ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದೇಶಿ ಕರೆನ್ಸಿ ಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ ಭಟ್ಕಳ ವ್ಯಕ್ತಿ ಬಂಧನ

By ಅನುಷಾ ರವಿ
|
Google Oneindia Kannada News

ಮಂಗಳೂರು, ಜನವರಿ. 05 : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಾರ ಪ್ರಮಾಣದ ವಿದೇಶಿ ಕರೆನ್ಸಿ ಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ ಭಟ್ಕಳ ಮೂಲದ ವ್ಯಕ್ತಿಯೋರ್ವನನ್ನು ಗುರುವಾರ ಕಂದಾಯ ಗುಪ್ತಚರ ಅಧಿಕಾರಿಗಳು ಬಂಧಿಸಿದ್ದಾರೆ.

ಅಪಾರ ಪ್ರಮಾಣದ ವಿದೇಶಿ ಕರೆನ್ಸಿಯೊಂದಿಗೆ ದುಬೈಗೆ ತೆರಳಲು ಮುಂದಾಗಿದ್ದ ಭಟ್ಕಳ ಮೂಲದ ಮೊಹಮ್ಮದ್ ಫಾರೂಕ್ ಅರ್ಮರ್ (51) ಎಂಬಾತನನ್ನು ಬಂಧಿಸಿದ್ದಾರೆ.

ಬಂಧಿತನಿಂದ ವಿವಿಧ ದೇಶಗಳ ಭಾರತೀಯ ಮೌಲ್ಯದ ಸುಮಾರು 25,07 ಲಕ್ಷ ರು ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ. [ಮಂಗಳೂರಲ್ಲಿ ಶಂಕಿತ ಐಎಸ್ ಐಎಸ್ ಉಗ್ರನ ಬಂಧನ, ಬಿಡುಗಡೆ]

Bhatkal man arrested with foreign currency in Mangaluru

ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಪಡಿಸಿದಾಗ ಬಿಸ್ಕೆಟ್ ಮತ್ತು ಚಾಕಲೇಟ್ ಪ್ಯಾಕೆಟ್‌ಗಳಲ್ಲಿ ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ವಿದೇಶಿ ಕರೆನ್ಸಿ ಪತ್ತೆಯಾಗಿದೆ.

ಅಮೆರಿಕದ ಡಾಲರ್‌, ಬ್ರಿಟಿಷ್ ಪೌಂಡ್ಸ್, ಯುರೋಸ್ ಹಾಗೂ ಅರಬ್‌ ರಾಷ್ಟ್ರಗಳ ನೋಟುಗಳನ್ನು ಭಾರತೀಯ ಮೌಲ್ಯದ ಸುಮಾರು 25,07 ಲಕ್ಷ ರು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ.

English summary
Officials from the revenue intelligence department detained a 51-year-old man at Mangaluru international airport on Thursday morning for illegal possession of foreign currencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X