ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿಗೆ ಆಗಮಿಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ

|
Google Oneindia Kannada News

ಮಂಗಳೂರು, ನವೆಂಬರ್ 14 : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮಂಗಳೂರಿಗೆ ಆಗಮಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಭೆಯಲ್ಲಿ ಪಾಲ್ಗೊಳ್ಳಲು ಅವರು ದಕ್ಷಿಣ ಕನ್ನಡಕ್ಕೆ ಬಂದಿದ್ದಾರೆ.

ಪ್ರಮುಖ ಸುದ್ದಿ: ಆರೆಸ್ಸೆಸ್ ಬೈಠಕ್ ಗಾಗಿ ನ.14ಕ್ಕೆ ಮಂಗಳೂರಿಗೆ ಅಮಿತ್ ಶಾ ಪ್ರಮುಖ ಸುದ್ದಿ: ಆರೆಸ್ಸೆಸ್ ಬೈಠಕ್ ಗಾಗಿ ನ.14ಕ್ಕೆ ಮಂಗಳೂರಿಗೆ ಅಮಿತ್ ಶಾ

ಬುಧವಾರ ರಾತ್ರಿ ವಿಶೇಷ ವಿಮಾನದ ಮೂಲಕ ಅವರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಸಂಜೆ 7 ಗಂಟೆಗೆ ಬಂದಿಳಿಯಬೇಕಾಗಿದ್ದ ಅಮಿತ್ ಶಾ ಅವರಿ 8.30ಕ್ಕೆ ಬಂದರು.

ಅಮಿತ್ ಶಾ ಹೆಸರನ್ನು ಮೊದಲು ಬದಲಿಸಿ: ಮುಖ್ಯಮಂತ್ರಿ ಯೋಗಿಗೆ ಸವಾಲ್ ಅಮಿತ್ ಶಾ ಹೆಸರನ್ನು ಮೊದಲು ಬದಲಿಸಿ: ಮುಖ್ಯಮಂತ್ರಿ ಯೋಗಿಗೆ ಸವಾಲ್

ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ 7 ಶಾಸಕರು, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹಾಗು ಉಡುಪಿಯ ಬಿಜೆಪಿ ಮುಖಂಡರು ಅವರನ್ನು ಸ್ವಾಗತಿಸಿದರು.

BJP chief Amit Shah arrives in Mangaluru, Karnataka

ಹೂಗುಚ್ಛ ನೀಡಿ, ಶಾಲು ಹೊದಿಸಿ ಅಮಿತ್ ಶಾ ಅವರನ್ನು ಸ್ವಾಗತಿಸಲಾಯಿತು. ವಿಮಾನ ನಿಲ್ದಾಣದಿಂದ ನೇರವಾಗಿ ಅವರು ಮಂಗಳೂರಿನ ಮಣ್ಣಗುಡ್ಡದಲ್ಲಿರುವ ಸಂಘ ನಿಕೇತನಕ್ಕೆ ತೆರಳಿದರು.

'ನಕ್ಸಲವಾದವನ್ನು ಬೆಂಬಲಿಸುವವರಿಂದ ಛತ್ತೀಸ್ ಘಡ ಉದ್ಧಾರವಾಗುವುದಿಲ್ಲ' 'ನಕ್ಸಲವಾದವನ್ನು ಬೆಂಬಲಿಸುವವರಿಂದ ಛತ್ತೀಸ್ ಘಡ ಉದ್ಧಾರವಾಗುವುದಿಲ್ಲ'

ಅಮಿತ್ ಶಾ ಆಗಮನದ ಹಿನ್ನಲೆಯಲ್ಲಿ ಸಂಘ ನಿಕೇತನದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಂಘನಿಕೇತನದಲ್ಲಿ ನಡೆಯಲಿರುವ ಆರ್‌ಎಸ್ಎಸ್ ಬೈಠಕ್ ನಲ್ಲಿ ಭಾಗ ವಹಿಸಲು ಅಮಿತ್ ಶಾ ಆಗಮಿಸಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮ‌ ಮಂದಿರ ನಿರ್ಮಾಣ, ಶಬರಿಮಲೆ ಹಾಗೂ ಲೋಕಸಭೆ ಚುನಾವಣೆ, ಉಪ ಚುನಾವಣೆಯಲ್ಲಿ ಬಿಜೆಪಿಗೆ ಆಗಿರುವ ಹಿನ್ನಡೆಗಳ ಕುರಿತು ಬೈಠಕ್ ಚರ್ಚೆಯಾಗುವ ಸಾಧ್ಯತೆ ಇದೆ.

English summary
BJP president Amit Shah arrived at Mangaluru on Wednesday, November 14, 2018. He will participated in RSS meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X