ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ಬಿಲ್ಡರ್‌ ಮನೆಯಲ್ಲಿ 18 ಲಕ್ಷ ದೋಚಿದ ಕೆಲಸದವರು

|
Google Oneindia Kannada News

ಮಂಗಳೂರು, ಜುಲೈ 04 : ಕೆಲಸಕ್ಕೆ ಬಂದ ಕೆಲಸದಾಳುಗಳು ಮನೆಗೆ ಕನ್ನ ಹಾಕಿ 18 ಲಕ್ಷ ರೂ. ದೋಚಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಮಂಗಳೂರಿನ ದೀರೆಬೈಲ್ ಸಮೀಪದ ಕೊಂಚಡಿಯಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ನಗರದ ಬಿಲ್ಡರ್ ನರಸಿಂಹ ರಾವ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಒಬ್ಬ ಪುರುಷ ಮತ್ತು ಇಬ್ಬರು ಮಹಿಳೆಯರು ಮನೆಗೆ ನುಗ್ಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. [1 ಲಕ್ಷ ದೋಚಿದವರು ಎರಡು ದಿನದಲ್ಲೇ ಸಿಕ್ಕಿಬಿದ್ದರು]

robbery

ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆಗಮಿಸಿದ ಕಳ್ಳರು, ಬಾಗಿಲಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಒಳ ನುಗ್ಗಿದ್ದಾರೆ. ಮನೆಯಲ್ಲಿದ್ದ 18 ಲಕ್ಷ ರೂ. ನಗದು ಹಾಗೂ 3 ಮೊಬೈಲ್ ಫೋನ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ. [ಕಿಲಾಡಿ ಮಂಗ, ಆಭರಣ ಮಳಿಗೆಯಿಂದ ಹಣ ದೋಚಿತು!]

ಆರೋಪಿಗಳನ್ನು ಉತ್ತರ ಕರ್ನಾಟಕ ಮೂಲದ ಶಿವು ಅಲಿಯಾಸ್ ಶಿವಕುಮಾರ್, ಜ್ಯೋತಿ ಎಂದು ಮನೆಯವರು ಗುರುತಿಸಿದ್ದಾರೆ. ಇವರು ನರಸಿಂಹ ರಾವ್ ಅವರ ಮನೆಗೆ ಕೆಲಸಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ. [ನೈಸ್ ರಸ್ತೆಯಲ್ಲಿ ಸುಲಿಗೆ ಮಾಡುತ್ತಿದ್ದ ನಕಲಿ ಪೊಲೀಸರು!]

ಕಾವೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.

English summary
Thieves broke into a builder's house at Konchady, Mangaluru on the evening of July 3, 2016 and robbed Rs 18 lakh cash. The theft was allegedly committed by a man and a woman who had been hired by the builder a few days ago. Kavuru police registered the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X