ಕೋಟಿಯ ಆಸೆಗೆ ಲಕ್ಷ ಕಳೆದುಕೊಂಡ ಉಪ್ಪಿನಂಗಡಿ ವ್ಯಾಪಾರಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಉಪ್ಪಿನಂಗಡಿ, ಆಗಸ್ಟ್ 31: ಇತ್ತೀಚಿನ ದಿನಗಳಲ್ಲಿ ಜನರು ಎಲ್ಲದರಲ್ಲೂ ಶಾರ್ಟ್ ಕಟ್ ಹುಡುಕುತ್ತಾರೆ. ಯಶಸ್ಸಿಗೆ, ಹಣ ಗಳಿಸಲು ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಲೆಕ್ಕಿಸದೇ ಸಾಗುತ್ಟಾರೆ. ಹೀಗೆಯೇ ಮೊಬೈಲ್‌ಗಳಲ್ಲಿ ನಾನಾ ರೀತಿ ಸಂದೇಶಗಳು ಸಹ ಜನರನ್ನು ದಾರಿ ತಪ್ಪಿಸುವಲ್ಲಿ ಮೇಲುಗೈ ಹೊಂದಿವೆ.

ಕೋಟಿ ಹಣ ನಿಮ್ಮ ಮೊಬೈಲ್ ನಂಬರಿಗೆ ದೊರಕಿದೆ, ನಿಮ್ಮ ವಿಳಾಸ ತಿಳಿಸಿ ಎಂದು ಸಂದೇಶಗಳು ಬರುತ್ತವೆ. ಹೀಗೆ ಕೋಟಿ ರೂಪಾಯಿಯ ಆಸೆಗೆ ಜೋತು ಬಿದ್ದ ಉದ್ಯಮಿ ಲಕ್ಷಗಟ್ಟಲೆ ಹಣ ಕಳೆದುಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಮೊಬೈಲ್ ಗೆ ಬಂದ ಸಂದೇಶದಿಂದ 5.35 ಕೋಟಿ ರು. ಬಹುಮಾನದ ಆಸೆಗೆ ಬಿದ್ದ ಉದ್ಯಮಿಯೊಬ್ಬರು 1,44,750 ರು. ಕಳೆದುಕೊಂಡಿದ್ದಾರೆ. ಉಪ್ಪಿನಂಗಡಿಯಲ್ಲಿ ಎಲೆಕ್ಟ್ರಾನಿಕ್ ಅಂಗಡಿ ನಡೆಸುತ್ತಿರುವ ರಾಜಸ್ತಾನದ ವ್ಯಕ್ತಿ ಮೋಸಹೋದವರು.[ಬಾಲಕನ ಮೇಲೆ ಅತ್ಯಾಚಾರ: ಮಹಿಳೆ ವಿರುದ್ಧ ಪೋಕ್ಸೋ ಕೇಸು]

Businessman cheated by fake caompany 'cash prize'

ಭಾರತೀಯ ರಿಸರ್ವ್ ಬ್ಯಾಂಕ್ ಮಾನ್ಯತೆ ಪಡೆದ ಕೋಕೋ ಕೋಲಾ ಅವಾರ್ಡ್ ಯು. ಕೆ. ಎಂಬ ಲಂಡನ್ ಮೂಲದ ಸಂಸ್ಥೆ ನಡೆಸಿದ ಲಾಟರಿಯಲ್ಲಿ ನಿಮ್ಮ ಮೊಬೈಲ್‌ಗೆ 5.35 ಕೋಟಿ ರೂ. ಬಹುಮಾನ ಬಂದಿದೆ. ಈ ಹಣ ಪಡೆಯಲು ನೀವು ರಿಸರ್ವ್ ಬ್ಯಾಂಕಿಗೆ 19,750 ರು. ಪಾವತಿಸಿ ಎಂದು ಬ್ಯಾಂಕ್ ಖಾತೆ ನೀಡಿ, ಅವರ ಮೊಬೈಲ್‌ಗೆ ಸಂದೇಶ ಬಂದಿತ್ತು.

ರಿಸರ್ವ್ ಬ್ಯಾಂಕ್‌ನ ಹೆಸರು ಕೇಳಿದಾಕ್ಷಣ ಉದ್ಯಮಿ ಹೋಗಿ ಹಣ ಪಾವತಿಸಿದ್ದಾರೆ. ಹೀಗೇ ಬೇರೆ ಬೇರೆ ಬ್ಯಾಂಕ್ ಗಳ ಖಾತೆ ನೀಡಿ ಹಣ ಪಾವತಿಸಲು ಸಂದೇಶ ಬಂದಿದೆ. ಅದರಂತೆ ಆ ವ್ಯಕ್ತಿ ಕೂಡ ತಲಾ 25,000ದಂತೆ ಹಣ ತುಂಬಿದ್ದಾರೆ. ಹೀಗೆ ಕೈಯಲ್ಲಿದ್ದ ಹಣ ಖಾಲಿಯಾದಾಗ 49,000 ಪಾವತಿಸುವಂತೆ ಮತ್ತೊಂದು ಸಂದೇಶ ಬಂದಿದೆ.[ಪ್ರೇಯಸಿಗಾಗಿ ಐಸಿಐಸಿಐ ಬ್ಯಾಂಕ್ ಗೆ 79 ಕೋಟಿ ಪಂಗನಾಮ!]

ಅಲ್ಲದೆ, ಲಾಟರಿ ಸಂಸ್ಥೆಯ ವ್ಯಕ್ತಿಗಳೆಂದು ಫೋನ್ ಮೂಲಕವೂ ಈ ಉದ್ಯಮಿ ಜತೆಗೆ ಮಾತನಾಡಿದ್ದರು. ಆ ಸಂದರ್ಭದಲ್ಲಿ ಮೋಸ ಹೋಗಿರುವುದು ಮನದಟ್ಟಾಗಿ, ಕರೆ ಬಂದ ನಂಬರ್‌ಗಳನ್ನು ಪರಿಶೀಲಿಸಿದಾಗ ಅವೆಲ್ಲ ದಿಲ್ಲಿಯ ಅಂಕುಶ್ ಎಂಬಾತನ ಹೆಸರಿನಲ್ಲಿರುವ ಸಿಮ್ ನಿಂದ ಬಂದಿವೆ ಎಂದು ತಿಳಿದು ಬಂದಿದೆ.[ಕ್ರೈಂ ರೇಟ್: ಬೆಂಗಳೂರಿಗೆ ಮೂರನೇ ಸ್ಥಾನ, ಆದರೂ ಹೆಣ್ಮಕ್ಕಳು ಸೇಫಂತೆ]

ನನ್ನ ಹೆಸರು ರಂಜಿತ್ ಸಿಂಗ್, ಭಾರತೀಯ ಪ್ರತಿನಿಧಿ ಎಂದು ಮಾತನಾಡಿದವನು ವಂಚಕ ಎಂಬುದು ಖಚಿತವಾಯಿತು. ಆದರೆ ತಡವಾಗಿ ತಿಳಿದುಕೊಂಡ ಕಾರಣ ಉದ್ಯಮಿ ಸುಮಾರು 1,44,750 ರು. ಕಳೆದುಕೊಂಡಿದ್ದಾರೆ. ಈ ರೀತಿ ಸಂದೇಶಕ್ಕೆ ಮರಳಾಗದೆ ಜಾಗೃತರಾಗಿರುವುದು ಒಳಿತು. ಇಂತಹ ಮೊಬೈಲ್ ಸಂದೇಶಗಳ ಬಗ್ಗೆ ಎಚ್ಚರ ಇರಲಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Business man from Uppinangadi, Dakshina kannada district cheated by fake company. Businessman got a message stating a cash award of 5.35 crores. Before collecting prize insisted him to deposit some amount. He deposited and cheated.
Please Wait while comments are loading...