ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ: ಅನಂತ ಕುಮಾರ್

|
Google Oneindia Kannada News

ಮಂಗಳೂರು: ಕರ್ನಾಟಕದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಗೇ ಗೆಲುವು ಸಿಗಲಿದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂಬ ಹಗಲುಗನಸು ಕಾಣುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಟೀಕಿಸಿದ್ದಾರೆ.

ಇಲ್ಲಿನ ವಿಕಾಸ್ ಕಾಲೇಜಿನಲ್ಲಿ ನವೀಕೃತ ಪಿಸಿಯೋಥೆರಪಿ ಲ್ಯಾಬ್ ಉದ್ಘಾಟನೆ ನೆರವೇರಿಸಿದ ಅವರು ಆನಂತರ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಭಿನ್ನಮತವಿದೆ. ಕಾಂಗ್ರೆಸ್ ನ ಜನಾರ್ದನ ಪೂಜಾರಿ ಪ್ರಶ್ನೆಗೆ ಕಾಂಗ್ರೆಸ್ ನಲ್ಲಿ ಉತ್ತರವಿಲ್ಲ. ಯಾರು ನಿಜವಾದ ಜಾತ್ಯಾತೀತರು, ಯಾರು ಢೋಂಗಿ ಜಾತ್ಯಾತೀತರು ಎಂಬುದು ಜನರಿಗೆ ಗೊತ್ತಿದೆ ಎಂದರು.

BJP will come to power: BJP leader Ananth Kumar Hopes

ಇತ್ತೀಚೆಗೆ ಬಂದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶಗಳ ಬಗ್ಗೆ ಮಾತನಾಡಿದ ಅವರು, ಅದು ಬಿಜೆಪಿ ಪರವಾಗಿ ಸಿಕ್ಕ ಜನಾದೇಶ. ಮೋದಿ ಅವರ ಕಾರ್ಯಕ್ಕೆ ಸಿಕ್ಕ ಜನಾದೇಶ ಎಂದು ಬಣ್ಣಿಸಿದರು. ಈಗಾಗಲೇ ೧೭ ರಾಜ್ಯದಲ್ಲಿ ಬಿಜೆಪಿ ಅಧಿಕಾರವಿದೆ. ಎಲ್ಲರಿಗೂ ಮೋದಿ ಮಾಡೆಲ್ ಆಡಳಿತ ಬೇಕಾಗಿದೆ ಎಂದರು.

ಹಿಂದುಳಿದ ವರ್ಗ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಮಸೂದೆ. ಕಾಂಗ್ರೆಸ್ ಇದನ್ನು ವಿರೋಧಿಸಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ವಿರೋಧದಿಂದ ಹಿಂದುಳಿದ ವರ್ಗದ ಹಕ್ಕಿಗೆ ಚ್ಯುತಿ ಆಗಿದೆ. ಅದರ ವಿರುದ್ದ ಬಿಜೆಪಿ ಹೋರಾಟ ಮಾಡುತ್ತದೆ ಎಂದರು.

ಇತ್ತೀಚೆಗೆ, ಗೂಟದ ಕಾರುಗಳನ್ನು ನಿಷೇಧಿಸಿದ ಕೇಂದ್ರ ಕ್ರಮವನ್ನು ಟೀಕಿಸಿದ್ದ ರಾಜ್ಯದ ಸಚಿವ ಬಸವರಾಜ ರಾಯರೆಡ್ಡಿಯವರ ಹೇಳಿಕೆಯನ್ನು ಅನಂತ ಕುಮಾರ್ ಖಂಡಿಸಿದರು.

''ಪ್ರಧಾನಿ ಮಾತ್ರ ಭದ್ರತಾ ವ್ಯವಸ್ಥೆ ನೋಡಿಕೊಂಡಿದ್ದು, ಇತರರ ರಾಜಕೀಯ ನೇತಾರರನ್ನು, ಸಚಿವರನ್ನು ಅತಂತ್ರರಾಗಿರುವಂತೆ ಮಾಡಿದ್ದಾರೆ ಎಂದು ರಾಯರೆಡ್ಡಿ ಹೇಳಿದ್ದಾರೆ. ಸಂವಿಧಾನದಲ್ಲಿ ನಂಬಿಕೆ ಇದ್ದವರು ಈ ರೀತಿಯ ಹೇಳಿಕೆ ನೀಡಬಾರದು. ಸಂವಿಧಾನವನ್ನು ಅಧ್ಯಯನ ಮಾಡಲಿ. ಪ್ರಧಾನಿಗೆ ರಕ್ಷಣೆ ನೀಡಬೇಕು ಎಂಬುದು ಅದರಲ್ಲಿ ಇದೆ. ಪ್ರಮಾಣ ವಚನ ಸ್ವೀಕರಿಸಿದ ಅವರಿಗೆ ಇದು ಗೊತ್ತಿರಬೇಕು'' ಎಂದು ಅನಂತಕುಮಾರ್ ಹೇಳಿದರು.

ಶೀಘ್ರದಲ್ಲೇ ಜಾರಿಗೊಳ್ಳಲಿರುವ ಸರಕು ಮತ್ತು ಸೇವಾ ತೆರಿಗೆ ಬಗ್ಗೆ ಮಾತನಾಡಿದ ಅವರು, ''ಈ ವರ್ಷದ ಕೇಂದ್ರ ಬಜೆಟ್ ಅಧಿವೇಶನ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಅಧಿವೇಶನ. ಜಿ ಎಸ್ ಟಿ ತೆರಿಗೆ ನಾಲ್ಕು ವಿಧೇಯಕ ಮಂಜೂರಾಗಿವೆ. ಜುಲೈ ೧ ರಿಂದ ಜಿಎಸ್ ಟಿ ತೆರಿಗೆ ಜಾರಿಗೊಳ್ಳಲಿದ್ದು, ಇದು ಈಗ ಚಾಲ್ತಿಯಲ್ಲಿರುವ 21 ತೆರಿಗೆಗಳನ್ನು ಕೊನೆಗಾಣಿಸಿ ಒಂದೇ ರೀತಿಯ ತೆರಿಗೆ ವ್ಯವಸ್ಥೆಗೆ ನಾಂದಿ ಹಾಡಲಿದೆ'' ಎಂದರು.
3 ವರ್ಷಗಳ ಹಿಂದೆ ಗೊಬ್ಬರ ಕೊರತೆಯಿಂದ ಗೊಂದಲ ಹಾಹಾಕಾರ ನಿರ್ಮಾಣವಾಗಿತ್ತು. ರಸಗೊಬ್ಬರ ಕೊರತೆ ಈಗ ಇಲ್ಲ. ಈಗ ಅಗತ್ಯಕ್ಕಿಂತ ಹೆಚ್ಚು ರಸಗೊಬ್ಬರ ಉತ್ಪಾದನೆ ಆಗುತ್ತಿದೆ. 20 ವರ್ಷಗಳಿಂದ ಮೂರು ಕಂಪನಿಗಳ ಮುಚ್ಚಿತ್ತು. ದೇಶಾದ್ಯಂತ ಹಲವು ಕಂಪನಿಗಳ ಪುನರುಜ್ಜೀವನ ಆಗುತ್ತಿದೆ. 2020ರ ಹೊತ್ತಿಗೆ ರಸಗೊಬ್ಬರದಲ್ಲಿ ಸ್ವಾವಲಂಬನೆ ಹೊಂದಲಿದ್ದೇವೆ ಎಂದರು.

ಸಮಾರಂಭದಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಹಾಜರಿದ್ದರು.

English summary
In next years assembly election in Karnataka, BJP will secure the power, says Central minister and BJP senior leader Ananth Kumar. He was talking at a function in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X