ಮಂಗಳೂರು ಜೈಲು ಮೇಲೆ ಸಿಸಿಬಿ ದಾಳಿ

Posted By:
Subscribe to Oneindia Kannada

ಮಂಗಳೂರು, ಆಗಸ್ಟ್, 25 : ಮಂಗಳೂರಿನ ಜಿಲ್ಲಾ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಜೈಲಿನಲ್ಲಿ ನಿಷೇಧಿತ ವಸ್ತುಗಳ ಸಾಗಾಟವಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಿಢೀರ್ ದಾಳಿ ನಡೆಸಿ, ತಪಾಸಣೆ ಮಾಡಲಾಗುತ್ತಿದೆ.

ಕಾರಾಗೃಹಕ್ಕೆ ಅಕ್ರಮವಾಗಿ ಗಾಂಜಾ, ಇನ್ನಿತರ ನಿಷೇಧಿತ ವಸ್ತುಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿದೆ. ಇದು ಮಾತ್ರವಲ್ಲದೇ ಮಾರ್ಚ್ 20ರಂದು ಜೈಲಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಯುವಕರನ್ನು ಮೇಯರ್ ಕವಿತಾ ಸನಿಲ್ ವಾಹನದಲ್ಲಿ ಬೆನ್ನಟ್ಟಿದ ಪ್ರಕರಣ ಸುದ್ದಿಯಾಗಿತ್ತು.

CCB conducts raid on Mangaluru jail

ಈ ಎಲ್ಲಾ ಘಟನೆಗಳ ಭಾಗವಾಗಿಯೇ ಇಂದು ಜೈಲಿನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಆದೇಶದಂತೆ ಡಿಸಿಪಿ ಹನುಮಂತರಾಯ, ಎಸಿಪಿ ವ್ಯಾಲೆಂಟೈನ್ ಡಿಸೋಜಾ ನಿರ್ದೇಶನದ ಕಾರ್ಯಾಚರಣೆಯಲ್ಲಿ ಸಿಸಿಬಿ ಎಸ್ಐ ಶ್ಯಾಮ್ ಸುಂದರ್, ಶಶಿಧರ ಶೆಟ್ಟಿ, ಹರೀಶ್ ಭಾಗವಹಿಸಿದ್ದರು.

ಹಲ್ಲೆ ಪ್ರಕರಣ ದಾಖಲು : ಮಂಗಳೂರು ಜೈಲಿನಲ್ಲಿ ವಿಚಾರಣಾಧೀನ ಕೈದಿ ಮೇಲೆ ಇನ್ನೊಂದು ತಂಡ ಹಲ್ಲೆ ನಡೆಸಿದ್ದು ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಬಿದ್ ಹಸನ್ (25) ಹಲ್ಲೆಗೊಳಗಾದ ಕೈದಿ. ದನ ಕಳವು ಪ್ರಕರಣದಲ್ಲಿ ಈತ ಆರೋಪಿಯಾಗಿ ಜೈಲು ಸೇರಿದ್ದ. ಗಾಯಗೊಂಡ ಅಬಿದ್‌ನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Officials from the Central Crime Branch (CCB) conducted raid on the Mangaluru district jal on August 25, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ