• search
For mangaluru Updates
Allow Notification  

  ನವ ಮಂಗಳೂರು ಬಂದರಿನಲ್ಲಿ ಬಾಷ್ ನಿಂದ ಸೌರ ವಿದ್ಯುತ್ ಉತ್ಪಾದನೆ

  By Mahesh
  |

  ಮಂಗಳೂರು, ಆಗಸ್ಟ್ 24: ದೇಶದ ಮುಂಚೂಣಿಯಲ್ಲಿರುವ ತಂತ್ರಜ್ಞಾನ ಮತ್ತು ಸೇವೆಗಳ ಸಂಸ್ಥೆಯಾದ ಬಾಷ್ ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ (ನವ ಮಂಗಳೂರು ಬಂದರು ಟ್ರಸ್ಟ್-ಎನ್‍ಎಂಪಿಟಿ) ಯಲ್ಲಿ 4 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ವಿದ್ಯುತ್ ಉತ್ಪಾದನಾ ಯೋಜನೆಯನ್ನು ಅನುಷ್ಠಾನಗೊಳಿಸಿದೆ.

  ಭಾರತದಲ್ಲಿರುವ ಬಾಷ್ಎನರ್ಜಿ ಅಂಡ್ ಬಿಲ್ಡಿಂಗ್ ಸಲೂಶನ್ಸ್ (ಬಿಇಬಿಎಸ್) ತಂಡ ಈ ಯೋಜನೆಯನ್ನು ಕಾರ್ಯಗತಗೊಳಿಸಿದೆ. ಸುಮಾರು 18 ಎಕರೆ ಪ್ರದೇಶದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಈ ಘಟಕದಿಂದ ಪ್ರತಿದಿನ 20,000 ಯೂನಿಟ್‍ಗಳಷ್ಟು ವಿದ್ಯುತ್ ಉತ್ಪಾದನೆಯಾಗಲಿದೆ. ಅಂದರೆ, ನಗರ ಪ್ರದೇಶದ ಸುಮಾರು 5,000 ಮನೆಗಳಿಗೆ ಬಳಸುವ ವಿದ್ಯುತ್‍ಗೆ ಸಮನಾದ ವಿದ್ಯುತ್ತನ್ನು ಉತ್ಪಾದಿಸುತ್ತದೆ.

  Bosch executes 4 MW solar project for NMPT

  ಪಿವಿ ತಂತ್ರಜ್ಞಾನದಲ್ಲಿ ಪರಿಣಿತಿ ಹೊಂದಿರುವ ಬಾಶ್‍ನ ತಂಡವು ಎನ್‍ಎಂಪಿಟಿಯ ತಜ್ಞರೊಂದಿಗೆ ಸೇರಿ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ. ಈ ಘಟಕದಲ್ಲಿ ದೀರ್ಘಾವಧಿವರೆಗೆ ಸ್ವಯಂಚಾಲಿತ ವಿದ್ಯುತ್ ಉತ್ಪಾದನೆಯಾಗಲಿದ್ದು, ಪ್ರತಿವರ್ಷ 4,100 ಟನ್‍ನಷ್ಟು ಸಿಒ2 ಉತ್ಪತ್ತಿಯಾಗುವುದನ್ನು ತಪ್ಪಿಸಲಿದೆ.

  ಈ ಯೋಜನೆ ಎನ್‍ಎಂಪಿಟಿಯ ಇಂಧನದ ಪ್ರಮುಖ ಘಟ್ಟವಾಗಲಿದೆ.ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ 2015 ರಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳನ್ನು ಆರಂಭಿಸುವ ಕುರಿತು ಬಾಶ್ ಒಪ್ಪಂದ ಮಾಡಿಕೊಂಡಿತು. ಅಲ್ಲಿ ಒಟ್ಟು 20 ಮೆಗಾವ್ಯಾಟ್‍ನಷ್ಟು ವಿದ್ಯುತ್ ಉತ್ಪಾದಿಸುವ ಸಾಧ್ಯತೆಗಳನ್ನು ಕಂಡುಕೊಂಡಿತು. ಇದರ ಪರಿಣಾಮ ವಿಮಾನನಿಲ್ದಾಣದಲ್ಲಿ ಪ್ರಸ್ತುತ 6 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದೆ.

  2017 ರ ಮೇನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಕಾರ್ ಪಾರ್ಕಿಂಗ್ ಜಾಗ ಮತ್ತು ರನ್‍ವೇ ಸಮೀಪ 2.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ಎಸ್‍ಇಸಿಐ ನಡೆಸಿದ ಸ್ಪರ್ಧಾತ್ಮಕ ಬಿಡ್ಡಿಂಗ್‍ನಲ್ಲಿ ಎನ್‍ಎಂಪಿಟಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಬಾಶ್ ಸಂಸ್ಥೆಯನ್ನು ಆಯ್ಕೆ ಮಾಡಲಾಯಿತು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ಇನ್ನಷ್ಟು ಮಂಗಳೂರು ಸುದ್ದಿಗಳುView All

  English summary
  Bosch Ltd, a supplier of technology and services, has commissioned a 4 MW solar project for the New Mangalore Port Trust (NMPT).

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more