ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ ಕಾಮತ್ ರ ಮನೆಯ ಸಿಲಿಂಡರ್ ಸಮಸ್ಯೆಗೆ ಕೇಂದ್ರ ಸಚಿವರ ಸ್ಪಂದನೆ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 26 : ಅಡುಗೆ ಅನಿಲ ಸಿಲಿಂಡರ್ ತೂಕದಲ್ಲಿ ಆದ ವ್ಯತ್ಯಾಸದ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಟ್ವೀಟ್ ಮಾಡಿ, ಕೊನೆಗೂ ತಮ್ಮ ಪಾಲಿನ ನ್ಯಾಯ ಪಡೆದ ಘಟನೆ ನಗರದಲ್ಲಿ ನಡೆದಿದೆ. ಪದ್ಮನಾಭ ಕಾಮತ್ ಅವರ ಮನೆಗೆ ಬಂದಿದ್ದ ಸಿಲಿಂಡರ್ ಖಾಲಿಯಿತ್ತು. ಈ ವಿಚಾರವನ್ನು ವಿತರಕರ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ.

ರೈಲ್ವೆ ಸುರಕ್ಷತೆಗೆ ಸಚಿವ ಗೋಯೆಲ್ ಸುದೀರ್ಘ ಸಭೆ, ಐದು ಸೂಚನೆಗಳುರೈಲ್ವೆ ಸುರಕ್ಷತೆಗೆ ಸಚಿವ ಗೋಯೆಲ್ ಸುದೀರ್ಘ ಸಭೆ, ಐದು ಸೂಚನೆಗಳು

ಕೊನೆಗೆ ಪದ್ಮನಾಭ ಕಾಮತ್ ರ ಮಗ ಮೋಹನ್ ಕಾಮತ್ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮಾಡಿದ ಐದು ನಿಮಿಷದೊಳಗೆ ಪ್ರತಿಕ್ರಿಯೆ ಬಂದು, ವಿತರಕರ ಹೆಸರು, ಸಂಪರ್ಕ ಸಂಖ್ಯೆ ಮತ್ತಿತರ ವಿವರಗಳನ್ನು ಪಡೆದು, ಆಗಿದ್ದ ಸಮಸ್ಯೆ ಬಗೆಹರಿಸಲಾಗಿದೆ.

Central minister solved Mangaluru Kamat's house cylinder problem

ಅಷ್ಟಕ್ಕೂ ಆಗಿದ್ದೇನೆಂದರೆ, ಪದ್ಮನಾಭ ಕಾಮತ್ ಸಿಲಿಂಡರ್ ಬುಕ್ ಮಾಡಿದ್ದರು. ಹೊಸ ಸಿಲಿಂಡರ್ ಬಂದ ನಂತರವೂ ಹಳೆಯದರಲ್ಲಿ ಇನ್ನೂ ಬಳಸಬಹುದಾದಷ್ಟು ಅನಿಲ ಇದ್ದಿದ್ದರಿಂದ ಅದನ್ನು ಪೂರ್ತಿಯಾಗಿ ಬಳಸಿ, ಆ ನಂತರ ಈ ಸಿಲಿಂಡರ್ ಬಳಸುವ ಎಂದುಕೊಂಡಿದ್ದಾರೆ.

ಮೋದಿ ಮೋಡಿಗೊಳಗಾಗಿ ತವರಿಗೆ ಮರಳಿದ ಕನ್ನಡಿಗ ಅಶ್ವಿನ್ ಶೆಟ್ಟಿಮೋದಿ ಮೋಡಿಗೊಳಗಾಗಿ ತವರಿಗೆ ಮರಳಿದ ಕನ್ನಡಿಗ ಅಶ್ವಿನ್ ಶೆಟ್ಟಿ

ಅದರಂತೆ ಪದ್ಮನಾಭ ಕಾಮತ್ ಅವರ ಸೊಸೆ ಸಿಲಿಂಡರ್ ನ ಗ್ಯಾಸ್ ಸ್ಟೌಗೆ ಜೋಡಿಸುವ ಸಂದರ್ಭದಲ್ಲಿ ಅದು ತೂಕವಿಲ್ಲ ಎಂದು ಗಮನಕ್ಕೆ ಬಂದಿದೆ. ಆ ಕೂಡಲೇ ಏಜೆನ್ಸಿ ಅವರನ್ನು ಸಂಪರ್ಕಿಸಲಾಗಿದೆ. ದೂರು ಕೊಟ್ಟಿದ್ದಾರೆ. ಮಾರನೇ ದಿನ ಪರಿಶೀಲನೆಗಾಗಿ ವಿತರಕರ ಕಡೆಯಿಂದ ವ್ಯಕ್ತಿಯೊಬ್ಬರು ಬಂದಿದ್ದಾರೆ.

ಈ ಸಿಲಿಂಡರ್ ಬಳಸಿರುವುದರಿಂದ ಖಾಲಿಯಾಗಿದೆ ಎಂದು ಆತ ಹೇಳಿದ್ದಾರೆ. ಆದರೆ ಮೊಹರು ಆಗಿರುವ ಸಿಲಿಂಡರ್ ಹೇಗೆ ಬಳಸಲು ಸಾಧ್ಯ ಎಂಬ ಕಾಮತ್ ರ ಪ್ರಶ್ನೆಗೆ ಆತನ ಬಳಿ ಉತ್ತರವಿರಲಿಲ್ಲ. ಈ ಸಮಸ್ಯೆ ಏಜೆನ್ಸಿಯವರು ಪರಿಹರಿಸಲ್ಲ ಎಂದೆನಿಸಿದಾಗ ಪದ್ಮನಾಭ ಕಾಮತ್ ರ ಮಗ ಮೋಹನ್ ಕಾಮತ್ ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಟ್ವೀಟ್ ಮಾಡಿದ್ದಾರೆ. ಅದಕ್ಕೆ ಸ್ಪಂದನೆ ಕೂಡ ದೊರೆತು, ವಿತರಕರು ಖಾಲಿ ಸಿಲಿಂಡರ್ ಗೆ ಬದಲಿ ನೀಡಿದ್ದಾರೆ.

English summary
Central Petroleum minister Dharmendra Pradhan solved the problem of Mangaluru Padmanabha Kamat's house gas cylinder problem, after came to know about complaint through twitter. He responded quickly and problem solved.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X