ಮಂಗಳೂರು: ಯಡಿಯೂರಪ್ಪ ನೇತೃತ್ವದಲ್ಲಿ ಜು.13ರಂದು ಬೃಹತ್ ಪ್ರತಿಭಟನೆ

Posted By:
Subscribe to Oneindia Kannada

ಮಂಗಳೂರು, ಜುಲೈ 12 : ಹಿಂದೂ ಪರ ಸಂಘಟನೆ ನಾಯಕರ ವಿರುದ್ಧ ಎಫ್ ಐಆರ್ ದಾಖಲಿಸಿರುವುದನ್ನು ವಿರೋಧಿಸಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಜುಲೈ 13ರಂದು ನಗರದ ನೆಹರೂ ಮೈದಾನದಲ್ಲಿ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ವಕ್ತಾರೆ ಸುಲೋಚನಾ ಭಟ್ ತಿಳಿಸಿದ್ದಾರೆ.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾತನಾಡಿದ ಸುಲೋಚ ಅವರು ನಮ್ಮ ಮುಖಂಡರಾದ ಸತ್ಯಜಿತ್ ಸುರತ್ಕಲ್ ಮನೆಯ ಮೇಲೆ ಸೋಮವಾರ ತಡರಾತ್ರಿ ಮತ್ತು ಶರಣ್ ಪಂಪ್ ವೆಲ್ ಮನೆಯ ಮೇಲೆ ಮಂಗಳವಾರ ರಾತ್ರಿ ಪೊಲೀಸರು ದಾಳಿ ನಡೆಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಸಂಘ ಪರಿವಾರದವರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ವಿರೊಧಿಸಿ ಈ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ಶವಯಾತ್ರೆ ವೇಳೆ ಹಿಂಸಾಚಾರ: ಐವರು ಹಿಂದು ಮುಖಂಡರ ವಿರುದ್ಧ ಎಫ್‌ಐಆರ್

BJP Mahila Morcha jointly with bs yeddyurappa to hold protest in mangaluru

ಪೊಲೀಸರು ಈ ಪ್ರತಿಭಟನೆಗೆ ಯಾವದೇ ರೀತಿಯ ಅನುಮತಿ ಕೊಟ್ಟಿಲ್ಲ, ಅನುಮತಿ ನೀಡದಿದ್ದರೂ ಪ್ರತಿಭಟನೆ ನಡೆಸಿಯೇ ಸಿದ್ಧ ಈ ಹಿಂದೆ ಕಲ್ಲಡ್ಕದಲ್ಲೂ 144 ಸೆಕ್ಷನ್ ಇದ್ದಾಗಲೂ ಶಾಂತಿಯುತ ಪ್ರತಿಭಟನೆ ನಡೆಸಿದ್ದೇವೆ.

ಯಡಿಯೂರಪ್ಪ ಅವರು ಜುಲೈ 13ರಂದು ಮೃತ ಶರತ್ ಮಡಿವಾಳ ಅವರ ಮನೆಗೆ ಭೇಟಿ ನೀಡಲಿದ್ದಾರೆ. ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP Mahila Morcha jointly with B S Yeddyurappa to hold protest in mangaluru on July 13th, for filing 307 on Hindu organization leaders in stone pelting case during Rss member Sharat Madivala body procession. The police officials have given no permission to hold the protest.
Please Wait while comments are loading...