ತಾಕತ್ ಇದ್ದರೆ ಸುನ್ನತ್ ನಿಷೇಧ ಮಾಡಿ: ಸಿದ್ದುಗೆ ಈಶ್ವರಪ್ಪ ಸವಾಲ್

By: ಕಿರಣ್ ಸಿರ್ಸಿಕರ್
Subscribe to Oneindia Kannada

ನವೆಂಬರ್ 11, ಮಂಗಳೂರು: ಬಂಟ್ವಾಳ ದಲ್ಲಿ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆ ಬಿಸಿರೋಡ್ ಬಳಿ ಮೈದಾನದಲ್ಲಿ ಕಾರ್ಯಕ್ರಮ ದಲ್ಲಿ ಭಾಗವಹಿದ್ದ ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದ ಗೌಡ, ಆರ್.ಎಸ್.ಎಸ್ ಮುಖಂಡ ಪ್ರಭಾಕರ್ ಭಟ್ ಕಲ್ಲಡ್ಕ, ಸಂಸದೆ ಶೋಭಾಕರಂದ್ಲಾಜೆ, ಈಶ್ವರಪ್ಪ, ಶ್ರೀರಾಮುಲು ಅವರುಗಳು ಸಾಮೂಹಿಕವಾಗಿ ಸಿದ್ದರಾಮಯ್ಯ ಅವರ ಮೇಲೆ ಹರಿಹಾಯ್ದಿದ್ದಾರೆ.

ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ

ಬೆಳಿಗ್ಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಮಾಡಿ ಯಾತ್ರೆ ಪ್ರಾರಂಭಿಸಿದ ಯಡಿಯೂರಪ್ಪ ಮತ್ತು ತಂಡ ಕರಾವಳಿ ಜಿಲ್ಲೆಯಲ್ಲಿ ಅವಿರತ ಯಾತ್ರೆ ನಡೆಸುತ್ತಿದೆ.

ಪುತ್ತೂರಿನ ಮಹಾಲಿಂಗೇಶ್ವರನಿಗೆ ಪೂಜೆ ಸಲ್ಲಿಸಿದ ಯಡಿಯೂರಪ್ಪ

ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದ, ಬಂಟ್ವಾಳದಲ್ಲಿ ನಡೆದ ಪರಿವರ್ತನಾ ರ್ಯಾಲಿ ಕಾರ್ಯಕ್ರಮದಲ್ಲಿ ಬಿ.ಜೆ.ಪಿ ನಾಯಕರಾದ ಶೋಭಾ ಕರಂದ್ಲಾಜೆ, ಸದಾನಂದಗೌಡ, ಈಶ್ವರಪ್ಪ, ಶ್ರೀರಾಮುಲು, ಯಡಿಯೂರಪ್ಪ ಅವರುಗಳು ಅಕ್ಷರಶಃ ಕಾಂಗ್ರೆಸ್ ಸರ್ಕಾರದ ಮೇಲೆ ಹರಿಹಾಯ್ದರು.

ಸಿದ್ದರಾಮಯ್ಯ ಅವರನ್ನು ತಮ್ಮ ಎಲ್ಲ ಟೀಕೆಗಳಿಗೆ ಗುರಿ ಮಾಡಿಕೊಂಡ ಬಿ.ಜೆ.ಪಿ ನಾಯಕರು ಪುಂಖಾನುಪುಂಖವಾಗಿ ಅವರ ಆಡಳಿತ ವೈಖರಿ, ಮತಾಂದತೆ, ಜಾತಿ ಪ್ರಿಯತೆಗಳ ಬಗ್ಗೆ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯದ ಕುರಿತೂ ಮಾತನಾಡಿದ ಬಿ.ಜೆ.ಪಿ ಮುಖಂಡರು ಹಿಂದೂಗಳಿಗೆ ಕರ್ನಾಟಕ ಸುರಕ್ಷಿತವಲ್ಲ ಎಂದರು.

ಯಾವ ಯಾವ ಬಿ.ಜೆ.ಪಿ ನಾಯಕರು ಏನೇನು ಹೇಳಿದರು ತಿಳಿಯಲು ಮುಂದೆ ಓದಿ...

ಕಲ್ಲಡ್ಕ ಪ್ರಭಾಕರ್ ಭಟ್ಟರನ್ನು ಬಂಧಿಸಲು ಷಡ್ಯಂತ್ರ

ಕಲ್ಲಡ್ಕ ಪ್ರಭಾಕರ್ ಭಟ್ಟರನ್ನು ಬಂಧಿಸಲು ಷಡ್ಯಂತ್ರ

ಬಂಟ್ವಾಳ ದಲ್ಲಿ ರಮಾನಾಥ್ ರೈ ಹಿಂದೂಗಳ ಒಡೆದು ಆಳುವ ನೀತಿ ಅನುಸರಿಸಿದ್ದಾರೆ, ಮುಸ್ಲೀಮರ ಓಲೈಕೆಯಲ್ಲಿ ತೊಡಗಿರುವ ರಮಾನಾಥ ರೈ ಅವರು ಕಲ್ಲಡ್ಕ ಪ್ರಭಾಕರ್ ಭಟ್ ಅವರ ಬಂಧನಕ್ಕೆ ಷಡ್ಯಂತ್ರ ಹೂಡಿದ್ದಾರೆ ಎಂದರು. ಆದರೆ ಪ್ರಭಾಕರ್ ಭಟ್ ಮಾಡಿರುವ ತಪ್ಪೇನು ಎಂಬುದನ್ನು ಮೊದಲು ಅವರು ಹೇಳಲಿ ಎಂದು ಶೋಭಾ ಕರಂದ್ಲಾಜೆ ಸವಾಲು ಹಾಕಿದರು.

ಕೆ ಎಸ್ ಈಶ್ವರಪ್ಪ ವಾಗ್ದಾಳಿ

ಕೆ ಎಸ್ ಈಶ್ವರಪ್ಪ ವಾಗ್ದಾಳಿ

ಮೂಡನಂಬಿಕೆ ಕಾಯ್ದೆ ತಂದಿರುವ ಸಿದ್ದರಾಮಯ್ಯವೇ ಅವರು ಮೂಢನಂಬಿಕೆ ವಿರೋಧಿ ಕಾಯಿದೆಯಲ್ಲಿ ಸುನ್ನತ್ ತನ್ನಿ ಎಂದು ಗುಟುರು ಹಾಕಿದವರು ಕೆ.ಎಸ್.ಈಶ್ವರಪ್ಪ. ಅದರಿಮದ ಮುಸ್ಲಿಂರಿಗೆ ಅದರಿಂದ ನೋವಾಗುತ್ತದೆ ಎಂಬ ಕಾರಣಕ್ಕೆ ಸುನ್ನತ್ ಅನ್ನು ಹೊರಗಿಟ್ಟಿರಾ ಎಂದು ಅವರು ಪ್ರಶ್ನೆ ಮಾಡಿದರು. ಡಿಕೆಶಿ ಅವರನ್ನು ಬಿ.ಜೆ.ಪಿಗೆ ಸೇರ್ಪಡೆ ಮಾಡುವ ವಿಚಾರ ಮಾತನಾಡಿದ ಅವರು ಶ್ರಿ ಕೃಷ್ಣನ ಆಣೆ ಭ್ರಷ್ಟ ರಾಜಕಾರಣಿ ಡಿ.ಕೆ.ಶಿವಕುಮಾರ್ ಅವರನ್ನು ಬಿ.ಜೆ.ಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದರು.

'ಸಿದ್ದು ಮೈಯಲ್ಲಿ ಟಿಪ್ಪು ರಕ್ತ'

'ಸಿದ್ದು ಮೈಯಲ್ಲಿ ಟಿಪ್ಪು ರಕ್ತ'

ಹಠಕ್ಕೆ ಬಿದ್ದು ಟಿಪ್ಪು ಜಯಂತಿ ಆಚರಿಸಿದ ಸಿದ್ದರಾಮಯ್ಯ ಅವರ ಮೈಯಲ್ಲಿ ಟಿಪ್ಪು ಸುಲ್ತಾನ್ ರಕ್ತ ಹರೀತಿದೆ ಎಂದವರು ಕೆ.ಎಸ್.ಈಶ್ವರಪ್ಪ. ಅವರು ತಮ್ಮ ಹೆಸರನ್ನು ಟಿಪ್ಪು ಎಂದೇ ಇಟ್ಟುಕೊಳ್ಳುವುದು ಒಳಿತು ಸಿದ್ಧರಾಮಯ್ಯ ರಿಂದ ಕುಲ ಕುಲಕ್ಕೆ ಬೆಂಕಿ ಹಚ್ಚುವ ಕೆಲಸ ಆಗುತ್ತಿದೆ. ಅಭಿವೃದ್ಧಿಯಿಂದ ಜನಗಳ ಮನಸ್ಸನ್ನು ಗೆಲ್ಲಲು ಆಗದವರು ಜಾತಿಯಿಂದ ಗೆಲ್ಲಲು ಹೊರಟಿದ್ದಾರೆ ಎಂದರು.

ಹಿಂದೂಗಳ ಮಾರಣಹೋಮ

ಹಿಂದೂಗಳ ಮಾರಣಹೋಮ

ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಹಿಂದೂ ಕಾರ್ಯಕರ್ತರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಅರಾಜಕತೆ ತಾಂಡವವಾಡುತ್ತಿದೆ, ತಾವುಗಳು ಈ ಬಾರಿ ಬಿ.ಜೆ.ಪಿಗೆ ಮತ ನೀಡುವ ಮೂಲಕ ರೌಡಿ ಸರ್ಕಾರಕ್ಕೆ ಪಾಠ ಕಲಿಸಬೇಕು.

ಕನಸಿನ ಕರ್ನಾಟಕ ರೂಪು ರೇಷೆ

ಕನಸಿನ ಕರ್ನಾಟಕ ರೂಪು ರೇಷೆ

ಮೋದಿ ಅವರು ದೇಶವನ್ನು ಅಭಿವೃದ್ಧಿ ಮಾಡುತ್ತಿದ್ದರೆ. ಸಿದ್ದರಾಮಯ್ಯ ಖಜಾನೆ ಬರಿದು ಮಾಡಿ ರಾಜ್ಯವನ್ನು ದುರವಸ್ಥೆಗೆ ತಳ್ಳಿದ್ದಾರೆ ಎಂದರು. ಜನವರಿ 28ರಂದು ಬೆಂಗಳೂರಿನಲ್ಲಿ ನಡೆಯುವ ಪರಿವರ್ತನಾ ಯಾತ್ರೆಯಲ್ಲಿ ನನ್ನ ಕನಸಿನ ಕರ್ನಾಟಕದ ರೂಪುರೇಷೆಗಳನ್ನು ಹೇಳುತ್ತೇನೆ. ಈಗಲೇ ಹೇಳಿದರೆ ಬುರಡೆ ದಾಸಯ್ಯ ಸಿದ್ದರಾಮಯ್ಯ ಅವರಿಗೂ ನನಗೂ ವ್ಯತ್ಯಾಸ ಉಳಿಯುವುದಿಲ್ಲ ಎಂದು ನಗೆ ಚಟಾಕಿ ಹಾರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP leadres yadiyurappa, Shobha Karandlaje, Eeshwarappa, Shriramulu, Sadanandagowda scoled Sidharamaiha govt in Parivarthana Yathre program held In Bantvala

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ