ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಂಡ-ಹೆಂಡತಿ ಅಂತ ಬಂದ್ರು, 18 ಲಕ್ಷ ದೋಚಿದ್ರು!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 09 : ಬಿಲ್ಡರ್ ಮನೆಗೆ ಕನ್ನ ಹಾಕಿ 18 ಲಕ್ಷ ರೂ. ದೋಚಿದ್ದ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮನೆಯ ಕೆಲಸಕ್ಕೆ ಸೇರಿಕೊಂಡಿದ್ದವರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕನ್ನ ಹಾಕಿ ಹಣ ಮತ್ತು ಮೂರು ಮೊಬೈಲ್ ಫೋನ್ ದೋಚಿದ್ದರು.

ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳನ್ನು ಅಂಬರೀಶ್ (25), ರಶೀದಾ (23) ಎಂದು ಗುರುತಿಸಲಾಗಿದೆ. ಈ ಇಬ್ಬರೂ ಧಾರವಾಡ ಜಿಲ್ಲೆಯ ನವಲಗುಂದದವರು. [ಬಿಲ್ಡರ್‌ ಮನೆಯಲ್ಲಿ 18 ಲಕ್ಷ ದೋಚಿದ ಕೆಲಸದವರು]

house robbed

ಆರೋಪಿಗಳಿಂದ 17,38,000 ರೂ. ನಗದು, ಕಳ್ಳತನ ಮಾಡಿದ ಹಣದಿಂದ ಖರೀದಿಸಿದ 9,700 ರೂ. ವೌಲ್ಯದ ಬೆಳ್ಳಿ ಹಾಗೂ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಬ್ಬರು ಪತಿ ಪತ್ನಿಯೆಂದು ಕೆಲಸಕ್ಕೆ ಸೇರಿಕೊಂಡಿದ್ದರು. ಕೆಸಲಕ್ಕೆ ಸೇರುವಾಗ ತಮ್ಮ ಹೆಸರು ಶಿವ ಮತ್ತು ಜ್ಯೋತಿ ಎಂದು ಹೇಳಿಕೊಂಡಿದ್ದರು. [1 ಲಕ್ಷ ದೋಚಿದವರು ಎರಡು ದಿನದಲ್ಲೇ ಸಿಕ್ಕಿಬಿದ್ದರು]

ಜುಲೈ 2ರಂದು ದೀರೆಬೈಲ್ ಸಮೀಪದ ಕೊಂಚಡಿಯಲ್ಲಿ ಬಿಲ್ಡರ್ ನರಸಿಂಹ ರಾವ್ ಅವರ ಮನೆಯಲ್ಲಿ ಕಳ್ಳತನ ಮಾಡಿದ ಬಳಿಕ ಇಬ್ಬರು ಧಾರವಾಡಕ್ಕೆ ಹೋಗಿದ್ದರು. ಕುಳಾಯಿಯಲ್ಲಿ ಬಾಡಿಗೆ ಮನೆಯನ್ನು ಹುಡುಕಲು ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. [ಕಿಲಾಡಿ ಮಂಗ, ಆಭರಣ ಮಳಿಗೆಯಿಂದ ಹಣ ದೋಚಿತು!]

ಮನೆಯ ಮಾಲೀಕರಿಗೆ ಸಲಹೆ : ಮನೆಗೆಲಸಕ್ಕೆ ಮತ್ತು ಭದ್ರತೆಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಾಗ ಜನರು ಸಾರ್ವಜನಿಕರು ಪೊಲೀಸರ ಬಳಿ ಪರಿಶೀಲನೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರು ಸಲಹೆ ನೀಡಿದ್ದಾರೆ.

money

ಕೆಲಸದವರನ್ನು ಸೇರಿಸಿಕೊಳ್ಳುವ ಮುನ್ನ ಅವರ ಪೂರ್ವಾಪರಗಳನ್ನು ತಿಳಿದುಕೊಳ್ಳಬೇಕು. ಅವರಿಂದ ಅಧಿಕೃತ ಫೋಟೋ ಐಡಿ ಕಾರ್ಡ್ ಹಾಗೂ ಯಾವುದೇ ಕೇಸುಗಳು ಇಲ್ಲವೆಂಬ ಬಗ್ಗೆ ಪೊಲೀಸ್ ಪರಿಶೀಲನೆ ಮಾಡಿಸಿಕೊಂಡಿರುವ ಬಗ್ಗೆ ದಾಖಲೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

English summary
Mangaluru police have arrested Ambarish and Rashida in connection with the robbery of Rs 18 lakh at builder Narasimha Rao's house in Konchady, Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X