• search

ಭಾರತ್ ಬಂದ್: ರಾಜ್ಯ ಸರಕಾರವನ್ನು ಹುರಿದು ಮುಕ್ಕಿದ ಹಿರಿಯ ಕಾಂಗ್ರೆಸ್ ಮುಖಂಡ

By Balaraj Tantry
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    Bharat Bandh : ಮೈತ್ರಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ

    ಮಂಗಳೂರು, ಸೆ 9: ಭಾರತ್ ಬಂದ್ ಕರೆದು ದೇಶಕ್ಕೆ ನಷ್ಟ ಮಾಡುವುದೇ ಮೊದಲು ಅಪರಾಧ, ಅದರಲ್ಲೂ ಆಡಳಿತ ಪಕ್ಷದವರೇ ಬಂದ್ ಗೆ ಕರೆನೀಡುವುದೆಂದರೆ ಏನರ್ಥ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಲೋಕಸಭಾ ಸದಸ್ಯ ಜನಾರ್ಧನ ಪೂಜಾರಿ, ಕಾಂಗ್ರೆಸ್ ಪಕ್ಷವನ್ನು ಬೆಂಡೆತ್ತಿದ್ದಾರೆ.

    LIVE: ಪ್ರತಿಭಟನೆಗೆ ಸೋನಿಯಾ, ಮನಮೋಹನ್ ಸಿಂಗ್ ಹಾಜರು

    ನಗರದ ಕುದ್ರೋಳಿ ದೇವಾಲಯದಲ್ಲಿ ಇಂದು (ಸೆ 9) ಮಾತನಾಡುತ್ತಿದ್ದ ಜನಾರ್ಧನ ಪೂಜಾರಿ, ಬಂದ್ ಗೆ ಕರೆನೀಡುವ ಪಕ್ಷದವರೇ, ಇದರಿಂದಾಗುವ ನಷ್ಟವನ್ನು ಭರಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಹಿಂದೆಯೇ ಆದೇಶಿಸಿದೆ.

    Calling bandh is illegal as per SC, senior Congress leader Janardhana Poojary lambastes coalition government

    ಆದರೂ, ಕಾಂಗ್ರೆಸ್ ಪಕ್ಷ ಬಂದ್ ಕರೆನೀಡುವ ಮೂಲಕ, ನಮ್ಮ ನ್ಯಾಯಾಲಯ ವ್ಯವಸ್ಥೆಯನ್ನು ಅಣಕವಾಡಿದೆ ಎಂದು ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ರಮಾನಾಥ್ ರೈಗೆ ಶುರುವಾಯ್ತು ಹೊಸ ಮಂಡೆಬಿಸಿ

    ಕಾಂಗ್ರೆಸ್=ಜೆಡಿಎಸ್ ಸಮ್ಮಿಶ್ರ ಸರಕಾರದ ವಿರುದ್ದ ಯಾರಾದರೂ ಕೇಸ್ ಹೂಡಿದರೆ ಅದರಿಂದ ಪಾರಾಗಲು ಸಾಧ್ಯವೇ ಎಂದು ಪ್ರಶ್ನಿಸಿರುವ ಪೂಜಾರಿ, ಬಂದ್ ಕರೆ ಕೊಟ್ಟ ನಂತರ ದೇಶದಲ್ಲಿ ಆಗುವ ಸಾವಿರಾರು ಕೋಟಿ ನಷ್ಟಕ್ಕೆ ಪಕ್ಷ ಮತ್ತು ಬಂದ್ ಗೆ ಕರೆ ಕೊಟ್ಟವರೇ ಹೊಣೆಯಾಗುತ್ತಾರೆಂದು, ಪೂಜಾರಿ ಸ್ವಪಕ್ಷೀಯರನ್ನೇ ಎಚ್ಚರಿಸಿದ್ದಾರೆ.

    ಬಂದ್ ನಿಂದ ಬೆಲೆ ಇಳಿಯುವ ಹಾಗಿದ್ದರೇ

    ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಥವಾ ಜನಾರ್ಧನ ಪೂಜಾರಿ ಬಂದ್ ಗೆ ಕರೆನೀಡಿದರೆ ಅದು ಕಾನೂನು ವಿರೋಧಿ ನಿಲುವಾಗುತ್ತದೆ. ದೇಶ ಮತ್ತು ರಾಜ್ಯ ಸರಕಾರ ಸೆಸ್ ಕಮ್ಮಿ ಮಾಡಿದರೆ, ಅದರ ಲಾಭ ಜನರಿಗೆ ಸಿಗುತ್ತದೆ ಅನ್ನೋದು ತಪ್ಪು. ಹಿಂದೆ ನಾನೂ ಹಣಕಾಸು ಸಚಿವನಾಗಿದ್ದವನು, ಸೆಸ್ ಕಮ್ಮಿ ಮಾಡಿದರೆ ಸರಕಾರ ನಡೆಯುವುದು ಹೇಗೆ ಎಂದು ಪೂಜಾರಿ ಹೇಳಿದ್ದಾರೆ.

    ಭಾರತ್ ಬಂದ್: ಕರಾವಳಿಯಲ್ಲಿ ತಟ್ಟಿದ ಪ್ರತಿಭಟನೆಯ ಬಿಸಿ

    ಬೆಲೆ ಏರಿಕೆ ನಿಯಂತ್ರಣಕ್ಕೆ ಮೊದಲು ಕೇಂದ್ರ ಸರಕಾರ ಮುಂದಾಗಬೇಕು. ಅಕ್ರಮ ದಾಸ್ತಾನುದಾರರನ್ನು ಯಾವುದೇ ಮುಲಾಜಿಲ್ಲದೇ, ಜೈಲಿಗೆ ಕಳುಹಿಸಬೇಕು. ಆ ಧೈರ್ಯ ಇರುವವರು ಯಾರು ಎನ್ನುವುದೇ ದೊಡ್ಡ ಪ್ರಶ್ನೆ.

    ಭಾರತ ಬಂದ್ ಇಲ್ವಾ ಸಾರ್? ನನ್ನದು ಒಂದೇ ಉತ್ತರ 'ಗೊತ್ತಿಲ್ಲ'!

    ಸದ್ಯ ಅಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಇರುವವರು ಪ್ರಧಾನಿ ಮೋದಿ ಮಾತ್ರ, ಆದರೆ ಅವರು ಅದಕ್ಕೆ ಮುಂದಾಗುತ್ತಾರೋ ಇಲ್ಲವೋ ಯಾರಿಗೆ ಗೊತ್ತು ಎಂದು ಪೂಜಾರಿ ಹೇಳಿದರು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    As per Supreme Court calling Bandh is illegal, Senior Congress leader and former union minister Janardhana Poojary lambastes coalition government for calling bandh.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more