ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಮಾಜಿಕ ಜಾಲತಾಣದಲ್ಲಿ 'ನಳಿನ್ ಹಠಾವೋ' ಚಳವಳಿಗೆ ಬಿಜೆಪಿ ನಾಯಕರ ಕುಮ್ಮಕ್ಕು?

|
Google Oneindia Kannada News

ಮಂಗಳೂರು, ಆಗಸ್ಟ್ 07: ಮುಂಬರುವ 2019 ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಚಟುವಟಿಕೆ ಬಿರುಸುಗೊಳ್ಳುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಾಳಯದಲ್ಲಿ ಲೋಕಸಭಾ ಚುನಾವಣೆಗಾಗಿ ಅಖಾಡ ಸಿದ್ಧಗೊಳ್ಳುತ್ತಿದೆ.

ಕಳೆದ 7 ವರ್ಷಗಳ ಅವಧಿಯಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿರುವ ಬಿಜೆಪಿ ಈ ಬಾರಿಯೂ ಗೆಲ್ಲುವ ತವಕದಲ್ಲಿದೆ. ಕಳೆದೆರಡು ಅವಧಿಯಿಂದ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. 1991,1996 ,1998ಹಾಗು 1999 ರಲ್ಲಿ ಬಿಜೆಪಿಯಿಂದ ಧನಂಜಯ ಕುಮಾರ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.

ಮೌನಕ್ಕೆ ಶರಣಾದ ಜನಾರ್ಧನ ಪೂಜಾರಿ: ಇದು ರಾಜಕೀಯ ನಿವೃತ್ತಿ ಸೂಚನೆಯೇ?ಮೌನಕ್ಕೆ ಶರಣಾದ ಜನಾರ್ಧನ ಪೂಜಾರಿ: ಇದು ರಾಜಕೀಯ ನಿವೃತ್ತಿ ಸೂಚನೆಯೇ?

ನಂತರ 2004 ರಲ್ಲಿ ನಡೆದ ಚುನಾವಣೆಯಲ್ಲಿ ಡಿವಿ ಸದಾನಂದ ಗೌಡ ಗೆಲುವು ಸಾಧಿಸಿದ್ದರು. 2009 ಮತ್ತು 2014 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ನಳಿನ್ ಕುಮಾರ್ ಕಟೀಲ್ ಗೆಲುವು ಸಾಧಿಸುತ್ತಿದ್ದಾರೆ. ಈ ಬಾರಿಯೂ ಬಿಜೆಪಿ ನಳಿಸ್ ಕುಮಾರ್ ಕಟೀಲ್ ಅವರನ್ನೇ ಕಣಕ್ಕಿಳಿಸುವ ಉತ್ಸುಕತೆಯಲ್ಲಿದೆ.

ಆದರೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪಾಳಯದಲ್ಲೇ ನಳಿನ್ ವಿರುದ್ಧ ಅಪಸ್ವರ ಕೇಳಿಬರುತ್ತಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತ ಅತೃಪ್ತರು ನಳಿನ್ ಕುಮಾರ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ನಳಿನ್ ಅವರಿಗೆ ನೊಂದ ಕುವೈತ್-ಮಂಗಳೂರು ಪ್ರಯಾಣಿಕರ ಪತ್ರನಳಿನ್ ಅವರಿಗೆ ನೊಂದ ಕುವೈತ್-ಮಂಗಳೂರು ಪ್ರಯಾಣಿಕರ ಪತ್ರ

ಕಳೆದ ಬಾರಿ ತಮಗೆ ಟಿಕೆಟ್ ತಪ್ಪಲು ನಳಿನ್ ಕುಮಾರ್ ಕಟೀಲ್ ಕಾರಣ ಎಂದಿರುವ ಈ ಅತೃಪ್ತರು ಒಟ್ಟಾಗಿ ಮುಂಬರುವ ಲೋಕಸಭಾ ಚುನಾವಣೆಗೆ ನಳಿನ್ ಗೆ ಟಿಕೆಟ್ ಕೈ ತಪ್ಪಿಸಲು ಭಾರೀ ಪ್ರಯತ್ನಗಳು ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

 ಸಂಘಪರಿವಾರದ ನಾಯಕರ ಕುಮ್ಮಕ್ಕು

ಸಂಘಪರಿವಾರದ ನಾಯಕರ ಕುಮ್ಮಕ್ಕು

ಮುಂಬರುವ ಲೋಕಸಾಭಾ ಚುನಾವಣೆ ಈಗಾಗಲೇ ತಾಲೀಮು ಆರಂಭಿಸಿರುವ ಬಿಜೆಪಿ ಗೆಲ್ಲುವ ತವಕದಲ್ಲಿದೆ. ಜಿಲ್ಲೆಯಲ್ಲಿ ಮೋದಿ ಅವರ ಪರವಾಗಿರುವ ಅಲೆ ಮತ್ತು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಭಾರೀ ಗೆಲುವು ಸಾಧಿಸಿರುವ ಬಿಜೆಪಿ ಮುಂದಿನ ಲೋಕ ಸಭಾ ಚುನಾವಣೆಗೆ ನಳಿನ್ ಅವರನ್ನೇ ಕಣಕ್ಕಿಳಿಸುವ ತವಕದಲ್ಲಿದೆ.
ಆದರೆ ನಳಿನ್ ವಿರುದ್ಧ ಒಳಗಿಂದೊಳಗೆ ಕತ್ತಿಮಸೆಯುತ್ತಿರು ಕೆಲ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದ ಮೂಲಕ ನಳಿನ್ ವಿರುದ್ಧ ಅಪಸ್ವರ ಎತ್ತುತ್ತಿದ್ದಾರೆ. ಒಂದೆಡೆ ಕಾಂಗ್ರೆಸ್ ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿ, ಮಂಗಳೂರಿನ ಪಂಪ್ ವೆಲ್ ಹಾಗು ತೊಕ್ಕೊಟ್ಟು ಎಂಬಲ್ಲಿ ನಿರ್ಮಾಣವಾಗ ಬೇಕಾಗಿದ್ದ ಫೈ ಓವರ್ ಕಾಮಗಾರಿ ವಿಳಂಬಕ್ಕೆ ನಳಿನ್ ಅವರನ್ನು ಗುರಿಯಾಗಿಸಿ ಭಾರೀ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಕೆಲ ಬಿಜೆಪಿ ಹಾಗು ಸಂಘಪರಿವಾರದ ನಾಯಕರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.

 ಕಂಗೆಟ್ಟ ದಕ್ಷಿಣ ಕನ್ನಡ ಬಿಜೆಪಿ ನಾಯಕರು

ಕಂಗೆಟ್ಟ ದಕ್ಷಿಣ ಕನ್ನಡ ಬಿಜೆಪಿ ನಾಯಕರು

ಪಂಪ್ ವೆಲ್ ಹಾಗು ತೊಕ್ಕೊಟ್ಟಿನಲ್ಲಿ ನಿರ್ಮಾಣವಾಗ ಬೇಕಾಗಿದ್ದ ಫೈ ಓವರ್ ವಿಳಂಬ ಕಾಮಗಾರಿಯ ಹೊಣೆಯನ್ನು ನಳಿನ್ ಕುಮಾರ್ ಕಟೀಲ್ ತಲೆಗೆ ಕಟ್ಟಲು ಕೆಲ ಬಿಜೆಪಿ ನಾಯಕರೇ ಹೊರಟಿದ್ದಾರೆ. ಕಳೆದ 10 ವರ್ಷದಲ್ಲಿ ಸಂಸದರಾಗಿ ನಳಿನ್ ಕುಮಾರ ಕಟೀಲ್ ಸಾಧನೆ ಶೂನ್ಯ ಎಂದು ಬಿಂಬಿಸಲಾಗುತ್ತಿದೆ.

ಬಿಜೆಪಿ ಪಕ್ಷದ ಈ ಆಂತರಿಕ ಕಚ್ಚಾಟ ಈಗ ಬೀದಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಲಾಗಿರುವ 'ಬಿಜೆಪಿ ಬಚಾವೋ ನಳಿನ್ ಹಠಾವೋ' ಚಳುವಳಿಯ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ ಎಂದು ಶಂಕಿಸಲಾಗಿದೆ. ಫೆಸ್ ಬುಕ್, ಇಸ್ಟಗ್ರಾಂ, ಟ್ವಿಟರ್ , ಟ್ರಾಲ್ ಮೂಲಕ ನಳಿನ್ ವಿರುದ್ಧ ಸಾರಲಾಗಿರುವ ಸಮರ ದಕ್ಷಿಣ ಕನ್ನಡ ಬಿಜೆಪಿ ನಾಯಕರನ್ನು ಕಂಗೆಡಿಸಿದೆ.

 ಕಾಂಗ್ರೆಸ್ ಮೇಲೆ ಆರೋಪ

ಕಾಂಗ್ರೆಸ್ ಮೇಲೆ ಆರೋಪ

ಈ ನಡುವೆ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ನಳಿನ್ ಪರವಾಗಿ ನಿಂತಿರುವ ಕೆಲ ಬಿಜೆಪಿ ಮುಖಂಡರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋತು ಸುಣ್ಣವಾದ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನದಲ್ಲಿದೆ ಎಂದು ಆರೋಪಿಸಿದ್ದಾರೆ.

 ಕಿಡಿಕಾರಿದ ಬಿಜೆಪಿ

ಕಿಡಿಕಾರಿದ ಬಿಜೆಪಿ

ನಂ1 ಸಂಸದ ಎಂದೇ ಖ್ಯಾತಿ ಪಡೆದಿರುವ ಸಂಸದ ನಳಿನ್ ಕುಮಾರ್ ಕಟೀಲ್ ರವರ ವಿರುದ್ಧ ಜನರನ್ನು ಎತ್ತಿ ಕಟ್ಟುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಬಿಜೆಪಿ ಮುಖಂಡರು ಕಿಡಿಕಾರಿದ್ದಾರೆ.

ಸಂಸದರು ಜಿಲ್ಲೆಗೆ ಹಾಗೂ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿಯನ್ನು ಮಾಡಿದ್ದು, ಭ್ರಷ್ಟಾಚಾರ ರಹಿತ ಸಂಸದನೆಂದು ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಆದರೆ ಅವರ ಅಭಿವೃದ್ದಿಯನ್ನು ಸಹಿಸದ ಕಾಂಗ್ರೆಸ್ ನಳಿನ್ ಕುಮಾರ್ ಕಟೀಲ್ ವಿರುದ್ಧ ಅಪಪ್ರಚಾರವನ್ನು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

English summary
BJP Bachavo Nalin Hatavo campaign against MP Nalin Kumar started in social media. It is said that some of the rebel BJP and Sanghaparivar leaders joined hands with troll campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X