ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ಬ್ರಹ್ಮ ರಥೋತ್ಸವ

Posted By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ನವೆಂಬರ್ 27: ಗೌಡ ಸಾರಸ್ವತ ಸಮಾಜದ ಪ್ರತಿಷ್ಠಿತ, ಹದಿನೆಂಟು ಪೇಟೆ ದೇವಳವೆಂಬ ಖ್ಯಾತಿಯ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದ ಷಷ್ಠಿ ಮಹೋತ್ಸವದ ಪ್ರಯುಕ್ತ ಶ್ರೀ ದೇವರ ಬ್ರಹ್ಮ ರಥೋತ್ಸವ ಶುಕ್ರವಾರ ಸಹಸ್ರಾರು ಭಾವುಕ ಭಜಕರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರುಗಿತು.

ಷಷ್ಠಿ ಮಹೋತ್ಸವ ಪ್ರಯುಕ್ತ ಬೆಳಿಗ್ಗೆ ಶ್ರೀ ದೇವರ ಸನ್ನಿಧಿಯಲ್ಲಿ ಮಹಾ ಪ್ರಾರ್ಥನೆ, ಶತ ಕಲಶಾಭಿಷೇಕ, ಗಂಗಾಭಿಷೇಕ ನಡೆದವು.

Brahma Rathotsava held in Anantheshwar temple, Manjeshwar

ಬಳಿಕ ಯಜ್ಞ ಮಂಟಪದಲ್ಲಿ ಉಭಯ ದೇವರುಗಳಾದ ಭದ್ರ ನರಸಿಂಹ ಹಾಗೂ ಸುಬ್ರಮಣ್ಯ ದೇವರ ಸಮ್ಮುಖದಲ್ಲಿ ಯಜ್ಞದ ಪೂರ್ಣಾಹುತಿ, ತದನಂತರ ವಿಶೇಷವಾಗಿ ಪುಷ್ಪದಿಂದ ಅಲಂಕರಿಸಿದ ಸ್ವರ್ಣ ಲಾಲಕಿಯಲ್ಲಿ ಶ್ರೀ ದೇವರ ವಿಗ್ರಹಗಳನ್ನು ಇರಿಸಿ ಭುಜ ಸೇವೆಯ ಮೂಲಕ ಸ್ವಯಂಸೇವಕರಿಂದ ಪಲ್ಲಕಿ ಉತ್ಸವ ನಡೆಯಿತು.

Brahma Rathotsava held in Anantheshwar temple, Manjeshwar

ಬ್ರಹ್ಮ ರಥದ ಪೂಜೆ, ಶ್ರೀ ದೇವರು ರಥಾರೂಢರಾದ ಬಳಿಕ ಮಂಗಳಾರತಿ ನಡೆದು ರಥೋತ್ಸವ ನಡೆಯಿತು. ಕೇರಳ, ಕರ್ನಾಟಕ , ಮುಂಬೈ, ಗುಜರಾತ್, ದೆಹಲಿ ಹಾಗೂ ವಿದೇಶದಿಂದ ನೂರಾರು ಸಮಾಜ ಭಾಂದವರು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Brahma Rathotsava concluded on Friday with Champa Shashti Rathotsava in Anantheshwar temple in Manjeshwar, Kasaragod.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ