ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಮೇಯರ್ ಎಸ್ಸೆಸ್ಸೆಲ್ಸಿ ಫೇಲ್, ಸಾಮಾನ್ಯ ಸಭೆಯಲ್ಲಿ ಅದೇ ಚರ್ಚೆ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 28: ರಫ್ ಅಂಡ್ ಟಫ್ ಮೇಯರ್ ಎಂದೇ ಹೇಳುವ ಮಂಗಳೂರು ಮೇಯರ್ ಕವಿತಾ ಸನಿಲ್ ಶೈಕ್ಷಣಿಕ ವಿಚಾರ ಭಾರೀ ಚರ್ಚೆಯಲ್ಲಿದೆ. ಕವಿತಾ ಸನಿಲ್ ಎಸ್ಸೆಸ್ಸೆಲ್ಸಿ ಫೇಲ್ ಆಗಿದ್ದಾರೆ ಎಂಬುದು ಸದ್ಯಕ್ಕೆ ವಿಪಕ್ಷಗಳು ಮಾಡುತ್ತಿರುವ ಆರೋಪ. ಅಷ್ಟೇ ಅಲ್ಲ, ಹೀಗೆ ಎಸ್ಸೆಸ್ಸೆಲ್ಸಿ ಫೇಲಾದ ಕವಿತಾ ಸನಿಲ್ ತಮ್ಮದು ಪದವಿ ಆಗಿದೆ ಎಂದು ಸುಳ್ಳು ಹೇಳಿದ್ದಾರೆ ಎಂಬುದು ಆಕ್ಷೇಪ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಮುಖಂಡ ಹಾಗೂ ವಿಪಕ್ಷ ನಾಯಕ ಗಣೇಶ್ ಹೊಸಬೆಟ್ಟು ಇದೇ ವಿಚಾರವನ್ನು ಮುಂದಿಟ್ಟುಕೊಂಡು ಆರೋಪ ಮಾಡಿದರು. ಕವಿತಾ ಸನಿಲ್ ಅವರು ಮೇಯರ್ ಆಗಿ ಪಾಲ್ಗೊಂಡಿದ್ದ ಕೊನೆಯ ಸಾಮಾನ್ಯ ಸಭೆಯಲ್ಲಿ ಈ ವಿಚಾರದ ಬಗ್ಗೆ ಕಾವೇರಿದ ಚರ್ಚೆ ನಡೆಯಿತು.

ಸ್ಕಿಲ್ ಗೇಮ್ ಸೆಂಟರ್ ಮೇಲೆ ದಾಳಿ: ಮಂಗಳೂರು ಮೇಯರ್ ಗೆ ಹೈಕೋರ್ಟ್ ನೋಟಿಸ್ ಸ್ಕಿಲ್ ಗೇಮ್ ಸೆಂಟರ್ ಮೇಲೆ ದಾಳಿ: ಮಂಗಳೂರು ಮೇಯರ್ ಗೆ ಹೈಕೋರ್ಟ್ ನೋಟಿಸ್

ಸಭೆಯಲ್ಲಿ ಮಾತನಾಡಿದ ಗಣೇಶ್ ಹೊಸಬೆಟ್ಟು, ಕವಿತಾ ಸನಿಲ್ ಅವರು ಚುನಾವಣೆಯ ಸಂದರ್ಭದಲ್ಲಿ ಸುಳ್ಳು ದಾಖಲೆ ನೀಡಿದ್ದಾರೆ. ಪದವಿ ಪಡೆದಿದ್ದೇನೆ ಎಂದು ಕವಿತಾ ಹೇಳಿದ್ದರು. ಆದರೆ ಅವರು ಎಸ್ಸೆಸ್ಸೆಲ್ಸಿ ಫೇಲ್ ಆಗಿದ್ದಾರೆ. ಆದರೂ ಪಾಸ್ ಎಂದು ನಮೂದಿಸಿದ್ದಾರೆ. ಎಂದು ಹೇಳಿದರು.

BJP members of MCC targets Mayor Kavitha Sanil over her education qualification

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದು, ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ತಮ್ಮ ಮೇಲೆ ಮಾಡಿದ ಆರೋಪಕ್ಕೆ ಉತ್ತರಿಸಿದ ಮೇಯರ್ ಕವಿತಾ ಸನಿಲ್, ನಾನು ಎಸ್ಸೆಸ್ಸೆಲ್ಸಿಯವರೆಗೆ ರೆಗ್ಯುಲರ್ ವಿದ್ಯಾಭ್ಯಾಸ ಮಾಡಿದ್ದೇನೆ. ಪಿಯುಸಿ, ಡಿಗ್ರಿಯನ್ನು ದೂರ ಶಿಕ್ಷಣದ ಮೂಲಕ ಮಾಡಿದ್ದೇನೆ. ನಾನು ಯಾವತ್ತೂ ಸುಳ್ಳು ಹೇಳಿಲ್ಲ. ಇದಕ್ಕೆ ಬೇಕಾದ ದಾಖಲೆಯನ್ನು ನೀಡಲು ಸಿದ್ಧ ಎಂದು ಹೇಳಿದರು.

"ಪಾಲಿಕೆ ಮೇಯರ್ ಆಗಲು ಡಿಗ್ರಿ ಆಗಬೇಕು ಎಂದೇನಿಲ್ಲ. ಅಭಿವೃದ್ಧಿ ಕೆಲಸಗಳು ಆಗಬೇಕು. ನನ್ನ ಮಗುವಿನ, ಗಂಡನ ಹಾಗೂ ನನ್ನ ಶಿಕ್ಷಣದ ವಿಚಾರವನ್ನು ಮುಂದು ಮಾಡಿಕೊಂಡು ರಾಜಕೀಯ ಮಾಡುವುದು ಸರಿಯಲ್ಲ" ಎಂದು ಕವಿತಾ ಸನಿಲ್ ಆಕ್ರೋಶ ವ್ಯಕ್ತ ಪಡಿಸಿದರು.

BJP members of MCC targets Mayor Kavitha Sanil over her education qualification

ಆದರೆ, ಈ ಮಧ್ಯೆ ಮೇಯರ್ ಕವಿತಾ ಸನಿಲ್ ಎಸ್ಸೆಸ್ಸೆಲ್ಸಿ ಫೇಲ್ ಆಗಿರುವ ಬಗ್ಗೆ ಬೆಸೇಂಟ್ ಶಿಕ್ಷಣ ಸಂಸ್ಥೆ ನೀಡಿದ ಪತ್ರ ಎನ್ನಲಾದ ದಾಖಲೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆ ಆರಂಭವಾಗಿದೆ.

English summary
The general meeting of Mangaluru City Corporation here on Wednesday, February 28th witnessed uproar after the BJP members demanded clarification from mayor Kavita Sanil regarding her education qualification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X