ಗೋವು ಸಾಗಾಟ ವಿವಾದ, ದಕ್ಷಿಣ ಕನ್ನಡದ ಹಿಂದಿನ ಘಟನೆಗಳು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಉಡುಪಿ, ಆಗಸ್ಟ್ 19 : ಗೋವು ಸಾಗಾಟ ಮಾಡುತ್ತಿದ್ದ ಪ್ರವೀಣ ಪೂಜಾರಿ ಹತ್ಯೆ ಪ್ರಕರಣದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋವು ಸಾಗಾಟದ ವೇಳೆ ಹಲ್ಲೆ ನಡೆದಿರುವುದ ಮೊದಲ ಪ್ರಕರಣವೇನಲ್ಲ. ಹಿಂದೆಯೂ ಇತಂಹ ಘಟನೆಗಳು ನಡೆದು ದೊಡ್ಡ ಸುದ್ದಿಯಾಗಿವೆ.

ಗೋವು ಸಾಗಾಟ ಮಾಡುತ್ತಿದ್ದ ಆರೋಪ ಹೊರಿಸಿ ಪ್ರವೀಣ್ ಪೂಜಾರಿ ಎಂಬಾತನನ್ನು ಅಮಾನುಷವಾಗಿ ಹೊಡೆದು ಕೊಂದ ಘಟನೆಗೆ ಸಂಬಂಧಿಸಿದಂತೆ 17 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಜರಂಗದಳದ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂಬ ಆರೋಪವೂ ಇದೆ.[ದನ ಸಾಗಿಸುತ್ತಿದ್ದ ಬಿಜೆಪಿ ಕಾರ್ಯಕರ್ತನ ಕೊಲೆ]

cow

ಹಿಂದೆಯೂ ಇಂತಹ ಘಟನೆ ನಡೆದಿತ್ತು, ಅವುಗಳ ವಿವರ ಇಲ್ಲಿದೆ [ಗುಜರಾತಿನ ಗೋವುಗಳ ಮೂತ್ರದಲ್ಲಿ ಚಿನ್ನದ ಅಂಶ ಪತ್ತೆ!]

* ಬೆತ್ತಲುಗೊಳಿಸಿದ ಪ್ರಕರಣ : 2015ರ ಮಾ. 13ರ ರಾತ್ರಿ ಹಾಜಬ್ಬ ಮತ್ತು ಹಸನಬ್ಬ ಎಂಬುವವರು ಮೂಡಬೆಟ್ಟಿನಿಂದ ಕರು ಸಾಗಿಸುತ್ತಿದ್ದರು ಎಂದು ಆರೋಪಿಸಿ ವಾಹನ ತಡೆದಿದ್ದ ಸಂಘ ಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿ, ಇಬ್ಬರನ್ನೂ ಬೆತ್ತಲೆ ಮಾಡಿ ಫೋಟೋ ತೆಗೆದಿದ್ದರು.[ಉಡುಪಿಯಲ್ಲಿ ಹೋರಿ ಪ್ರಾಣ ರಕ್ಷಿಸಿದ ಜಮಾತ್ ಸದಸ್ಯರು]

ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದಿದ್ದವು. ಈ ಪ್ರಕರಣದ ಬಳಿಕ ಉಡುಪಿಯಲ್ಲಿ 24 ಗಂಟೆಗಳ ಕಾಲ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಈ ಬಗ್ಗೆ ಸಿಓಡಿ ತನಿಖೆಗೆ ಆದೇಶ ನೀಡಲಾಗಿತ್ತು. 13 ಆರೋಪಿಗಳಲ್ಲಿ ಒಬ್ಬ ಮೃತಪಟ್ಟಿದ್ದು ಕೊನೆಗೆ ಸಾಕ್ಷ್ಯಗಳ ಕೊರತೆಯಿಂದಾಗಿ ಆರೋಪಿಗಳು ದೋಷ ಮುಕ್ತರಾಗಿದ್ದರು.[ಸತ್ತ ಕರುವಿಗೆ ನ್ಯಾಯ ಕೇಳುತ್ತಿರುವ 'ಪುಣ್ಯಕೋಟಿ'ಯ ಕಥೆ]

* ಕೃಷ್ಣಯ್ಯ ಪಾಟಾಳಿ ಪ್ರಕರಣ : 2010ರಲ್ಲಿ ಸಾಲಿಗ್ರಾಮದ ಜಾನುವಾರು ದಲ್ಲಾಳಿ ಕೃಷ್ಣಯ್ಯ ಪಾಟಾಳಿ (65) ಅನ್ಯ ಕೋಮಿನ ಜನರಿಗೆ ಗೋವು ಕೊಡಿಸುತ್ತಿರುವ ಆರೋಪದಲ್ಲಿ ಸಂಘ ಪರಿವಾರದ 25 ಮಂದಿಯ ತಂಡವು ಶ್ರೀಮಹಾಲಿಂಗೇಶ್ವರ ದೇವಳದ ಪಾಟಾಳಿಯಾಗಿದ್ದ ಕೃಷ್ಣಯ್ಯ ಅವರನ್ನು ರಾತ್ರಿ ಮನೆಯಿಂದ ಹೊರಗೆಳೆದು ಹಲ್ಲೆ ನಡೆಸಿದ್ದರು, ಅವರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದರೂ ಬಳಿಕ ಸಾಕ್ಷ್ಯ ಕೊರತೆಯಿಂದಾಗಿ ದೋಷಮುಕ್ತರಾಗಿದ್ದಾರೆ.

* ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಎನ್ಎಫ್ ಸಿಬ್ಬಂದಿ ನಕ್ಸಲ್ ಎಂದು ಶಂಕಿಸಿ ವಾಹನದಲ್ಲಿ ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ಸುರತ್ಕಲ್‌ನ ಕಬೀರ್‌ಗೆ ಗುಂಡು ಹೊಡೆದಿದ್ದರು. ಕಬೀರ್ ಸಾವಿನ ಪರ ವಿರೋಧ ಪ್ರತಿಭಟನೆ ನಡೆದಿತ್ತು. ಸರ್ಕಾರ ಕಬೀರ್ ಕುಟುಂಬಕ್ಕೆ 10ಲಕ್ಷ ರೂ. ಪರಿಹಾರ ನೀಡಿದ್ದು ಟೀಕೆಗೆ ಕಾರಣವಾಗಿತ್ತು.

* 2015 ರ ಆ. 6 ರಂದು ಅಜೇಕಾರಿನಲ್ಲಿ ಅನ್ವರ್ ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ವಾಹನವನ್ನು ತಡೆದಾಗ ಪೊಲೀಸರಿಗೆ ತಲ್ವಾರಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ಬೆನ್ನತ್ತಿದ ಪೊಲೀಸರು ಕಾರ್ಕಳದಲ್ಲಿ ನಡೆಸಿದ ಎನ್ ಕೌಂಟರ್ ನಿಂದ ಆತ ಸಾವನ್ನಪ್ಪಿದ್ದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a shocking incident, a BJP worker Praveen Poojary was allegedly beaten up to death for transporting cows in a vehicle. Know about three more incidents at Dakshina Kannada district.
Please Wait while comments are loading...