ಬೆಂಗಳೂರಿನಲ್ಲಿ ಮೃತ ವ್ಯಕ್ತಿಯ ಅಂಗಾಂಗ ದಾನ

Posted By: Prithviraj
Subscribe to Oneindia Kannada

ಮಣಿಪಾಲ, ಅಕ್ಟೋಬರ್, 10 : ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದವ್ಯಕ್ತಿಯೊಬ್ಬರ ಅಂಗಾಗಗಳನ್ನು 'ಗ್ರೀನ್ ಕಾರಿಡಾರ್' ನೆರವಿನಿಂದ ಸೋಮವಾರ ಬೆ.7ಕ್ಕೆ ಬೆಂಗಳೂರಿನ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇಲ್ಲಿಯ ಬೈಂದೂರಿನ ನಿವಾಸಿ ಹಿಮಾಂಶು ಅವರು ಮಿದುಳು ನಿಷ್ಕ್ರಿಯಗೊಂಡು (ಬ್ರೈನ್ ಡೆಡ್) ಭಾನುವಾರ(ಅ.9)ದಂದು ಮೃತಪಟ್ಟಿದ್ದರು. ವ್ಯಕ್ತಿಯಯಕೃತ್, ಕಾರ್ನಿಯಾ ಮತ್ತು ಮೂತ್ರಪಿಂಡಗಳನ್ನು ದಾನ ಮಾಡಲು ಅವರ ತಂದೆ ತಾಯಿ ನಿರ್ಧರಿಸಿದ ಹಿನ್ನೆಲೆಯಲ್ಲಿ ಅವರ ಅಂಗಾಂಗಳನ್ನು ದಾನ ಮಾಡಲಾಗಿದೆ.[ಬೆಂಗಳೂರಿನ ಬ್ರೈನ್ ಡೆಡ್ ಟೆಕ್ಕಿಯ ಅಂಗಾಂಗ ದಾನ]

ಗ್ರೀನ್ ಕಾರಿಡಾರ್ ಸಂಸ್ಥೆ ಸಹಯೋಗದಲ್ಲಿ ಮಂಗಳೂರಿನ ಮಣಿಪಾಲ ಆಸ್ಪತ್ರೆಯಿಂದ ಝೀರೋ ಟ್ರಾಫಿಕ್ ನಲ್ಲಿ ಬಜ್ಪೆ ವಿಮಾನ ನಿಲ್ದಾಣಕ್ಕೆ ಹಿಮಾಂಶು ಅವರ ಅಂಗಾಂಗಳನ್ನು ಸಾಗಿಸಿ. ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ರವಾನಿಸಲಾಯಿತು.[ಅಂಗಾಂಗ ದಾನ ಮಾಡಿ ನಾಲ್ವರಿಗೆ ಮರು ಜೀವ ನೀಡಿದರು]

Brain dead persons organs donated in Bengaluru

ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿ ಮಣಿಪಾಲ ಕೆಂಎಸಿ ಆಸ್ಪತ್ರೆಗೆ ಹಿಮಾಂಶು ಭಾನುವಾರ ದಾಖಲಾಗಿದ್ದರು. ಅಪಘಾತದಲ್ಲಿ ಹಿಮಾಂಶು ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದಾರೆ ಎಂದು ಭಾನುವಾರ ರಾತ್ರಿ 11:30ಕ್ಕೆ ವೈದ್ಯರು ತಿಳಿಸಿದ್ದರು. ಹಿಮಾಂಶು ಪೋಷಕರು ಮೃತ ಮಗನ ಅಂಗಾಂಗಳನ್ನು ದಾನ ಮಾಡಲು ನಿರ್ಧರಿಸಿ, ಹಿಮಾಂಶು ಸಾವಿಗೆ ಸಾರ್ಥಕತೆ ತಂದುಕೊಟ್ಟಿದ್ದಾರೆ.[ಅಂಗಾಂಗ ದಾನ ಜಾಗೃತಿಗಾಗಿ ರಾಮನಗರ ಮ್ಯಾರಥಾನ್]

ಮೂತ್ರಪಿಂಡ, ಕಾರ್ನಿಯಾ ಮತ್ತು ಲಿವರ್‌ಗಳನ್ನು ಕಸಿ ಮಾಡಿ ಕೊಂಡೊಯ್ಯಲು ಬೆಂಗಳೂರಿನ ಕೆಎಂಸಿ ವೈದ್ಯರ ತಂಡ ಮಣಿಪಾಲಕ್ಕೆ ಆಗಮಿಸಿತು. ಯಕೃತ್ ಮತ್ತು ಹೃದಯವನ್ನು ಮಣಿಪಾಲ ಕೆಎಂಸಿಯಲ್ಲಿನ ರೋಗಿಯೊಬ್ಬರಿಗೆ ವರ್ಗಾಯಿಸಲು ರವಾನಿಸಲಾಯಿತು.[ಮೂವರಿಗೆ ಮರುಜೀವ ನೀಡಿದ ಶ್ರೀಮನ್‌ ನಾರಾಯಣ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Organs of brain dead person were transported to Bengaluru from Manipal on Monday through green corridor. A 22-year-old person Himanshu was declared brain dead by doctors. His family decided to donate his live organs.
Please Wait while comments are loading...