ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಥೋಲಿಕ್ ಶಾಲೆಗಳಲ್ಲಿ ಮಕ್ಕಳಿಗೆ ಇನ್ನು ಸಂವಿಧಾನ ಕಲಿಕೆ ಕಡ್ಡಾಯ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು ಜುಲೈ 12 : ಸಂವಿಧಾನದ ಪರಿಚಯ ಪ್ರತಿ ನಾಗರಿಕನಿಗೂ ಇರಲೇಬೇಕಾಗಿರುವುದು ಅತ್ಯಂತ ಅಗತ್ಯ. ಭಾರತೀಯ ಸಂವಿಧಾನದ ಕುರಿತು ಬಾಲ್ಯದಿಂದಲೇ ಮಕ್ಕಳಿಗೆ ಅರಿವು ಮೂಡಿಸುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಕೆಥೋಲಿಕ್ ಕ್ರಿಶ್ಚಿಯನ್ ಆಡಳಿತ ಮಂಡಳಿಯ ಶಾಲೆಗಳಲ್ಲಿ ಇನ್ನು ಭಾರತೀಯ ಸಂವಿಧಾನ ಕಲಿಕೆ ಕಡ್ಡಾಯಗೊಳ್ಳಲಿದೆ.

ಕೆಥೋಲಿಕ್ ಕ್ರಿಶ್ಚಿಯನ್ ಚರ್ಚ್ ಆಡಳಿತದ ಶಾಲೆಗಳಲ್ಲಿ ಇನ್ನು ಭಾರತೀಯ ಸಂವಿಧಾನ ಕಲಿಕೆ ಕಡ್ಡಾಯವಾಗಲಿದೆ. ರಾಜ್ಯ ಸೇರಿದಂತೆ ದೇಶದ ಎಲ್ಲೆಡೆ ಕೆಥೋಲಿಕ್ ಕ್ರಶ್ಚಿಯನ್ ಚರ್ಚ್ ಆಡಳಿತದ 1 ರಿಂದ 10 ನೇ ತರಗತಿಯ ವರೆಗೆನ ಶಾಲೆಗಳಲ್ಲಿ ಇನ್ನು ಭಾರತೀಯ ಸಂವಿಧಾನವನ್ನು ಗುರುವಾರ ಪಠ್ಯವಾಗಿ ಕಲಿಸಲು ತೀರ್ಮಾನಿಸಲಾಗಿದೆ.

ಮಕ್ಕಳಲ್ಲಿ ಕೀಳರಿಮೆ, ತಾರತಮ್ಯ ಮೂಡಿಸುವ ಮಾನಿಟರ್ ಪದ್ಧತಿ ಬೇಕೆ?ಮಕ್ಕಳಲ್ಲಿ ಕೀಳರಿಮೆ, ತಾರತಮ್ಯ ಮೂಡಿಸುವ ಮಾನಿಟರ್ ಪದ್ಧತಿ ಬೇಕೆ?

ಭಾರತೀಯ ಕೆಥೋಲಿಕ್ ಧರ್ಮಾಧ್ಯಕ್ಷರ ಮಂಡಳಿಯ ಶಿಕ್ಷಣ ಮತ್ತು ಸಂಸ್ಕೃತಿ ವಿಭಾಗ ಈ ಕುರಿತು ತೀರ್ಮಾನಿಸಿದ್ದು, ಸಂವಿಧಾನದ ಪೀಠಿಕೆಯಲ್ಲಿ ನಮೂದಿತ ವಿಷಯ ಕಲಿಸಲು 9 ಪುಟಗಳ ಕೈಪಿಡಿ ಸಿದ್ದಗೊಳಿಸಲಾಗಿದ್ದು, ಇದೇ ಜೂ.11ರಂದು ಬಿಡುಗಡೆಗೊಳಿಸಲಾಗಿದೆ.

Catholic schools to teach Indian Constitution to students

ಬೆಂಗಳೂರಿನಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದಿದ್ದ ಕೆಥೋಲಿಕ್ ಧರ್ಮಾಧ್ಯಕ್ಷರ 33 ನೇ ಅಧಿವೇಶನದಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಈ ಅಧಿವೇಶನದಲ್ಲಿ ದೇಶದ 176 ಮಂದಿ ಕ್ರೈಸ್ತ ಧರ್ಮಾಧ್ಯಕ್ಷರು ಭಾಗವಹಿಸಿದ್ದರು.

ಈ ಆಧಿವೇಶನದಲ್ಲಿ ಕೈಗೊಂಡ 20 ಪ್ರಮುಖ ನಿರ್ಣಯಗಳಲ್ಲಿ ಈ ಸಂವಿಧಾನ ಕಲಿಕಾ ನಿರ್ಣಯ ಕೂಡ ಒಂದಾಗಿದೆ. ಈ ಪ್ರಕ್ರಿಯೆಗೆ ಈಗಾಗಲೇ ಕೇರಳದ ಶಾಲೆಗಳಲ್ಲಿ ಚಾಲನೆ ನೀಡಲಾಗಿದೆ.

Catholic schools to teach Indian Constitution to students

ಶಾಲೆಗಳಲ್ಲಿ ಭಾರತೀಯ ಸಂವಿಧಾನವನ್ನು 4 ಹಂತಗಳಲ್ಲಿ ಕಲಿಸಲು ತೀರ್ಮಾನಿಸಲಾಗಿದೆ. ಸಂವಿಧಾನದ ಪೀಠಿಕೆಯಲ್ಲಿರುವ 85 ಶಬ್ದಗಳನ್ನು ಮಕ್ಕಳಿಗೆ ಕಂಠ ಪಾಠ ಮಾಡಿಸುವುದು ಹಾಗೂ ಆ ಕುರಿತು ಮಕ್ಕಳಲ್ಲಿ ಆಶು ಭಾಷಣ ಏರ್ಪಡಿಸುವುದು.

ಸಂವಿಧಾನದ ಪೀಠಿಕೆಯ ಮಹತ್ವ ತಿಳಿಸುವುದು ಮತ್ತು ಗುಂಪು ಚರ್ಚೆ, ಕ್ವಿಜ್ ಪ್ರಬಂಧ ಸ್ಪರ್ದೆ ಏರ್ಪಡಿಸುವುದು ಸೇರಿದಂತೆ ಇನ್ನಿತರ ರೀತಿಯಲ್ಲಿ ಸಂವಿಧಾನ ಕಲಿಸಲು ತೀರ್ಮಾನಿಸಲಾಗಿದೆ.

English summary
Catholic schools going to introduce a syllabus on Indian constitution. Catholic Bishop's conference decided to introduce Indian constitution as a compulsory syllabus to Catholic institution school students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X