ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಹಳೆ ಬಂದರಿನಿಂದ ಲಕ್ಷದ್ವೀಪಕ್ಕೆ ಹಡಗು ಯಾನ ಆರಂಭ

|
Google Oneindia Kannada News

ಮಂಗಳೂರು, ನವೆಂಬರ್. 22: ಮಂಗಳೂರು ಹಳೆ ಬಂದರಿನಿಂದ ಲಕ್ಷದ್ವೀಪಕ್ಕೆ ಹಡಗು ಯಾನ ಆರಂಭವಾಗಿದೆ. ಗಜ ಚಂಡಮಾರುತದ ಭೀತಿಯ ಹಿನ್ನೆಲೆಯಲ್ಲಿ ಲಕ್ಷದ್ವೀಪಕ್ಕೆ ಹಡಗು ಯಾನ ವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಲಕ್ಷ ದ್ವೀಪಕ್ಕೆ ಮತ್ತೆ ಸರಕು ಹಾಗೂ ಪ್ಯಾಸೆಂಜರ್ ಹಡಗು ಯಾನ ಮಂಗಳೂರು ಹಳೆ ಬಂದರಿನಿಂದ ಆರಂಭಗೊಂಡಿದೆ.

ಹಡಗುಗಳಲ್ಲಿ ಪ್ರತಿದಿನ ದಿನಬಳಕೆಯ ಆಹಾರ ವಸ್ತುಗಳು, ಕಾಫಿ , ಸಾಂಬಾರು ಪದಾರ್ಥ, ಮನೆ ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿಗಳ ಸರಕು ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಸಾಗಾಟ ಮಾಡಲಾಗುತ್ತದೆ. ಅಷ್ಟೇ ಅಲ್ಲ ಪ್ರವಾಸಿಗರನ್ನು ಹೊತ್ತ ಪ್ಯಾಸೆಂಜರ್ ಹಡಗು ಕೂಡ ಲಕ್ಷ ದ್ವೀಪಕ್ಕೆ ತೆರಳುತ್ತದೆ.

ಎನ್ ಎಂಪಿಟಿಯಲ್ಲಿ ತೈಲ ಸೋರಿಕೆ: ತಪ್ಪಿದ ಭಾರೀ ಅನಾಹುತಎನ್ ಎಂಪಿಟಿಯಲ್ಲಿ ತೈಲ ಸೋರಿಕೆ: ತಪ್ಪಿದ ಭಾರೀ ಅನಾಹುತ

ಕಳೆದ ಎರಡು ದಿನಗಳಿಂದ ಮಂಗಳೂರಿನ ಹಳೆ ಬಂದರಿನಿಂದ ಆರು ಸಣ್ಣ ಸರಕು ಹಡಗುಗಳು ಹಾಗೂ ಒಂದು ಪ್ಯಾಸೆಂಜರ್ ಹಡಗು ಲಕ್ಷ ದ್ವೀಪಕ್ಕೆ ಪ್ರಯಾಣ ಬೆಳೆಸಿದೆ.

Boats stared sailing from Mangaluru to Lakshadeep

ಬಂಗಾಳಕೊಲ್ಲಿಯಲ್ಲಿ ಉಂಟಾದ ಚಂಡಮಾರುತ ಅರಬ್ಬಿ ಸಮುದ್ರ ಕಡೆಗೆ ತಿರುಗಿದ ಹಿನ್ನೆಲೆಯಲ್ಲಿ ಮಂಗಳೂರು ಹಳೆ ಬಂದರಿನಿಂದ ಲಕ್ಷದ್ವೀಪಕ್ಕೆ ತೆರಳಬೇಕಿದ್ದ ಸರಕು ಹಾಗೂ ಪ್ರಯಾಣಿಕರ ಹಡಗುಗಳ ಸಂಚಾರ ಕಳೆದ ಒಂದು ವಾರದ ಹಿಂದೆ ಸ್ಥಗಿತಗೊಂಡಿತ್ತು.

ಹೀಗೂ ಉಂಟೇ?: ಹೆಲಿಕ್ಯಾಪ್ಟರ್ ನಲ್ಲಿ ಬಂದು ಮೀನು ಕೇಳಿದ ಕೋಸ್ಟ್ ಗಾರ್ಡ್ ಸಿಬ್ಬಂದಿ!ಹೀಗೂ ಉಂಟೇ?: ಹೆಲಿಕ್ಯಾಪ್ಟರ್ ನಲ್ಲಿ ಬಂದು ಮೀನು ಕೇಳಿದ ಕೋಸ್ಟ್ ಗಾರ್ಡ್ ಸಿಬ್ಬಂದಿ!

ಹವಮಾನ ಇಲಾಖೆ ಒಪ್ಪಿಗೆ ಸೂಚಿಸಿದ ಬಳಿಕ ಮತ್ತೆ ಈಗ ಹಳೆ ಬಂದರಿನಿಂದ ಸರಕು ಹಾಗೂ ಪ್ಯಾಸೆಂಜರ್ ಹಡಗು ಲಕ್ಷದ್ವೀಪದತ್ತ ಯಾನ ಬೆಳೆಸಿದೆ.

Boats stared sailing from Mangaluru to Lakshadeep

ಸಮುದ್ರದಾಳದಲ್ಲಿ ಪತ್ತೆಯಾದ 400 ವರ್ಷದ ಹಡಗಲ್ಲಿ ಭಾರತದ ಸಾಂಬಾರ ಪದಾರ್ಥ!ಸಮುದ್ರದಾಳದಲ್ಲಿ ಪತ್ತೆಯಾದ 400 ವರ್ಷದ ಹಡಗಲ್ಲಿ ಭಾರತದ ಸಾಂಬಾರ ಪದಾರ್ಥ!

ಲಕ್ಷದ್ವೀಪದಲ್ಲಿ ದಿನಬಳಕೆಯ ಹಾಗೂ ಗೃಹ ನಿರ್ಮಾಣ ಸಾಮಗ್ರಿಗಳ ಬೇಡಿಕೆ ಹೆಚ್ಚಾದ ಸಂದರ್ಭದಲ್ಲಿ ಕೆಲವೊಮ್ಮೆ ಮಂಗಳೂರು ಹಳೆ ಬಂದರಿನಿಂದ 10ಕ್ಕೂ ಹೆಚ್ಚು ಹಡಗುಗಳು ಲಕ್ಷದ್ವೀಪಕ್ಕೆ ತೆರಳುತ್ತವೆ.

English summary
Gaja cyclone impact Boats sailing to Lakshadeep from Mangaluru stoped. But now boats stared sailing to Lakshadeep
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X