ವಿದೇಶದಿಂದ ಊರಿಗೆ ಬಂದ ಯುವಕನ ಬಾಳಲ್ಲಿ ಸಾವಿನಾಟ..!

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ. 02 : ಆತ ಎರಡು ದಿನಗಳ ಹಿಂದಷ್ಟೇ ವಿದೇಶದಿಂದ ಊರಿಗೆ ಬಂದಿದ್ದ. ಮನದಲ್ಲಿ ನೂರಾರು ಕನಸುಗಳಿದ್ದವು. ಆದರೆ, ವಿಧಿಯಾಟ ಬೇರೆಯಾಗಿತ್ತು.

ಹೌದು. ಭಾನುವಾರ ಸಂಜೆ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಸಮೀಪ ಇರುವ ಕೊರಂಜ ಶಾಲೆಯ ಬಳಿ ಜೀಪು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ.

ಮೃತ ಯುವಕನನ್ನ ಬಂಟ್ವಾಳ ತಾಲೂಕಿನ ಪೆರ್ನೆ ಬಿಳಿಯೂರು ಬಾನೊಟ್ಟು ನಿವಾಸಿ ಅಬೂಬಕ್ಕರ್ ಅವರ ಪುತ್ರ ಸರಫುದ್ಧೀನ್ (26) ಎಂದು ಗುರುತಿಸಲಾಗಿದೆ.

Bike rider killed in belthangady road accident

ಘಟನೆ ಹೇಗೆ ನಡೆಯಿತು..? ಗುರುವಾಯನಕೆರೆಯಿಂದ ಉಪ್ಪಿನಂಗಡಿ ಕಡೆಗೆ ಸರಫುದ್ದೀನ್ ತಮ್ಮ ಬೈಕಿನಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಜೀಪು ಅತಿಯಾದ ವೇಗದಲ್ಲಿ ಬಂದು ಬೈಕಿಗೆ ಡಿಕ್ಕಿ ಹೊಡೆದಿದೆ.

Bike rider killed in belthangady road accident

ಗಂಭೀರವಾಗಿ ಗಾಯಗೊಂಡ ಸರಫುದ್ದೀನ್ ರನ್ನ ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಮೃತಪಟ್ಟಿದ್ದಾರೆ. ಸರಫುದ್ದೀನ್ ಅವರು ಎರಡು ದಿನಗಳ ಹಿಂದೆ ವಿದೇಶದಿಂದ ಬಂದಿದ್ದರು ಎನ್ನಲಾಗಿದೆ. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bantwal taluk based Sharafudheen killed in road accident at Belthangady taluk Gerugate Sunday evening. Jeep crashed into Sharafudheen bike.
Please Wait while comments are loading...