ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚೀನಾಕ್ಕೆ ಅಡಿಕೆ ರಫ್ತು ಮಾಡಲಿದೆ ಕ್ಯಾಂಪ್ಕೋ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜುಲೈ 07 : ಅಡಿಕೆ ಬೆಳೆಗಾರರಿಗೆ ಇದು ಸಿಹಿ ಸುದ್ದಿ. ಭಾರತದಿಂದ ಅಡಿಕೆಯನ್ನು ಚೀನಾ ಆಮದು ಮಾಡಿಕೊಳ್ಳಲಿದ್ದು, ಕ್ಯಾಂಪ್ಕೋದಿಂದ ಚೀನಾಕ್ಕೆ ಅಡಿಕೆ ರಫ್ತು ಆಗಲಿದೆ. ಸದ್ಯ, 32,000 ಕ್ವಿಂಟಾಲ್ ಎಳೆ ಅಡಿಕೆ ಬೇಕೆಂದು ಚೀನಾ ಬೇಡಿಕೆ ಸಲ್ಲಿಸಿದೆ.

ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅವರ ಈ ಬಗ್ಗೆ ಮಾಧ್ಯಮಗಳಿಗೆ ವಿವರಗಳನ್ನು ನೀಡಿದ್ದಾರೆ. ಆರಂಭಿಕ ಹಂತದಲ್ಲಿ 32,000 ಕ್ವಿಂಟಾಲ್‌ ಪರಿಷ್ಕರಿಸಿದ ಎಳೆ ಅಡಿಕೆಗೆ ಚೀನಾದಿಂದ ಬೇಡಿಕೆ ಬಂದಿದ್ದು, ಕಾಂಪ್ಕೋ ಮೊದಲ ಕಂತಿನಲ್ಲಿ 10 ಟನ್‌ ಅಡಿಕೆಯನ್ನು ರಫ್ತು ಮಾಡಲು ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ತಿಳಿಸಿದ್ದಾರೆ. [ಅಡಿಕೆ ಮಾನ ಕಾಪಾಡಲು ಮುಂದಾದ ಕೇಂದ್ರ ಸರ್ಕಾರ]

arecanut

ಚೀನಾದಲ್ಲಿ ಎಳೆ ಅಡಿಕೆಯಿಂದ ಮೌತ್‌ ಫ್ರೆಶ್‌ನರ್ ತಯಾರಿಸಲಾಗುತ್ತಿದೆ. ಚೀನದ ಕೊವ್ ವೆಯ್‌ ವಾಂಗ್‌ ಕಂಪೆನಿಯೊಂದಿಗೆ ಕ್ಯಾಂಪ್ಕೋ 2ನೇ ಸುತ್ತಿನ ಮಾತುಕತೆ ನಡೆಸಿದೆ. ಚೀನಾದಿಂದ ತಜ್ಞರ ತಂಡ ಮಂಗಳೂರಿಗೆ ಆಗಮಿಸಿದ್ದು ಅಡಿಕೆ ಬೆಳೆಯುವ ಪ್ರದೇಶಗಳಿಗೆ ಭೇಟಿ ನೀಡುತ್ತಿದೆ ಎಂದು ಹೇಳಿದರು. [ಅಡಿಕೆ ಬೆಳೆಗಾರರ ಸಮಸ್ಯೆ ನಿವಾರಣೆಗೆ ಒಂದಾದ ಸಂಸದರು]

ಚೀನಾದ ತಂಡ ಎಳೆ ಅಡಿಕೆ ಪರಿಷ್ಕರಣೆ ಬಗ್ಗೆ ಕ್ಯಾಂಪ್ಕೋ ನೌಕರರಿಗೆ ತರಬೇತಿ ನೀಡಲಿದ್ದು ಆರಂಭದಲ್ಲಿ ಪುತ್ತೂರು ಹಾಗೂ ಶಿವಮೊಗ್ಗದಲ್ಲಿ ತರಬೇತಿಯನ್ನು ಆಯೋಜಿಸಲಾಗುತ್ತದೆ. ಎಳೆ ಅಡಿಕೆಯನ್ನು ಬೇಯಿಸಿ ಒಣಗಿಸಲು ಅವಶ್ಯವಿರುವ ಓವನ್‌ ಅನ್ನು ಪುತ್ತೂರಿನಲ್ಲಿ ಸಿದ್ಧಪಡಿಸಲಾಗುತ್ತಿದ್ದು ಎಂದು ವಿವರಣೆ ನೀಡಿದರು.

ಕೆಜಿಗೆ 160 ರೂ. : ಅಡಿಕೆ ಬೆಲೆಯ ಬಗ್ಗೆ ಚರ್ಚೆ ನಡೆಯುತ್ತಿವೆ. ಚೀನಾವು 160 ರೂ. ಬೆಲೆಯಲ್ಲಿ ಕೆಜಿ ಅಡಿಕೆಯನ್ನು ಖರೀದಿ ಮಾಡಲು ಚಿಂತನೆ ನಡೆಸಿದೆ. ಅಡಿಕೆ ಬೆಲೆ, ಖರ್ಚುಗಳನ್ನು ಪರಿಗಣಿಸಿ ಬೆಲೆ ನಿಗದಿಪಡಿಸಲಾಗುವುದು. ಒಟ್ಟು ವ್ಯವಹಾರ ನಡೆಸಲು ಕ್ಯಾಂಪ್ಕೋ ಅಧಿಕಾರಿಗಳ ತಂಡವೊಂದನ್ನು ನೇಮಕ ಮಾಡಲಾಗಿದೆ.

ಪ್ರಥಮ ಹಂತದಲ್ಲಿ 10 ಟನ್‌ ಪರಿಷ್ಕರಿಸಿದ ಅಡಿಕೆ ಒಳಗೊಂಡ 1 ಕಂಟೈನರ್‌ ಅನ್ನು ಶೀಘ್ರದಲ್ಲಿಯೇ ಚೀನಾಕ್ಕೆ ಕಳುಹಿಸಲಾಗುತ್ತದೆ. ಪ್ರಾರಂಭಿಕ ಹಂತದ ವ್ಯವಹಾರ ಯಶಸ್ವಿಯಾದರೆ ದೊಡ್ಡ ಪ್ರಮಾಣದಲ್ಲಿ ಪರಿಷ್ಕರಿಸಿದ ಎಳೆ ಅಡಿಕೆಯನ್ನು ರಫ್ತು ಮಾಡಲಾಗುತ್ತದೆ.

English summary
Central Arecanut & Coca Marketing & Processing Co-operative Ltd (CAMPCO) president Konkodi Padmanabha said, CAMPCO is working on plans to export processed arecanut to China, two rounds of talks have already been held with the Kou Wei Wang company in China for the deal. It is a manufacturer of mouth fresheners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X