಮೂಡುಶೆಡ್ಡೆಯ ಶಾರುಕ್ (20), ಮುಸ್ತಫಾ (19) ಮತ್ತು ಗುರುಪುರ ನಿವಾಸಿ ನವಾಜ್ (23)ಎಂದು ಗುರುತಿಸಲಾಗಿದೆ.[ಮಂಗಳೂರಲ್ಲಿ ಹಾಡಹಗಲೇ ರೌಡಿ ಶೀಟರ್ ಹತ್ಯೆ]

Charan

ಎಲ್ಲಾ ಆರೋಪಿಗಳನ್ನು ಪಾಣೇ ಮಂಗಳೂರು ಹಳೇ ಟೋಲ್ ಗೇಟ್ ಬಳಿ ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಮಹೀಂದ್ರಾ ಬೊಲೆರೋ ವಾಹನವನ್ನು ವಶಕ್ಕೆಪಡೆದುಕೊಳ್ಳಲಾಗಿದೆ. ಹಳೆಯ ದ್ವೇಷದ ಹಿನ್ನಲೆಯಲ್ಲಿ ಚರಣ್‌ ನನ್ನು ಕೊಲೆ ಮಾಡಿರುವುದಾಗಿ ರಿಜ್ವಾನ್ ಮತ್ತು ಸಹಚರರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.[ಅಪಹರಣದ ಕಥೆ ಹೆಣೆದ ಪತಿಯ ಹಂತಕಿ ಈಗ ಕಂಬಿಯ ಹಿಂದೆ]

ಆ.19ರಂದು ಹೆಂಡತಿ ಮತ್ತು ಮಗುವಿನೊಂದಿಗೆ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದ ಚರಣ್ ನನ್ನು ಮೂಡುಶೆಡ್ಡೆಯ ಪೆಟ್ರೋಲ್ ಬಂಕ್ ಒಂದರ ಬಳಿ ಅಡ್ಡಗಟ್ಟಿ, ರಿಕ್ಷಾದಿಂದ ಹೊರಗೆಳೆದು ಕೊಲೆ ಮಾಡಲಾಗಿತ್ತು. ರಿಜ್ವಾನ್ ಮತ್ತು ಚರಣ್ ನಡುವೆ ಹಳೆಯ ದ್ವೇಷವಿತ್ತು. ಇಬ್ಬರ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಕಾವೂರು ಠಾಣೆಯಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿತ್ತು. ಅದೇ ದ್ವೇಷದ ಹಿನ್ನಲೆಯಲ್ಲಿ ಕೊಲೆ ನಡೆದಿದೆ.

ಆರೋಪಿ ಮೊಹಮ್ಮದ್ ರಿಜ್ವಾನ್ ವಿರುದ್ಧ ಉಡುಪಿ ಜಿಲ್ಲೆಯ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಮೊಹಮ್ಮದ್ ರಾಯೀಫ್ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಬೈಕ್ ಕಳವು ಪ್ರಕರಣ ದಾಖಲಾಗಿರುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru City crime branch (CCB) police have arrested 5 accused relating to the murder of Charan at Vamanjur on August 19, 2016.
Please Wait while comments are loading...