ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಗರನ್ನು ದಂಗುಬಡಿಸಿದ ಮತ್ತೊಂದು ಪ್ರಕೃತಿ ವಿಸ್ಮಯ, ಇದಕ್ಕೆ ಕಾರಣ ಏನಿರಬಹುದು?

|
Google Oneindia Kannada News

Recommended Video

Dakshina Kannada : ದಕ್ಷಿಣ ಕನ್ನಡದ ಮೂಡಬಿದ್ರೆಯಲ್ಲಿ ಭೂಮಿಯ ವಿಸ್ಮಯ | Oneindia Kannada

ಮಂಗಳೂರು, ಅಕ್ಟೋಬರ್. 21: ಪ್ರಕೃತಿ ಊಹಿಸಲು ಸಾಧ್ಯವಾಗದ ವಿಸ್ಮಯಗಳನ್ನು ಆಗಾಗ ಸೃಷ್ಟಿಸುತ್ತದೆ. ಕೆಲವು ಮುದ ನೀಡಿದರೆ, ಇನ್ನು ಕೆಲವು ಮುಂದೆ ನಡೆಯಲಿರುವ ದುರಂತಗಳ ಮುನ್ನೆಚ್ಚರಿಕೆ ಆಗಿರುತ್ತವೆ. ಇತ್ತೀಚಿನ ದಿನಗಳಲ್ಲಂತೂ ಕರಾವಳಿ ಹಲವಾರು ಪ್ರಾಕೃತಿಕ ಬದಲಾವಣೆಗಳಿಗೆ ಸಾಕ್ಷಿಯಾಗಿದೆ.

ಏಕಾಏಕಿ ಅತಿಯಾಗಿ ಸುರಿದ ಭಾರೀ ಮಳೆ ಪ್ರವಾಹವನ್ನೇ ಸೃಷ್ಟಿಸಿತು. ಭಾರೀ ಭೂಕುಸಿತ, ಜಲಸ್ಫೋಟದ ಪರಿಣಾಮ ಭಾರೀ ದುರಂತಗಳು ದಕ್ಷಿಣ ಕನ್ನಡ ಹಾಗೂ ಕೊಡುಗು ಜಿಲ್ಲೆಗಳಲ್ಲಿ ಘಟಿಸಿದವು. ನಂತರ ಮಳೆಗಾಲದಲ್ಲಿ ಉಕ್ಕಿ ಹರಿದ ಕರಾವಳಿಯ ನದಿಗಳು ಏಕಾಏಕಿ ಬತ್ತಲು ಆರಂಭಿಸಿದವು.

ಪ್ರಕೃತಿ ವಿರುದ್ಧ ಚಟುವಟಿಕೆ ನಿಲ್ಲಿಸದಿದ್ದರೆ ಕೊಡಗಿಗೆ ಉಳಿಗಾಲವಿಲ್ಲ!ಪ್ರಕೃತಿ ವಿರುದ್ಧ ಚಟುವಟಿಕೆ ನಿಲ್ಲಿಸದಿದ್ದರೆ ಕೊಡಗಿಗೆ ಉಳಿಗಾಲವಿಲ್ಲ!

ಹೀಗಾಗಿ ಕರಾವಳಿಯ ಪರಿಸರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಜನರನ್ನು ಆತಂಕಿತರನ್ನಾಗಿಸಿದೆ. ಈಗ ಕರಾವಳಿ ಮತ್ತೊಂದು ಪ್ರಾಕೃತಿಕ ಬದಲಾವಣೆಗೆ ಸಾಕ್ಷಿಯಾಗಿದೆ. ಹೌದು, ದಕ್ಷಿಣ
ಕನ್ನಡ ಜಿಲ್ಲೆಯ ಗ್ರಾಮವೊಂದರಲ್ಲಿ ಭೂಮಿ ನೀರಿನಂತೆ ವರ್ತಿಸುತ್ತದೆ. ಅಂದರೆ ಈ ಭೂಮಿ ಮೇಲೆ ನೆಗೆದರೆ ಭೂಮಿ ಕುಲುಕುತ್ತದೆ. ಅಷ್ಟು ಮೃದುವಾಗಿದೆ ಇಲ್ಲಿಯ ಭೂಮಿ.

ಗಟ್ಟಿಯಾಗಿರಬೇಕಿದ್ದ ಭೂಮಿಯ ಮೇಲ್ಪದರ ಸ್ಪ್ರಿಂಗ್ ರೀತಿ ವರ್ತಿಸುತ್ತಿದೆ. ಇಂತಹ ಮೇಲ್ಮೈ ಹೊಂದಿದ ಭೂಮಿ ಇದೆ ಅಂದ್ರೆ ನೀವು ನಂಬ್ತೀರಾ . ಆದರೆ ನಂಬಲೇಬೇಕು.ಮೂಡಬಿದ್ರೆಯಲ್ಲಿ ಇಂಥಹ ಪೃಕೃತಿ ವಿಸ್ಮಯ ನಡೆದಿದೆ. ಗಟ್ಟಿಯಾಗಿರಬೇಕಾದ ಭೂ ಪ್ರದೇಶ ಸಾಫ್ಟ್ ಆಗಿ ಸ್ಪ್ರಿಂಗ್ ರೀತಿ ಅಲುಗಾಡುತ್ತಿದೆ. ಮುಂದೆ ಓದಿ...

 ಭೂಮಿಯೊಳಗೆ ಹೋಗುವುದಿಲ್ಲ ಕಾಲು

ಭೂಮಿಯೊಳಗೆ ಹೋಗುವುದಿಲ್ಲ ಕಾಲು

ಮೂಡಬಿದ್ರೆಯ ಕಡಂದಲೆ ಗ್ರಾಮದ ಪಾಪ್ಸನ್ ಎಂಬ ಪ್ರದೇಶದಲ್ಲಿ ಭೂಮಿ ತುಂಬಾ ಸಾಫ್ಟ್ ಆಗಿದೆ. ನೀರಿನ ಮೇಲೆ ತೇಲುವಂತಿದೆ. ವಾಟರ್ ಬೆಡ್ ರೀತಿಯಲ್ಲಿ ವರ್ತಿಸುತ್ತಿದೆ. ಇಲ್ಲಿಯ ಭೂಮಿ ಮೇಲೆ ಕುಣಿದ್ರೂ ಕುಪ್ಪಳಿಸಿದ್ರೂ ಕಾಲು ಮಾತ್ರ ಭೂಮಿಯ ಒಳಗೆ ಹೋಗುವುದೇ ಇಲ್ಲ.

 ಇಲ್ಲಿ ನೀರಿಲ್ಲ

ಇಲ್ಲಿ ನೀರಿಲ್ಲ

ಸ್ಪ್ರಿಂಗ್ ಬೋರ್ಡ್ ಮೇಲೆ ಜಂಪ್ ಮಾಡಿದಂತೆ ಭೂಮಿ ಮೇಲೆ ಮಾಡಬಹುದು. ಭೂಮಿ ಮೇಲಿನ‌ ವಿಸ್ಮಯ ಸ್ಥಳೀಯ ಜನರನ್ನು ದಂಗುಬಡಿಸಿದೆ. ಇದು ಜೌಗು ಪ್ರದೇಶದಂತೆ ಕಂಡರೂ ಇಲ್ಲಿ ನೀರಿಲ್ಲ.

ಭೂಮಿಯಡಿಯಿಂದ ಕೇಳಿ ಬರುತ್ತಿರುವ ಶಬ್ದ: ನಿರ್ಲಕ್ಷ್ಯ ಬೇಡ ಎಂದ ತಜ್ಞರುಭೂಮಿಯಡಿಯಿಂದ ಕೇಳಿ ಬರುತ್ತಿರುವ ಶಬ್ದ: ನಿರ್ಲಕ್ಷ್ಯ ಬೇಡ ಎಂದ ತಜ್ಞರು

 ಮೃದುವಾದ ಭೂಮಿ

ಮೃದುವಾದ ಭೂಮಿ

ವಿದ್ಯಾರ್ಥಿ ಸುಮನ್ ಶೆಟ್ಟಿ ಫೋಟೋಗ್ರಫಿಯಲ್ಲಿ ಅತೀವ ಆಸಕ್ತಿ ಹೊಂದಿದ್ದಾರೆ. ಬಯಲು, ಗುಡ್ಡಗಾಡು ಪ್ರದೇಶ ಸುತ್ತುವ ಸುಮನ್ ಇತ್ತೀಚೆಗೆ ಪಾಪ್ಸನ್ ಪ್ರದೇಶಕ್ಕೆ ಬಂದಾಗ ಈ ಬೌನ್ಸಿಂಗ್ ಅಥವಾ ನೆಗೆಯುವ ಭೂಮಿ ಬೆಳಕಿಗೆ ಬಂದಿದೆ.

ಇಲ್ಲಿ ನಡೆಯುವಾಗ ಸ್ಪ್ರಿಂಗ್ ಮೇಲೆ, ನೀರಿನ ಅಲೆ ಮೇಲೆ ನಡೆದ ಅನುಭವಾಗಿದೆ. ಇಲ್ಲಿ ನೆಗೆದರೆ ಭೂಮಿಯ ಮೇಲ್ಮೈಯಲ್ಲಿ ಅಲೆಗಳು ಸೃಷ್ಟಿಯಾಗುತ್ತವೆ. ಅಷ್ಟು ಮೃದುವಾಗಿದೆ ಇಲ್ಲಿಯ ಭೂಮಿ.

 ಸಂಶೋಧನೆ ನಡೆಯಲಿ

ಸಂಶೋಧನೆ ನಡೆಯಲಿ

ಆದರೆ ಇಲ್ಲಿಯ ಸ್ಥಳೀಯ ಜನ ಮಾತ್ರ ಆತಂಕಗೊಂಡಿದ್ದಾರೆ. ಭೂಮಿ ಈ ರೀತಿಯಾಗಿ ಮೃದುವಾಗಿ ಪರಿವರ್ತನೆಗೊಳ್ಳಲು ಭೂಗರ್ಭ ಶಾಸ್ತ್ರ ತಜ್ಞರು ಸಂಶೋಧನೆ ನಡೆಸಿದ ಬಳಿಕವಷ್ಟೇ ಸತ್ಯಾಂಶ ಬಯಲಾಗಬೇಕಾಗಿದೆ.

ಕೊಡಗು ಗಡಿಭಾಗದಲ್ಲಿ ಭೂಮಿಯಡಿಯಿಂದ ಮತ್ತೆ ಕೇಳಿಬರುತ್ತಿದೆ ನದಿ ಹರಿಯುವ ಶಬ್ದ!ಕೊಡಗು ಗಡಿಭಾಗದಲ್ಲಿ ಭೂಮಿಯಡಿಯಿಂದ ಮತ್ತೆ ಕೇಳಿಬರುತ್ತಿದೆ ನದಿ ಹರಿಯುವ ಶಬ್ದ!

English summary
Bouncing land detected in Kadandale near Moodabidri of Dakshina Kannada district .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X