ಡಿ.23ರಂದು ಮಂಗಳೂರಿನಲ್ಲಿ ಪುಸ್ತಕ ಬಿಡುಗಡೆ, ಗಾಯನಗೋಷ್ಠಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್, 22: ಬಿಳಿಚುಕ್ಕೆ ಪ್ರಕಾಶನ ಸಂಸ್ಥೆ ವತಿಯಿಂದ ಪುಸ್ತಕ ಬಿಡುಗಡೆ ಮತ್ತು ಗಾಯನಗೋಷ್ಠಿ ಕಾರ್ಯಕ್ರಮ ಡಿಸೆಂಬರ್ 23 ರಂದು ಸಂಜೆ 6.30ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.

ಇತ್ತೀಚೆಗೆ ದಿವಂಗತರಾದ ಮಂಗಳೂರಿನ ಛಾಯಾಚಿತ್ರಗಾರ, ಪತ್ರಕರ್ತ ಹಾಗೂ ಬರಹಗಾರ ಅಹ್ಮದ್ ಅನ್ವರ್ ರವರ ಪಯಣಿಗನ ಪದ್ಯಗಳು' ಹಾಗೂ ಹಿರಿಯ ಬಹುಭಾಷಾ ಸಾಹಿತಿ ಮುಹಮ್ಮದ್ ಬಡ್ಡೂರ್ ರವರ 'ಬಡ್ಡೂರರ ಸದ್ದುಗಳು' ಕವನ ಸಂಕಲನ.

ಅನುಪಮ ಮಹಿಳಾ ಮಾಸಿಕದ ಪ್ರಧಾನ ಸಂಪಾದಕಿ ಶಹನಾಝ್ ಎಂ.ರವರ 'ನಿನಗಾಗಿ'(ಕಾದಂಬರಿ) ಮತ್ತು ಸನ್ಮಾರ್ಗ ವಾರಪತ್ರಿಕೆಯ ಸಂಪಾದಕ ಏ.ಕೆ.ಕುಕ್ಕಿಲರವರ 'ಸರಸ-ಸಲ್ಲಾಪ'(ಲಲಿತ ಪ್ರಬಂಧ) ಎಂಬ ನಾಲ್ಕು ಪುಸ್ತಕಗಳು ಬಿಡುಗಡೆಯಾಗಲಿದೆ.

Book release and music programs at Mangalore on december 23

ಮುಖ್ಯ ಅತಿಥಿಗಳಾಗಿ ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸತ್ಯನಾರಾಯಣ ಮಲ್ಲಿಪಟ್ಟಣ ಹಾಗೂ ಖ್ಯಾತ ಹಾಸ್ಯ ಲೇಖಕಿ ಶ್ರೀಮತಿ ಭುವನೇಶ್ವರಿ ಹೆಗಡೆ ಭಾಗವಹಿಸಲಿದ್ದಾರೆ.

ಶಾಂತಿ ಪ್ರಕಾಶನ ವ್ಯವಸ್ಥಾಪಕ ಮುಹಮ್ಮದ್ ಕುಂಞ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ಸ್ಥಾಪಕಾಧ್ಯಕ್ಷರಾದ ಅಬ್ದುಲ್ ರವೂಫ್ ಪುತ್ತಿಗೆ, ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್., ಮಹಿಳಾ ಮಂಡಲಗಳ ಒಕ್ಕೂಟದ ಸ್ಥಾಪಕಾಧ್ಯಕ್ಷೆ ಶ್ರೀಮತಿ ಕೆ.ಎ.ರೋಹಿಣಿ, ನ್ಯೂಸ್‍ಕನ್ನಡ ವೆಬ್ ಪೋರ್ಟಲ್ ನಿರ್ದೇಶಕರಾದ ಇಮ್ರಾನ್ ಖಾನ್ ಎರ್ಮಾಳ್ ಶುಭಕೋರಲಿದ್ದಾರೆ.

ಗಾಯನಗೋಷ್ಠಿ: ಪುಸ್ತಕ ಬಿಡುಗಡೆ ಬಳಿಕ ನಡೆಯುವ ಗಾಯನಗೋಷ್ಠಿಯಲ್ಲಿ ಮುಹಮ್ಮದ್ ಬಡ್ಡೂರ್, ನಾದ ಮಣಿನಾಲ್ಕೂರು, ಶರೀಫ್ ನಿರ್ಮುಂಜೆ, ಬಶೀರ್ ಅಹ್ಮದ್ ಕಿನ್ಯಾ, ಉಮರ್ ಮೌಲವಿ ಮಡಿಕೇರಿ, ಅಝ್ಹರುಲ್ಲಾ ಖಾಸಿಮಿ, ಸಲೀಮ್ ಬೋಳಂಗಡಿ ಭಾಗವಹಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Poetry, Navels Book release and music programs at Purabhavana Mangaluru on december 23
Please Wait while comments are loading...