ಚಿತ್ರಗಳು : ದಕ್ಷಿಣ ಕನ್ನಡದಲ್ಲಿ ಬಂದ್ ಬಿಸಿ ಹೇಗಿದೆ?

Posted By:
Subscribe to Oneindia Kannada

ಮಂಗಳೂರು, ಸೆಪ್ಟೆಂಬರ್ 02 : ಕೇಂದ್ರ ಸರ್ಕಾರದ ರಸ್ತೆ ಸುರಕ್ಷತಾ ಕಾಯ್ದೆ ವಿರೋಧಿಸಿ, ಬೆಲೆ ಏರಿಕೆ ನಿಯಂತ್ರಣ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಸೆಪ್ಟೆಂಬರ್‌ 2ರಂದು ದೇಶವ್ಯಾಪಿ ಮುಷ್ಕರಕ್ಕೆ ನಡೆಸುತ್ತಿವೆ.

ಮಂಗಳೂರು ನಗರದಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಡೀಲ್, ಸುರತ್ಕಲ್ ಮತ್ತು ಕುತ್ತಾರಿನಲ್ಲಿ ಬಂದ್ ಬೆಂಬಲಿಸಿ ರಸ್ತೆಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ನಗರದ ವಿವಿಧೆಡೆ 6ಕ್ಕೂ ಹೆಚ್ಚು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.[ಭಾರತ್ ಬಂದ್ : ಕ್ಷಣ-ಕ್ಷಣದ ಮಾಹಿತಿ]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ. ಆದ್ದರಿಂದ, ವಿಧ್ಯಾರ್ಥಿಗಳು ಪರದಾಡುವ ಸ್ಥಿತಿ ಉಂಟಾಗಿದೆ. ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಬೆರಳೆಣಿಕೆಯ ಆಟೋಗಳು ಸಂಚಾರ ನಡೆಸುತ್ತಿವೆ.[ಸೆ. 2ರ ಕಾರ್ಮಿಕ ಸಂಘಟನೆಗಳ ಮುಷ್ಕರ ಯಾಕೆ?]

ಆದರೆ, ಬಂಟ್ವಾಳದಲ್ಲಿ ಮಾತ್ರ ಆಟೋ ಹಾಗೂ ಬಸ್ಸುಗಳು ಸಂಚಾರ ನಡೆಸುತ್ತಿವೆ. ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್‌ಗೆ ಮಂಗಳೂರು ನಗರದಲ್ಲಿಯೂ ಉತ್ತಮ ಬೆಂಬಲ ಸಿಕ್ಕಿದೆ. .....

ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಕಾರ್ಮಿಕ ಸಂಘಟನೆಗಳು ಸೆಪ್ಟೆಂಬರ್‌ 2ರಂದು ಕರೆ ನೀಡಿರುವ ದೇಶವ್ಯಾಪಿ ಮುಷ್ಕರಕ್ಕೆ ಮಂಗಳೂರು ನಗರದಲ್ಲಿ ಉತ್ತಮ ಬೆಂಬಲ ಸಿಕ್ಕಿದೆ.

ಬಸ್ಸುಗಳಿಗೆ ಕಲ್ಲು

ಬಸ್ಸುಗಳಿಗೆ ಕಲ್ಲು

ಮಂಗಳೂರಿನಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ನಗರದ ವಿವಿಧೆಡೆ 6ಕ್ಕೂ ಹೆಚ್ಚು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

ಬಸ್ಸುಗಳು ಜಖಂ

ಬಸ್ಸುಗಳು ಜಖಂ

ಬೆಂಗಳೂರಿಗೆ ತೆರಳಿದ್ದ ಐರಾವತ ಬಸ್, ಕುಂದಾಪುರಕ್ಕೆ ಪ್ರಯಾಣ ಬೆಳೆಸಿದ್ದ ರಾಜಹಂಸ ಬಸ್, ದುರ್ಗಾಂಬ ಸೇರಿದಂತೆ ಎರಡು ಖಾಸಗಿ ಬಸ್, ಸಹ್ಯಾದ್ರಿ ಮತ್ತು ಮಣಿಪಾಲ್ ಸ್ಕೂಲ್ ಗಳ ತಲಾ ಒಂದು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

ಟೈರ್‌ಗಳಿಗೆ ಬೆಂಕಿ

ಟೈರ್‌ಗಳಿಗೆ ಬೆಂಕಿ

ಪಡೀಲ್, ಸುರತ್ಕಲ್ ಮತ್ತು ಕುತ್ತಾರಿನಲ್ಲಿ ಬಂದ್ ಬೆಂಬಲಿಸಿ ರಸ್ತೆಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಲಾಗಿದೆ.

ಅಂಗಡಿಗಳು ಬಂದ್

ಅಂಗಡಿಗಳು ಬಂದ್

ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಬಂದ್ ನಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಜನರು ಪರದಾಡುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The nationwide bandh has begun with a negative note in Mangaluru city.
Please Wait while comments are loading...