ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮ ಮಂದಿರ ಪರ ಮಾತನಾಡಿದ ಜನಾರ್ಧನ ಪೂಜಾರಿಗೆ ಬಿಜೆಪಿ ಮುಖಂಡರ ಬೆಂಬಲ

|
Google Oneindia Kannada News

Recommended Video

ರಾಮ ಮಂದಿರ ಪರ ಮಾತನಾಡಿದ ಜನಾರ್ಧನ ಪೂಜಾರಿಗೆ ಬಿಜೆಪಿ ಮುಖಂಡರ ಬೆಂಬಲ

ಮಂಗಳೂರು, ಡಿಸೆಂಬರ್ 05: ರಾಮ ಮಂದಿರ ನಿರ್ಮಾಣದ ಕುರಿತು ಕಾಂಗ್ರೆಸ್ ಹಿರಿಯ ಮುಖಂಡ ಬಿ ಜನಾರ್ಧನ ಪೂಜಾರಿ ಅವರು ನೀಡಿದ ಹೇಳಿಕೆ ವಿರುದ್ಧ ವಿರೋಧ ವ್ಯಕ್ತವಾಗುತ್ತಿದ್ದಂತೆ ಈ ವಿಚಾರದಲ್ಲಿ ರಾಜಕೀಯ ಮೇಲಾಟಗಳು ಆರಂಭವಾಗಿವೆ.

ಪೂಜಾರಿ ವಿರುದ್ಧ ದಕ್ಷಿಣ ಕನ್ನಡ ಮುಸ್ಲಿಂ ಸಂಘಟನೆಗಳ ಒಕ್ಕೂಟ ಸಿಡಿದೆದ್ದಿದೆ. ಆದರೆ ಇನ್ನೊಂದೆಡೆ ಬಿಜೆಪಿ ಪೂಜಾರಿ ಹೇಳಿಕೆ ಯನ್ನು ಸ್ವಾಗತಿಸಿದ್ದು, ಪೂಜಾರಿ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ವ್ಯಕ್ತವಾಗುತ್ತಿರುವುದಕ್ಕೆ ಖಂಡನೆ ವ್ಯಕ್ತಪಡಿಸಿದೆ.

ಪೂಜಾರಿ ಅವರನ್ನು ಎನ್ ಕೌಂಟರ್ ನಲ್ಲಿ ಕೊಲ್ಲಬೇಕು ಎಂದು ಬೆದರಿಕೆ ಒಡ್ಡಿದ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಎನ್ ಕೌಂಟರ್ ಮಾಡಿ ಕೊಲ್ಲಬೇಕೆಂದು ಬೆದರಿಕೆಯೊಡ್ಡುತ್ತಿರುವ ಮತಾಂಧರನ್ನು ಪತ್ತೆ ಹಚ್ಚಿ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದ್ದಾರೆ.

ಜನಾರ್ಧನ ಪೂಜಾರಿ ವಿರುದ್ಧ ತಿರುಗಿಬಿದ್ದ ದಕ್ಷಿಣ ಕನ್ನಡ ಮುಸ್ಲಿಂ ಒಕ್ಕೂಟಜನಾರ್ಧನ ಪೂಜಾರಿ ವಿರುದ್ಧ ತಿರುಗಿಬಿದ್ದ ದಕ್ಷಿಣ ಕನ್ನಡ ಮುಸ್ಲಿಂ ಒಕ್ಕೂಟ

ರಾಮಮಂದಿರದ ಬಗ್ಗೆ ವಿರೋಧ ಮಾಡುವವರು ಯಾರೂ ಇಲ್ಲ. ಸುಮ್ಮನೆ ವಿವಾದ ಸೃಷ್ಟಿಸುವುದು ಬೇಡ ಎಂದು ಪೂಜಾರಿಯವರು ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದರು . ಆದರೆ ಅದನ್ನು ಸಹಿಸದ ದೇಶದ್ರೋಹಿಗಳು ಬೆದರಿಕೆ ಒಡ್ಡುವುದು ಸಮಾಜದ ಆತಂಕಕ್ಕೆ ಕಾರಣವಾಗಿದೆ. ಮುಂದೆ ಓದಿ...

 ನಳಿನ್ ಕುಮಾರ್ ಕಟೀಲ್ ಆಗ್ರಹ

ನಳಿನ್ ಕುಮಾರ್ ಕಟೀಲ್ ಆಗ್ರಹ

ರಾಜ್ಯ ಸರ್ಕಾರ ಈ ಪ್ರಕರಣವನ್ನು ಹಗುರವಾಗಿ ಪರಿಗಣಿಸಬಾರದು. ಕರಾವಳಿಯಲ್ಲಿ ಬೇರುಬಿಡಲು ಯತ್ನಿಸುತ್ತಿರುವ ದೇಶದ್ರೋಹಿಗಳನ್ನು ಹತ್ತಿಕ್ಕಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.

 ಜನಾರ್ಧನ ಪೂಜಾರಿಯನ್ನು ಎನ್ ಕೌಂಟರ್ ನಲ್ಲಿ ಕೊಲ್ಲಬೇಕು, ವೈರಲ್ ಆದ ವಾಯ್ಸ್ ಮೆಸೇಜ್ ಜನಾರ್ಧನ ಪೂಜಾರಿಯನ್ನು ಎನ್ ಕೌಂಟರ್ ನಲ್ಲಿ ಕೊಲ್ಲಬೇಕು, ವೈರಲ್ ಆದ ವಾಯ್ಸ್ ಮೆಸೇಜ್

 ಕಾಂಗ್ರೆಸ್ ನಿಂದ ಉಚ್ಛಾಟಿಸಿ

ಕಾಂಗ್ರೆಸ್ ನಿಂದ ಉಚ್ಛಾಟಿಸಿ

ಈ ನಡುವೆ ಪೂಜಾರಿ ಅವರಿಗೆ ಬೆದರಿಕೆ ಒಡ್ಡಿದ ವ್ಯಕ್ತಿಯ ಇನ್ನೊಂದು ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತನ್ನನ್ನು ಹಮೀದ್ ಪುತ್ತೂರು ಎಂದು ಪರಿಚಯಿಸಿ ಕೊಂಡಿದ್ದಾನೆ. ಎನ್ ಕೌಂಟರ್ ಪದ ಬಳಸಿದ್ದನ್ನು ತೆಗೆದು ಹಾಕಿ. ಅದನ್ನು ಬಿಟ್ಟು ಉಲ್ಲೇಖಿಸಿದ ಇತರ ವಿಷಯಗಳಿಗೆ ನಾನು ಬದ್ದ. ಪೂಜಾರಿ ಅವರನ್ನು ಈ ಕೂಡಲೇ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಬೇಕೆಂದು ಒತ್ತಾಯಿಸಿದ್ದಾನೆ.

 ರಾಮ ಮಂದಿರ ವಿಚಾರದಲ್ಲಿ ರಾಜಕೀಯ ಬೇಡ: ಬಿ.ಜನಾರ್ಧನ ಪೂಜಾರಿ ರಾಮ ಮಂದಿರ ವಿಚಾರದಲ್ಲಿ ರಾಜಕೀಯ ಬೇಡ: ಬಿ.ಜನಾರ್ಧನ ಪೂಜಾರಿ

 ಮತೊಮ್ಮೆ ಉಲ್ಲೇಖ

ಮತೊಮ್ಮೆ ಉಲ್ಲೇಖ

ಜನಾರ್ಧನ ಪೂಜಾರಿ ಆರ್ ಎಸ್ಎಸ್ ಜೊತೆಗೆ ನಂಟು ಹೊಂದಿದ್ದಾರೆ. ಅವರು ಕಾಂಗ್ರೆಸ್ ನಲ್ಲಿ ಸೋಲಲು ಇದೇ ವರ್ತನೆ ಕಾರಣ. ರಾಮ ಮಂದಿರ ಪರವಾಗಿ ಮಾತನಾಡಿ ಬಿಜೆಪಿ ಮತ್ತು ಆರ್ ಎಸ್ಎಸ್ ಜೊತೆಗಿನ ನಂಟನ್ನು ಬಹಿರಂಗಪಡಿಸಿದೆ ಎಂದು ಹಮೀದ್ ಪುತ್ತೂರು ಮತೊಮ್ಮೆ ಉಲ್ಲೇಖಿಸಿದ್ದಾನೆ.

 ಪೂಜಾರಿ ವಿರುದ್ಧ ಕಿಡಿಕಾರಿದ್ದ

ಪೂಜಾರಿ ವಿರುದ್ಧ ಕಿಡಿಕಾರಿದ್ದ

ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆಡಿಯೋ ಕ್ಲಿಪ್ ನಲ್ಲಿ ಹಮೀದ್ ಪುತ್ತೂರು ಪೂಜಾರಿ ವಿರುದ್ಧ ಕಿಡಿಕಾರಿದ್ದ . ರಾಮ ಮಂದಿರದ ಪರ ಹೇಳಿಕೆ ನೀಡಿದ ಜನಾರ್ಧನ ಪೂಜಾರಿ ಯಂತಹ ವ್ಯಕ್ತಿಯನ್ನು ದೇಶದಲ್ಲಿ ಬದುಕಲು ಬಿಡಬಾರದು. ಎನ್ ಕೌಂಟರ್ ನಲ್ಲಿ ಸಾಯಿಸಬೇಕು. ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದ.

English summary
On December 02 Mangaluru Congress leader Janardhana Poojary stated that Ram Mandir will be built for sure. But an unknown person threaten Poojary in social media. Voice record of this viral in social media. Now BJP supported Poojary on Ram Mandir statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X