ಅಪಘಾತದಲ್ಲಿ ಕಾಸರಗೋಡಿನ ನಾಲ್ವರ ಸಾವು

Posted By: Chethan
Subscribe to Oneindia Kannada

ಮಂಗಳೂರು: ಬೆಳ್ಳಂಬೆಳಗ್ಗೆ ಕಾರು ಹಾಗೂ ಟ್ರಕ್ ನಡುವೆ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ತಂದೆ, ತಾಯಿ, ಮಗ ಹಾಗೂ ಓರ್ವ ಯುವಕ ಸೇರಿದಂತೆ ಒಟ್ಟು ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

ಇಲ್ಲಿನ ಮಂಜೇಶ್ವರದ ಎ.ಜೆ ಆಂಗ್ಲ ಮಾಧ್ಯಮ ಶಾಲಾ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ 4ರ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ.

Car- truck collision; 4 persons from a family died

ಕೇರಳದ ತ್ರಿಶೂರು ನಿವಾಸಿಗರಾದ ಡಾ. ರಾಮನಾರಾಯಣ ಸಿಕೆ (52) ಪತ್ನಿ ವತ್ಸಲ, ಮಗ ರಂಜಿತ್‌ (20) ಮತ್ತು ಈತನ ಗೆಳೆಯ ನಿತಿನ್‌ (20) ಘಟನೆಯಲ್ಲಿ ಮತಪಟ್ಟ ದುರ್ದೈವಿಗಳು ಎಂದು ತಿಳಿದು ಬಂದಿದೆ. ಮೃತ ರಂಜಿತ್‌ ಚಿಕ್ಕಮಗಳೂರಿನ ಆಯುರ್ವೇದಿಕ್ ಮೆಡಿಕಲ್‌ ಕಾಲೇಜಿನಲ್ಲಿ ಓದುತ್ತಿದ್ದನು. ರಜೆ ನಿಮಿತ್ತ ಕೇರಳಕ್ಕೆ ತೆರಳಿದ್ದನು.

ತ್ರಿಶೂರಿನಿಂದ ಮಂಗಳೂರು ಕಡೆ ಸಾಗುತ್ತಿದ್ದ ಕಾರು ಹಾಗೂ ಎದುರಿನಿಂದ ಆಗಮಿಸಿದ ಟ್ರಕ್ ಪರಸ್ಪರ ಡಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Four persons, including a mother, son killed in an accident between car and truck. The incident took place in the early hours of Monday, in front of A.J. English medium school of Manjeshwara. All the four who died belong to same family in Kasaragod.
Please Wait while comments are loading...