ಮಂಗಳೂರು : ಅ.25ರಿಂದ ಬಂಟ್ಸ್ ಹಾಸ್ಟೆಲ್ ಗಣೇಶೋತ್ಸವ

Posted By:
Subscribe to Oneindia Kannada

ಮಂಗಳೂರು, ಅ.22 : ಬಂಟ್ಸ್ ಹಾಸ್ಟೆಲ್ ಓಂಕಾರ ನಗರದಲ್ಲಿ ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನದಿಂದ ನಡೆಯುವ 14ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಗಸ್ಟ್ 25 ರಿಂದ 27ರ ತನಕ ನಡೆಯಲಿದೆ.

ಪ್ರತಿಷ್ಠಾನದ ಟ್ರಸ್ಟಿ ಡಾ.ಆಶಾ ಜ್ಯೋತಿ ರೈ ಬಂಬ್ರಾಣ ಮಂಗಳವಾರ ಈ ಕುರಿತು ಮಾಹಿತಿ ನೀಡಿದರು. 'ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ತಾಲೂಕು ಸಮಿತಿ, ತಾಲೂಕು ಬಂಟರ ಸಂಘ ಮಂಗಳೂರು ಇದರ ಪ್ರಾಯೋಜಕತ್ವದಲ್ಲಿ ದ.ಕ, ಉಡುಪಿ, ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳ, ಇತರ ಸಂಘ ಸಂಸ್ಥೆಗಳ ಹಾಗೂ ಜಾತಿ ಮತ ಭಾಂಧವರ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ' ಎಂದರು.

ಕನ್ನಡದ ಗಂಧಗಾಳಿಯಿಲ್ಲದ ಗಣೇಶೋತ್ಸವ ಯಾರಿಗೆ ಬೇಕು?

Bunts Hostel Ganesh Chaturthi celebration from August 25 to 27, 2017

ಆ. 24 ರಂದು ಸಂಜೆ 5 ಗಂಟೆಗೆ ಶರವು ಮಹಾಗಣಪತಿ ದೇವಸ್ಥಾನದ ಬಳಿ ಇರುವ ರಾಧಕೃಷ್ಣ ಮಂದಿರದಿಂದ ಗಣಪತಿ ವಿಗ್ರಹವನ್ನು ಮೆರವಣಿಗೆಯ ಮೂಲಕ ಬಂಟ್ಸ್ ಹಾಸ್ಟೆಲ್ ನಲ್ಲಿರುವ ಓಂಕಾರನಗರಕ್ಕೆ ತರಲಾಗುವುದು. ಆ. 25 ರಂದು ಬೆಳಗ್ಗೆ 8.45 ಕ್ಕೆ ಸಾಮೂಹಿಕ ಪ್ರಾರ್ಥನೆ, 9.15 ಕ್ಕೆ ಧ್ವಜಾರೋಹಣ, 9.30 ಕ್ಕೆ ಗಣೇಶೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ.

ವಿಸರ್ಜನೆ ಬಳಿಕ ಗಿಡವಾಗಿ ಬೆಳೆಯಲಿದ್ದಾನೆ ಪರಿಸರ ಸ್ನೇಹಿ ಗಣಪ!

ಬೆಳಗ್ಗೆ 9.40 ಕ್ಕೆ ತೆನೆಹಬ್ಬ, 9.45 ಕ್ಕೆ ಮೂರ್ತಿ ಪ್ರತಿಷ್ಠೆ, ಗಣಹೋಮ, 10.30 ರಿಂದ ಭಜನಾ ಸೇವೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಅಪರಾಹ್ನ 3 ರಿಂದ "ಶಿವಭಕ್ತ ಮಾರ್ಕಂಡೇಯ" ಹರಿಕಥಾ ಭಾಗವತವು ಹರಿದಾಸ್ ಶರತ್ ಶೆಟ್ಟಿ ಪಡುಪಳ್ಳಿ ಇವರಿಂದ ನಡೆಯಲಿದೆ. ಸಾಯಂಕಾಲ 5 ರಿಂದ 7 ರತನಕ ಧಾರ್ಮಿಕ ಸಭೆ, 7.30 ರಿಂದ ರಂಗಪೂಜೆ , ಹೂವಿನ ಪೂಜೆ, ಪ್ರಸಾದ ವಿತರಣೆ, ನಂತರ ಮೂಡಬಿದ್ರೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.

ಆ. 26 ರಂದು ಬೆಳಗ್ಗೆ 9ಕ್ಕೆ ದುರ್ಗಾದಾಸ್ ಶೆಟ್ಟಿ ತಂಡದಿಂದ ಭಕ್ತಿಗಾನ ಸುಧೆ, ನಂತರ ಭಜನೆ 11 ಗಂಟೆಗೆ ದೇವರಿಗೆ ಮೂಡಪ್ಪ ಸೇವೆ ನಡೆಯಲಿದೆ. 12 ಗಂಟೆಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ 3 ಗಂಟೆಡಗೆ ರಾಮಕೃಷ್ಣ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಗೌರಿ-ಗಣೇಶ ಹಬ್ಬ, ಕೆಎಸ್ಆರ್‌ಟಿಸಿಯಿಂದ 1000 ಹೆಚ್ಚುವರಿ ಬಸ್

ಸಂಜೆ 4 ಗಂಟೆಗೆ ಸಹಸ್ರ ನಾರಿಕೇಲ ಮಹಾಗಣಯಾಗದ ಅಂಗವಾಗಿ ಋತ್ವಿಜರಿಂದ ಯಾಗಶಾಲ ಪ್ರವೇಶ, ಗಣಪತಿ ಪೂಜೆ, ಪುಣ್ಯಾಹ, ಭೂಶುದ್ದಿ, ವಾಸ್ತುರಕ್ಷೋಘ್ನ ಹವನ, ಕಲಶ ಸ್ಥಾಪನೆ, ಅರಣಿ ಮಥನ ನಡೆಯಲಿದೆ . 7.30 ರಿಂದ ರಂಗ ಪೂಜೆ ನಡೆದು ಅಜಯ್ ವಾರಿಯರ್ ತಂಡದ ಭಕ್ತಿ ಸಿಂಚನ ಕಾರ್ಯಕ್ರಮ ನಡೆಯಲಿದೆ. ಆ. 27 ರಂದು 8.30 ರಿಂದ ಅಷ್ಟೋತ್ತರ ಸಹಸ್ರ ನಾರಿಕೇಲ ಮಹಾಗಣಯಾಗ 12. 30ಕ್ಕೆ ಅನ್ನ ಸಂತರ್ಪಣೆ, 1 ಗಂಟೆಗೆ ಬಂಟರ ಯಾನೆ ನಾಡವರ ಮಾತೃ ಸಂಘದ ಮಹಿಳಾ ಭಜನಾ ಮಂಡಳಿಯ ವತಿಯಿಂದ ಭಜನಾಸೇವೆ ನಡೆಯಲಿದೆ.

ಅಪರಾಹ್ನ 3.30ಕ್ಕೆ ವಿಸರ್ಜ ಪೂರ್ವ ಪೂಜೆ ನಡೆದು ಭಜನಾ ತಂಡಗಳ ಸಂಕೀರ್ತನೆಯೊಂದಿಗೆ ಶೋಭಯಾತ್ರೆಯು ಓಂಕಾರನಗರದಿಂದ ಬಂಟ್ಸ್ ಹಾಸ್ಟೆಲ್ ವೃತ್ತ, ಪಿ ವಿ ಎಸ್, ಡೊಂಗರಕೇರಿ, ನ್ಯೂಚಿತ್ರ ಟಾಕೀಸ್, ರಥಬೀದಿ, ಶ್ರೀ ವೆಂಕಟರಮಣ ದೇವಸ್ಥಾನವಾಗಿ ಮೂಲಕ ಸಾಗಲಿದ್ದು, ಮಹಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ದೇವರ ವಿಗ್ರಹವನ್ನು ವಿಸರ್ಜಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru Bunts Hostel organized 14th year Ganesh Chaturthi celebration in Omkarnagar form August 25 to 27, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X