'ಸುಖ ಮತ್ತು ದುಃಖ ಸಮಾನವಾಗಿ ಸ್ವೀಕರಿಸಲು ಸಾಹಿತ್ಯ ಕಲಿಸುತ್ತೆ'

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್, 24 : 'ಸುಖ ಮತ್ತು ದುಃಖವನ್ನು ಸಮಾನವಾಗಿ ಸ್ವೀಕರಿಸಲು ಸಾಹಿತ್ಯ ಕಲಿಸಿಕೊಡುತ್ತದೆ' ಎಂದು ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಹೇಳಿದರು.

ಶುಕ್ರವಾರ ಸಂಜೆ ಪುರಭವನದಲ್ಲಿ ಬಿಳಿಚುಕ್ಕೆ ಪ್ರಕಾಶನ ಪ್ರಕಟಿಸಿದ ನಾಲ್ಕು ಹೊಸ ಕೃತಿಗಳ ಪುಸ್ತ ಬಿಡುಗಡೆ ವೇಳೆ ಮುಖ್ಯ ಅತಿಥಿಯಾಗಿ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆಅವರು ಮಾತನಾಡಿದರು.

ದಿವಂಗತ ಛಾಯಾ ಪತ್ರಕರ್ತ, ಕವಿ ಅಹ್ಮದ್ ಅನ್ವರ್ ಅವರ 'ಪಯಣಿಗನ ಪದ್ಯಗಳು', ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರ್ ರ ' ಬಡ್ಡೂರರ ಸದ್ದುಗಳು' ಎಂಬ ಕವನ ಸಂಕಲನ, ಅನುಪಮ ಮಹಿಳಾ ಮಾಸಿಕದ ಸಂಪಾದಕಿ ಶಹನಾಝ್ ಎಂ.ಅವರ 'ನಿನಗಾಗಿ' ಕಾದಂಬರಿ ಹಾಗೂ ಸನ್ಮಾರ್ಗ ವಾರಪತ್ರಿಕೆ ಸಂಪಾದಕ ಎ.ಕೆ.ಕುಕ್ಕಿಲರ 'ಸರಸ ಸಲ್ಲಾಪ' ಲಲಿತ ಪ್ರಬಂಧ ಎಂಬ ಕೃತಿಗಳು ಬಿಡುಗಡೆಗೊಂಡವು. [ಅಂಥವರು ಬರೆಯಲು ಕುಳಿತಾಗ ಅವರ ಕಸುವೇ ಕವಿತೆಯಾಗುತ್ತದೆ]

Four New Novels Book Released By Bilichukke publication

ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸತ್ಯನಾರಾಯಣ ಮಲ್ಲಿಪಟ್ಟಣ, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ , ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್., ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಕೆ.ಎ. ರೋಹಿಣಿ ಶುಭ ಹಾರೈಸಿದರು.

ಗಾಯನಗೋಷ್ಠಿ: ಇದೇ ವೇಳೆ ಕಾರ್ಯಕ್ರಮದಲ್ಲಿ‌ ಮುಹಮ್ಮದ್ ಬಡ್ಡೂರು, ನಾದ ಮಣಿನಾಲ್ಕೂರು, ಬಶೀರ್ ಅಹ್ಮದ್ ಕಿನ್ಯಾ, ಉಮರ್ ಮೌಲವಿ ಮಡಿಕೇರಿ, ಅಝರುಲ್ಲಾ ಖಾಸಿಮಿ, ಸಲೀಮ್ ಬೋಳಂಗಡಿ ಗಾಯನಗೋಷ್ಟಿ ನಡೆಸಿಕೊಟ್ಟರು.

ಬಿಳಿಚುಕ್ಕೆ ಪ್ರಕಾಶನದ ಕಾರ್ಯದರ್ಶಿ ಶೌಕತ್ ಅಲಿ ಸ್ವಾಗತಿಸಿದರು. ಅಧ್ಯಕ್ಷ ಎಸ್.ಎಂ.ಮುತ್ತಲಿಬ್ ವಂದಿಸಿದರು. ಬಿ.ಎ.ಮುಹಮ್ಮದಾಲಿ ಕಾರ್ಯಕ್ರಮ ನಿರೂಪಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
bilichukke publication released Four new novels books at town hall, Mangaluru on friday, December 23.
Please Wait while comments are loading...