ಮಂಗಳೂರು: ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ, ಇಂದು ಕಡಬ ಬಂದ್

Subscribe to Oneindia Kannada

ಪುತ್ತೂರು, ಜುಲೈ 17: ದಕ್ಷಿಣ ಕನ್ನಡದ ಕಡಬದಲ್ಲಿ ಬಿಜೆಪಿ ಯುವ ನಾಯಕರೊಬ್ಬರ ಮೇಲೆ ಭಾನುವಾರ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಇಂದು ಕಡಬ ಬಂದ್ ಗೆ ಕರೆ ನೀಡಿವೆ.

ಕಡಬದ ಸ್ಥಳೀಯ ಸಿಎ ಬ್ಯಾಂಕಿನ ಉಪಾಧ್ಯಕ್ಷರಾದ ರಮೇಶ್ ಕಲ್ಪುರೆ (45) ಗಾಯಗೊಂಡ ವ್ಯಕ್ತಿಯಾಗಿದ್ದಾರೆ.

BJP youth leader assaulted in Kadaba, Dakshina Kannada

ರಮೇಶ್ ಭಟ್ ಕಲ್ಪುರೆ ಇಲ್ಲಿನ ಸ್ಥಳೀಯ ಅಂಗಡಿಯಿಂದ ಸಾಮಾನು ಖರೀದಿಸಿ ಮರಳಿ ಜೀಪು ಹತ್ತುವಾಗ 5 ಜನರ ತಂಡ ಬಂದು ಹಲ್ಲೆ ಮಾಡಿದೆ. ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸ್ಥಳೀಯರಾದ ಪ್ರಕಾಶ್, ಟೀನ್ಸನ್, ಸನೋಶ್, ಲಿಜೋ ಮತ್ತು ಸಂತೋಶ್ ರನ್ನು ಹಲ್ಲೆ ಮಾಡಿದ ಆರೋಪದಲ್ಲಿ ಪೊಲೀಸರು ಬಂಧಿಸಿಲಾಗಿದೆ.

ಹಲ್ಲೆಯ ತೀವ್ರತೆಗೆ ರಮೇಶ್ ಅವರ ಮೂಗು ಮತ್ತು ಎಡ ಕಣ್ಣಿಗೆ ಗಾಯವಾಗಿದ್ದು ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ 55,000 ರೂಪಾಯಿ, ಚಿನ್ನದ ಚೈನು ಹಾಗೂ ಬ್ರೇಸ್ ಲೆಟ್ ನ್ನು ಹಲ್ಲೆಕೋರರು ಎಗರಿಸಿದ್ದಾರೆ ಎಂದು ರಮೇಶ್ ದೂರಿನಲ್ಲಿ ತಿಳಿಸಿದ್ದಾರೆ.

Devegowda's Padayatra In Mangalauru Is Cancelled

ಘಟನೆ ಬೆನ್ನಿಗೆ ಹಲ್ಲೆಕೋರರ ಬೆಂಬಲಿಗರು ಮತ್ತು ರಮೇಶ್ ಬೆಂಬಲಿಗರ ನಡುವೆ ಕಡಬ ಪೊಲೀಸ್ ಠಾಣೆಯಲ್ಲಿ ವಾಗ್ವಾದ ನಡೆದಿದೆ ಎಂದು ತಿಳಿದು ಬಂದಿದೆ. ನಂತರ ಪೊಲೀಸರು ಬೆಂಬಲಿಗರನ್ನು ಸ್ಥಳದಿಂದ ಕಳುಹಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The BJP youth leader was assaulted by a group on Sunday, July 16 here in Kadaba, Dakshina Kannada. BJP and pro-Hindu organizations have called for a bandh on Today for protesting the assault.
Please Wait while comments are loading...