ಬಣ್ಣ ಬಣ್ಣದ ಬಾಂಬೆ ಐಸ್ ಗೋಲಾ

Posted By: ಕಾವೇರಿ ಭಾರದ್ವಾಜ್
Subscribe to Oneindia Kannada

ನೋಡಲು ಆಕರ್ಷಕ ಬಣ್ಣಗಳು. ಪ್ರಕೃತಿಯಲ್ಲಿ ದೊರೆಯುವ ಹಣ್ಣುಗಳ ರುಚಿಯೇ ಹಾಗೇ. ಸವಿದರೆ ಇನ್ನಷ್ಟೂ ಬೇಕೆನಿಸುವ ಮಧುರವಾದ ಸ್ವಾದ. ದಣಿವಾರಿಸಿಕೊಳ್ಳಲು ಇಲ್ಲಿದೆ ಸುಲಭ ಮಾರ್ಗೋಪಾಯ. ಗ್ರಾಹಕರನ್ನು ದಿನದಿಂದ ದಿನಕ್ಕೆ ತನ್ನತ್ತ ಸೆಳೆಯುತ್ತಿರುವ ಬಾಂಬೆ ಐಸ್ ಗೋಲಾ.

ಧರ್ಮಸ್ಥಳದಲ್ಲಿ ಎಂದಿರನ್ ಭವಿಷ್ಯ

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಬಿಸಿಲಿನ ತಾಪವನ್ನು ವಿಧವಿಧ ರುಚಿಯಲ್ಲಿ ದೊರೆಯುತ್ತಿರುವ ಬಾಂಬೆ ಐಸ್ ಗೋಲಾಗಳು ನೀಗಿಸುತ್ತಿವೆ. ಕೆಂಪು ಹಳದಿ, ಹಸಿರು ನೋಡಲು ಆಕರ್ಷಕ ಬಣ್ಣಗಳಲ್ಲಿ ವಿಧವಿಧವಾದ ಹಣ್ಣಿನ ಸ್ವಾದದಲ್ಲಿ ಬಾಂಬೆ ಐಸ್ ಗೋಲಾ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಧರ್ಮಸ್ಥಳದ ವಸ್ತುಪ್ರದರ್ಶನದಲ್ಲಿ ಮೈ ಮರೆಸುವ ಮರದ ವಸ್ತು

Bombay ice Gola is the main attraction in Dharmasthala

ಮ್ಯಾಂಗೋ, ಸ್ಟ್ರಾಬೆರ್ರಿ, ಪೈನಾಪಲ್, ಆರೆಂಜ್. ಕೊಕೊ ಕೊಲಾ ಹಾಗು ಚಾಕ್‌ಲೇಟ್ ಫ್ಲೇವರ್‌ಗಳಲ್ಲಿ ದೊರೆಯುತ್ತಿದೆ. ಬಿಸಿಲಿನ ಬೇಗೆಯಲ್ಲಿ ತಾಪ ನೀಗಿಸಿಕೊಳ್ಳಲು ದೀಪೋತ್ಸವಕ್ಕೆ ಆಗಮಿಸಿರುವ ಭಕ್ತಾದಿಗಳು ಐಸ್ ಗೋಲಾ ಅಂಗಡಿ ಕಡೆಗೆ ಲಗ್ಗೆ ಇಡುತ್ತಿದ್ದಾರೆ. ತರಹೇವಾರಿ ಬಣ್ಣಗಳಿಂದಲೇ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿರುವ ಬಾಂಬೆ ಐಸ್ ಗೋಲಾಗಳನ್ನು ೩೦ ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಹಣ್ಣಿನ ರಸದ ಫ್ಲೇವರ್‌ಗಳು ಮಂಜುಗೆಡ್ಡೆಯನ್ನು ಆವರಿಸಿ ವಿಶೇಷ ರುಚಿ ನೀಡುತ್ತಿವೆ.

ಗ್ಯಾಲರಿ: ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಭ್ರಮ

ರುಚಿಯೊಂದಿಗೆ ಶುಚಿತ್ವವನ್ನು ಕಾಪಾಡಿಕೊಂಡು ಗ್ರಾಹಕರಿಗೆ ಬಾಯಾರಿಕೆಯ ಬೇಗೆ ನೀಗಿಸುವುದು ಸಂತಸದ ವಿಷಯ. ಲಕ್ಷದೀಪೋತ್ಸವದಲ್ಲಿ ಮೊದಲ ಬಾರಿ ಭಾಗವಹಿಸಿರುವುದು ವಿಶೇಷ ಅನುಭವ ನೀಡಿದೆ. ಗ್ರಾಹಕರಿಂದ ಉತ್ರಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಬಾಂಬೆ ಐಸ್ ಗೋಲಾ ಅಂಗಡಿಯ ಮಾಲೀಕ ಮೊಹಮ್ಮದ್ ಮಿರಾದ್ ಸಂತಸ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bombay ice Gola is attracting peoples in Dharmasthala,

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ