ಮಂಗಳೂರು: ಸ್ಮಿತಾ ಠಾಕ್ರೆ ಜೊತೆಗಿದ್ದ ಮಹಿಳೆ ಮೇಲೆ ಕ್ಯಾಬ್ ಚಾಲಕನಿಂದ ಹಲ್ಲೆ

Posted By:
Subscribe to Oneindia Kannada

ಮಂಗಳೂರು, ಮಾರ್ಚ್ 13: ಮಂಗಳೂರು ಕ್ಯಾಬ್ ಚಾಲಕನೋರ್ವ ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳೆಕಿಗೆ ಬಂದಿದೆ. ಬೆಳ್ತಂಗಡಿ ಮೂಲದ ಕ್ಯಾಬ್ ಚಾಲಕ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದ್ದು ಮಂಗಳೂರು ಹೊರವಲಯದ ಬಜ್ಪೆ ಬಳಿ ಈ ಘಟನೆ ನಡೆದಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಈ ಘಟನೆಗೆ ಸಂಬಂಧಿಸಿದಂತೆ ನಗರದ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬೆಳ್ತಂಗಡಿ ಮೂಲದ ಕಾರು ಚಾಲಕ ದಯಾನಂದ್ (30) ಎಂಬಾತನ್ನು ಪೋಲಿಸರು ಬಂಧಿಸಿದ್ದಾರೆ .

ಕೋಳಿ ಅಂಕದ ಚಟ ವಿರೋಧಿಸಿದ ಹೆಂಡತಿಯ ತಲೆ ಒಡೆದ ಭೂಪ

ಮಹಾರಾಷ್ಟ್ರದ ಶಿವಸೇನೆಯ ಸಂಸ್ಥಾಪಕ ಬಾಳಾ ಠಾಕ್ರೆ ಪುತ್ರ ಜಯದೇವ್ ಠಾಕ್ರೆಯವರ ವಿಚ್ಛೇದಿತ ಪತ್ನಿ ಸ್ಮಿತಾ ಠಾಕ್ರೆ ಮತ್ತು ಅವರ ಸ್ನೇಹಿತೆ ಶರೀನ್ ಮಂತ್ರಿ ಎಂಬವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ದೇವಾಲಯಗಳ ಭೇಟಿ ನೀಡುವ ಉದ್ದೇಶದಿಂದ ಮಂಗಳೂರಿಗೆ ಬಂದಿದ್ದರು. ಬಂಟ್ವಾಳ, ಬೆಳ್ತಂಗಡಿ ಆಸುಪಾಸಿನ ದೇವಾಲಯಗಳಿಗೆ ಭೇಟಿ ನೀಡುವ ಉದ್ದೇಶದಿಂದ ಮಂಗಳೂರು ವಿಮಾನ ನಿಲ್ದಾಣದಿಂದ ಪ್ರವಾಸಿ ಇನ್ನೋವಾ ಕಾರನ್ನು ಬಾಡಿಗೆಗೆ ಗೊತ್ತುಪಡಿಸಿದ್ದರು.

Cab driver assaulted woman accompanied by Smitha Thakray arrested

ಬಂಟ್ವಾಳ ಹಾಗು ಬೆಳ್ತಂಗಡಿ ಪರಿಸರದ ದೇವಾಲಯಗಳಿಗೆ ಭೇಟಿ ನೀಡಿದ ಬಳಿಕ ಮಾರ್ಚ್ 11 ರಂದು ಬಿ.ಸಿ.ರೋಡ್ ನ ವನದುರ್ಗಾ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದು ಮುಂಬಯಿಗೆ ಹಿಂದಿರುಗಲು ಅವರು ಕಾರು ಹತ್ತಿದ್ದರು.

ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ದಾರಿ ಮಧ್ಯೆ ಕಾರಿನ ಚಾಲಕ ದಯಾನಂದ ಮೊಬೈಲ್ ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸುವುದನ್ನು ಪ್ರಯಾಣಿಕರಾದ ಸ್ಮಿತಾ ಠಾಕ್ರೆ ಹಾಗು ಶರೀನ್ ಮಂತ್ರಿ ಆಕ್ಷೇಪಿಸಿದ್ದಾರೆ.

ಇದರಿಂದ ಸಿಟ್ಟಿಗೆದ್ದ ದಯಾನಂದ ಕಾರನ್ನು ಅಜಾಗರೂಕತೆಯಿಂದ ಚಲಾಯಿಸಿದ್ದಾನೆ ಎಂದು ಹೇಳಲಾಗಿದೆ. ಈ ಹಿನ್ನಲೆಯಲ್ಲಿ ಮಂಗಳೂರು ಹೊರವಲಯದ ಕಾವೂರು ಬಳಿ ಕಾರು ನಿಲ್ಲಿಸಲು ತಿಳಿಸಿದ ಪರಿಣಾಮ ಕಾರು ಚಾಲಕ ದಯಾನಂದ್ ಸ್ಮಿತಾ ಠಾಕ್ರೆ ಹಾಗು ಶರೀನ್ ಮಂತ್ರಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Car driver Dayanand from Belthangady reportedly attacked a woman passenger Smitha Thakray and Sharin Manthri for questioning him about rash driving.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ