ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಇಟಿ ಫಲಿತಾಂಶ : ಅಳ್ವಾಸ್ ಕಾಲೇಜಿನ ಅನಂತ್ ರಾಜ್ಯಕ್ಕೆ ಪ್ರಥಮ

|
Google Oneindia Kannada News

ಮಂಗಳೂರು, ಮೇ 28 : ಸಿಇಟಿ ಫಲಿತಾಂಶ ಪ್ರಕಟವಾಗಿದ್ದು ಮೂಡುಬಿದಿರೆ ಆಳ್ವಾಸ್ ಪಿಯು ಕಾಲೇಜಿನ ಅನಂತ್.ಜಿ ಅವರು ಮೆಡಿಕಲ್ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅನಂತ್ ಸಾಧನೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಸಂತಸ ವ್ಯಕ್ತಪಡಿಸಿದರು.

ಅನಂತ್ ಬೆಂಗಳೂರಿನ ಕೆ.ಆರ್.ಪುರಂನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕ ಗಜಾನನ ಭಟ್ ಹಾಗೂ ಹೈಕೋರ್ಟ್‌ನಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿರುವ ಜಯಶೀಲ ದಂಪತಿಗಳ ಪುತ್ರ. ಮೂಲತ: ಹೊನ್ನಾವರದವರಾದ ಇವರು ಸದ್ಯ, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. [2016ರ ಸಿಇಟಿ ಫಲಿತಾಂಶ ಪ್ರಕಟ]

ananth

ಮೆಡಿಕಲ್ ಹಾಗೂ ಅಗ್ರಿಕಲ್ಚರಲ್ ಬಿಎಸ್‍ಸಿ, ವೆಟೆರಿನರಿ ಸೈನ್ಸ್ ನಲ್ಲಿ ಪ್ರಥಮ ಸ್ಥಾನ, ಇಎಸ್‍ಎಂಎಚ್‍ನಲ್ಲಿ 3ನೇ ಸ್ಥಾನ, ಬಿ-ಫಾರ್ಮ ಹಾಗೂ ಡಿ-ಫಾರ್ಮ್‍ದಲ್ಲಿ 6ನೇ ಸ್ಥಾನ ಹಾಗೂ ಇಂಜಿನಿಯರಿಂಗ್‍ನಲ್ಲಿ 18ನೇ ಸ್ಥಾನ ಪಡೆಯುವ ಮೂಲಕ ಅನಂತ್ ಸಾಧನೆ ಮಾಡಿದ್ದಾರೆ. [ಇಂಜಿನಿಯರಿಂಗ್ ಪ್ರವೇಶ ಶುಲ್ಕ ಶೇ 10ರಷ್ಟು ಹೆಚ್ಚಳ]

ಉಚಿತ ಶಿಕ್ಷಣ : 'ಸಿಇಟಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಐದು ಜನರಿಗೆ ಅವರ ಕೋರ್ಸ್ ಮುಗಿಯುವವರೆಗೆ ಸರ್ಕಾರದಿಂದ ಉಚಿತ ಶಿಕ್ಷಣ ನೀಡಲಾಗುತ್ತದೆ' ಎಂದು ಸಚಿವ ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ. ಇದರಿಂದಾಗಿ ಅನಂತ್‌ಗೆ ಉಚಿತ ಶಿಕ್ಷಣ ದೊರೆಯಲಿದೆ.

English summary
The Karnataka Examination Authority (KEA) has announced the results of Common Entrance Test (CET) on Saturday May 28, 2016. Ananth.G from Alvas college Moodbidri has secured first rank in medical with 99.20%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X