ಮಂಗಳೂರು: ಅನಂತಪದ್ಮನಾಭನಿಗೆ ವೈಭವದ ಬ್ರಹ್ಮಕಳಶೋತ್ಸವ

Posted By:
Subscribe to Oneindia Kannada

ಮಂಗಳೂರು, ಫೆಬ್ರವರಿ 08: ಇಲ್ಲಿನ ಕುಡುಪುವಿನ ಅನಂತಪದ್ಮನಾಭ ದೇವಾಲಯದಲ್ಲಿ ಫೆಬ್ರವರಿ 18ರಿಂದ 25ರ ವರೆಗೆ ಬ್ರಹ್ಮಕಳಶೋತ್ಸವ ಆಯೋಜಿಸಲಾಗಿದೆ.

ಫೆಬ್ರವರಿ 25ರಂದು ದೇವರಿಗೆ ಬ್ರಹ್ಮಕಳಶೋತ್ಸವ ನಡೆಯಲಿದೆ. ವಾರಗಳ ಕಾಲ ನಡೆಯುವ ಬ್ರಹ್ಮಕಳಶೋತ್ಸವ ಕಾರ್ಯಕ್ರಮಕ್ಕೆ ರಾಜ್ಯದಾದ್ಯಂತದಿಂದ ಭಕ್ತಾದಿಗಳು ಆಗಮಿಸಲಿದ್ದಾರೆ.

ಬ್ರಹ್ಮಕಳಶೋತ್ಸವಕ್ಕೆ ಆಗಮಿಸುವ ಭಕ್ತಾದಿಗಳು ದೇವರಿಗೆ ಹಸಿರು ಹೊರೆ ಕಾಣಿಕೆ ಅರ್ಪಿಸುವುದು ಮುಂಚಿನಿಂದಲೂ ನಡೆದು ಬಂದಿರುವ ಪ್ರತೀತಿ.

Brahmkalashothsava ritual to Ananthpadmanabh starts from February 18

ಬ್ರಹ್ಮಕಳಶೋತ್ಸವದ ಬಗ್ಗೆ ಹಾಗೂ ಹೊರೆ ಕಾಣಿಕೆ ಬಗ್ಗೆ ಪೂರ್ಣ ಮಾಹಿತಿಯನ್ನು ನಾಳೆ (ಫೆ.09) ಮಧ್ಯಾಹ್ನ 12ಗಂಟೆಗೆ ನಗರದ ವುಡ್‌ಲ್ಯಾಂಡ್‌ ಹೊಟೆಲ್‌ನಲ್ಲಿ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂದು ಬ್ರಹ್ಮಕಳಶೋತ್ಸವ ಸಮಿತಿಯ ಕಡಂಬೋಡಿ ಮಹಾಬಲ ಪೂಜಾರಿ, ವಾಸುದೇವ ರಾವ್, ಪುಷ್ಪರಾಜ ಪೂಜಾರಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru's Ananthpadmanabh temple is organizing Brahmkalashothsava from February 18 to 25. Devotees from all over Karnataka is expect to come.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ