ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : 19 ಎಟಿಎಂಗಳಿಂದ ಕೋಟ್ಯಾಂತರ ರೂ. ನಾಪತ್ತೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜುಲೈ 26 : ಎಟಿಎಂಯಂತ್ರ ಒಡೆದಿಲ್ಲ, ಕಳ್ಳರೂ ನುಗ್ಗಿಲ್ಲ ಆದರೂ ಎಟಿಎಂನಲ್ಲಿದ್ದ ಕೋಟ್ಯಾಂತರ ರೂ. ಮಾತ್ರ ನಾಪತ್ತೆಯಾಗಿದೆ. ಇದು ಮಂಗಳೂರು ನಗರದ ಸುಮಾರು 19 ಎಟಿಎಂಗಳಲ್ಲಿ ಹಣ ನಾಪತ್ತೆಯಾದ ಕಥೆ.

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇರುವ ಎಸ್‌ಬಿಐ ಬ್ಯಾಂಕಿನ ಎಟಿಎಂಗಳಿಗೆ ಹಣ ತುಂಬಿಸುವ ಜವಾಬ್ದಾರಿಯನ್ನು 'ಕ್ಯಾಷ್‍ಟೆಕ್' ಎನ್ನುವ ಮುಂಬೈ ಮೂಲದ ಸಂಸ್ಥೆಗೆ ವಹಿಸಲಾಗಿತ್ತು. 2012ರಲ್ಲಿ ಸಂಸ್ಥೆ ಮಂಗಳೂರಿನ ಯುವಕರನ್ನು ಆಯ್ಕೆ ಮಾಡಿ ಜಿಲ್ಲೆಯ 48 ಎಟಿಎಂಗಳಿಗೆ ಹಣ ತುಂಬುವ ಕೆಲಸವನ್ನು ನೀಡಿತ್ತು. [ಹಣದ ಜೊತೆ ಎಟಿಎಂ ವಾಹನ ಅಪಹರಿಸಿದವರು ಸಿಕ್ಕಿಬಿದ್ರು]

atm

2 ತಿಂಗಳ ಹಿಂದೆ ಸಂಸ್ಥೆಯೊಂದಿಗಿನ ಒಪ್ಪಂದ ಕೊನೆಗೊಂಡಿದ್ದರಿಂದ ಮಂಗಳೂರಿನ ಮ್ಯಾನೇಜರ್ ಆಗಿದ್ದ ಪ್ರದೀಪ್ ಎಂಬಾತನಿಗೆ ಬ್ಯಾಲೆನ್ಸ್ ಶೀಟ್ ತೋರಿಸಲು ಏಜೆನ್ಸಿ ಸೂಚನೆ ನೀಡಿತ್ತು. ಪ್ರದೀಪ್ ಕೇವಲ 29 ಎಟಿಎಂಗಳ ಲೆಕ್ಕವನ್ನು ಕೊಟ್ಟಿದ್ದರು. ಉಳಿದ 19 ಎಟಿಎಂಗಳ ಲೆಕ್ಕವನ್ನು ನೀಡಿರಲಿಲ್ಲ. [ಮಿತಿ ಮೀರಿದ ಎಟಿಎಂ ಬಳಕೆ ಕೈ ಕಚ್ಚಲಿದೆ]

ತಿಂಗಳು ಕಳೆದರೂ 19 ಎಟಿಎಂಗಳ ಲೆಕ್ಕಸಿಗದಿದ್ದಾಗ ಮುಂಬೈ ಹಾಗೂ ಬೆಂಗಳೂರಿನ ಏಜೆನ್ಸಿಯ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಆಗ 19 ಎಟಿಎಂಗಳಿಂದ 2 ತಿಂಗಳಲ್ಲಿ ಬರೋಬ್ಬರಿ 4,13,57,500 ಕೋಟಿ ರೂ.ಗಳಷ್ಟು ಹಣ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಹೇಗೆ ನಡೆಯಿತು ಕಳ್ಳತನ? : ಎಟಿಎಂಗೆ ಹಣ ಹಾಕಲು ಬರುತ್ತಿದ್ದವರೇ ಅಲ್ಲಿಂದ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಒಳಗಿರುವ ಎಟಿಎಂನಿಂದಲೂ 21 ಲಕ್ಷ ರೂ. ಹಣ ಲಪಟಾಯಿಸಲಾಗಿದೆ.

ಎಟಿಎಂಗೆ ಹಾಕಲು ಬರುತ್ತಿದ್ದ ಆರೋಪಿಗಳು ಮೊದಲು ಎಟಿಎಂಗೆ ಹಣ ತುಂಬುತ್ತಿದ್ದರು. ನಂತರ ಕೆಲವೇ ಸಮಯದಲ್ಲಿ ಮತ್ತೆ ಅದೇ ಎಟಿಎಂಗೆ ಬಂದು ಲಕ್ಷಾಂತರ ರೂ. ಪಡೆಯುತ್ತಿದ್ದರು. ಒಟ್ಟು 19 ಆರೋಪಿಗಳು ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ.

ಎಲ್ಲರೂ ನಾಪತ್ತೆ : ಈಗ ಪ್ರಕರಣದ ಎಲ್ಲಾ ಆರೋಪಿಗಳು ನಾಪತ್ತೆಯಾಗಿದ್ದಾರೆ. ಪ್ರದೀಪ್‍ ಅವರನ್ನು ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸಿದ್ದಾಗ ತಾವು ಹಣ ತೆಗೆದಿಲ್ಲ ಎಂದು ಹೇಳಿದ್ದಾರೆ. ಆದರೆ, ವಂಚನೆಯ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದಂತೆಯೇ ಉದಯ, ಮಹೇಶ್, ಗುರುಪ್ರಸಾದ್, ಶ್ರೀಧರ್, ಹರೀಶ್ ಸೇರಿ ಒಟ್ಟು 19 ಮಂದಿ ತಲೆಮರೆಸಿಕೊಂಡಿದ್ದಾರೆ.

ತಮ್ಮ ಏಜೆನ್ಸಿಯವರೇ ಹಣವನ್ನು ಪಡೆದು ವಂಚನೆ ಮಾಡಿದ್ದಾರೆ ಎಂದು ಏಜೆನ್ಸಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಕೋಟ್ಯಾಂತರ ರೂಪಾಯಿ ಹಣವನ್ನು ಏಜೆನ್ಸಿ ಕೆಲವು ದಿನಗಳ ಗಡುವಿನಲ್ಲಿ ಬ್ಯಾಂಕಿಗೆ ಪಾವತಿ ಮಾಡಬೇಕಾಗಿದೆ.

English summary
In a sensational incident over Rs. 4 core was stolen from different ATMs of State Bank Of India (SBI)bank in Mangaluru city. Cash loader behind the theft. Cash loader agency lodged a complaint in Pandeshwar police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X