ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಾಮ ಪಂಚಾಯಿತಿಯಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 26 : ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಸುರಕ್ಷೆ, ನೌಕರರ ಕಾರ್ಯಕ್ಷಮತೆ ಹೆಚ್ಚಿಸುವುದು ಹಾಗೂ ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶಗಳಿಂದ ಸಿಸಿಟಿವಿ ಆಳವಡಿಸಲಾಗುತ್ತಿದೆ.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ 1999 ಮತ್ತು ನಿಯಮಗಳು 2000ನ್ನು ಕಟ್ಟುನಿಟ್ಟಾಗಿ ಪಾಲಿಸಿ, ಆಯಾ ಗ್ರಾಮ ಪಂಚಾಯತ್ ಸ್ವಂತ ನಿಧಿಯಿಂದ ವೆಚ್ಚ ಭರಿಸಿ, ಅಗತ್ಯ ಸಂಖ್ಯೆಯ ಸಿಸಿಟಿವಿ ಕ್ಯಾಮೆರಾಗಳನ್ನು ಖರೀದಿ ಮಾಡಿ, ಆಳವಡಿಸಬೇಕು.[ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ಕಾಲಿಗೆ ಬಿದ್ದ ಗ್ರಾ.ಪಂ ಅಧ್ಯಕ್ಷ]

cctv

ಮಾರ್ಗಸೂಚಿ : ಇಂಟರ್ನೆಟ್ ಮೂಲಕ ಸ್ಥಾಟಿಕ್ ಐಪಿ ಆನೇಬಲ್ಡ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. 3 ವರ್ಷಗಳಿಗೆ ಕಡಿಮೆ ಇಲ್ಲದಂತೆ ವಾರಂಟಿ ಹೊಂದಿರುವ ಸುಲಭವಾಗಿ ಹಾಗೂ ಸ್ಥಳೀಯವಾಗಿ ರಿಪೇರಿ ಮಾಡಬಹುದಾದ ಜತೆಗೆ ಉತ್ತಮ ವಿಡಿಯೋ ಮ್ಯಾನೇಜ್ಮೆಂಟ್ ಹೊಂದಿರುವ ಸಿಸಿಟಿವಿ ಖರೀದಿ ಮಾಡಬೇಕು.[ಪಂಚಾಯಿತಿಗಳಲ್ಲಿ ರಾಷ್ಟ್ರಗೀತೆ, ನಾಡಗೀತೆ ಹಾಡುವುದು ಕಡ್ಡಾಯ]

1 ತಿಂಗಳ ಇಮೇಜ್, ವಿಡಿಯೋಗಳನ್ನು ಸಂಗ್ರಹ ಮಾಡುವಂತಿರಬೇಕು. ಅವಶ್ಯಕವೆನಿಸುವ ವಿಡಿಯೋವನ್ನು ಡಿವಿಡಿ ಅಥವಾ ಹಾರ್ಡ್ ಡ್ರೈವ್‌ಗಳಲ್ಲಿ ಸಂಗ್ರಹ ಮಾಡುವಂತಿರಬೇಕು. ವಿದ್ಯುತ್ ಬ್ಯಾಕ್ ಅಪ್ ಸೌಲಭ್ಯ ಕಲ್ಪಿಸಬೇಕು ಸೇರಿದಂತೆ 10 ಸಾಮಾನ್ಯ ಮಾರ್ಗಸೂಚಿಗಳನ್ನು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.[ಪಂಚಾಯಿತಿ ಫಲಿತಾಂಶದಲ್ಲಿ ಹಿಂಗೂ ಆಯ್ತು ನೋಡಿ!]

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ, ಅವುಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಬಗ್ಗೆ ಸಂಬಂಧಪಟ್ಟ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು ನೇರ ಉಸ್ತುವಾರಿ ಮಾಡಬೇಕು.

ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಗ್ರಾಮ ಪಂಚಾಯತ್‌ಗಳು ನಡೆಸುವ ದೃಶ್ಯಾವಳಿಗಳನ್ನು ಕಾಲಕಾಲಕ್ಕೆ ಹಾಗೂ ಅಗತ್ಯವಿದ್ದಾಗಲೆಲ್ಲಾ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‌ಗಳಲ್ಲಿ ಅಂತರ್ಜಾಲದ ಮೂಲಕ ವೀಕ್ಷಿಸಿ ಮೇಲುಸ್ತುವಾರಿ ಮಾಡಲು ಅವಕಾಶವಿದೆ.

English summary
It will be mandatory for all grama panchayat to install CCTV surveillance cameras in office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X