ಮಂಗಳೂರಿನಲ್ಲಿ ಎನ್ಐಎ ಕಚೇರಿ ಆರಂಭಿಸುವಂತೆ ರಾಜನಾಥ್ ಸಿಂಗ್ ಗೆ ಮನವಿ

Subscribe to Oneindia Kannada

ನವದೆಹಲಿ, ಜುಲೈ 17: ಮಂಗಳೂರಿನಲ್ಲಿ ಎನ್ಐಎ ಕಚೇರಿ ಆರಂಭಿಸುವಂತೆ ಬಿಜೆಪಿ ನಿಯೋಗ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರಿಗೆ ಮನವಿ ಸಲ್ಲಿಸಿದೆ.

ಇಂದು ನವದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಡಿವಿ ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಅವರಿದ್ದ ನಿಯೋಗ ರಾಜನಾಥ್ ಸಿಂಗ್ ರನ್ನು ಭೇಟಿಯಾಯಿತು.

BJP requested Rajnath Singh to open NIA Office in Mangaluru

ಈ ವೇಳೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ರಾಜನಾಥ್ ಸಿಂಗ್ ರಿಗೆ ನಿಯೋಗ ದೂರು ಸಲ್ಲಿಸಿತು.

ಮಾತ್ರವಲ್ಲ, "ಮಂಗಳೂರಿನಲ್ಲಿ ಎನ್ಐಎ ಕಚೇರಿ ಆರಂಭಿಸುವಂತೆ ರಾಜನಾಥ್ ಸಿಂಗ್ ರಿಗೆ ಮನವಿ ಸಲ್ಲಿಸಿದ್ದೇವೆ. ಜತೆಗೆ ಶರತ್ ಮಡಿವಾಳ ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸುವಂತೆಯೂ ಹೇಳಿದ್ದೇವೆ," ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.

Chennai - Mangalore express train derailed at Mangaluru

ಇಲ್ಲಿಯವರಗೆ 23 ರಾಜಕೀಯ ಕೊಲೆಗಳು ನಡೆದಿವೆ. ಎಲ್ಲಾ ಪ್ರಕರಣಗಳನ್ನೂ ಎನ್ಐಎಗೆ ವರ್ಗಾಯಿಸುವಂತೆ ಅವರು ಒತ್ತಾಯಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
“We have requested home minister Rajnath Singh to open National Investigation Agency’s (NIA) Office in Mangaluru immediately, and that Sharath murder case to be referred to NIA,” said Karnataka BJP president BS Yeddyurappa after meeting with home minister.
Please Wait while comments are loading...